
ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ತಾಂತ್ರಿಕತೆ ಬದಲಾದಂತೆಲ್ಲ ಜಗತ್ತು ಅದೆಷ್ಟೋ ಬದಲಾವಣೆಗಳನ್ನ ಕಾಣುತ್ತಿದೆ ಆಧುನಿಕ ತಾಂತ್ರಿಕತೆ ಮತ್ತು ತಂತ್ರಗಾರಿಕೆಯಿಂದ ವಿಜ್ಞಾನ ಮುಂದುವರೆದ ಪರಿಣಾಮ ಜಗತ್ತು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಹಾ ಸಾಕಷ್ಟು ಬದಲಾವಣೆಗಳನ್ನ ಕಾಣುತ್ತಿದೆ,ಅದರಂತೆ ಕೃಷಿಯಲ್ಲೂ ಕೂಡ ತಾಂತ್ರಿಕತೆ ಎದ್ದು ಕಾಣುತ್ತಿದೆ, ಆಧುನಿಕ ಕೃಷಿಪದ್ದತಿ ಬದಲಾಗುತ್ತಿದೆ.ಮುಂದಿನ ದಿನ ಮಾನಗಳ ತಾಂತ್ರಿಕತೆಯ ಯುಗದಲ್ಲಿ ಮನುಷ್ಯ ಮಾಡುವ ಎಲ್ಲಾ ಕೆಲಸಗಳನ್ನು ರೋಬೋ ಮಾಡುತ್ತದೆ ಎಂದರೆ ನಾವು ನಂಬಲೇ ಬೇಕು ಅಷ್ಟರ ಮಟ್ಟಿಗೆ ಜಗತ್ತು ಆಧುನೀಕತೆಯು ಯುಗಕ್ಕೆ ಕಾಲಿರಿಸಿದೆ.ಕೃಷಿ ಕ್ಷೇತ್ರದಲ್ಲೂ ಸಹಾ ಅಷ್ಟೇ, ಕಳೆದ ೧೫-೨೦ ವರ್ಷಗಳ ಹಿಂದೆ ಜಮೀನಿನ ಪ್ರತಿಯೊಂದು ಕೆಲಸಗಳನ್ನೂ ಸಹಾ ಮನುಷ್ಯನೇ ಮಾಡುತ್ತಿದ್ದ ಆದರೆ ಜಗತ್ತು ಬದಲಾದಂತೆ ತಾಂತ್ರಿಕತೆ ಬೆಳೆದು ಬಂದAತೆ ಮನುಷ್ಯ ಮಾಡುವ ಅದೆಷ್ಟೋ ಕೆಲಸಗಳನ್ನ ಯಂತ್ರಗಳು ಇಂದು ಮಾಡುತ್ತಿವೆ.
ಕೃಷಿ ಕ್ಷೇತ್ರದಲ್ಲಿ ಇತ್ತೀಚಿಗೆ ಸಾಕಷ್ಟು ಬೆಳವಣಿಗೆಗಳು ಆಧುನಿಕ ತಂತ್ರಗಾರಿಗಳು ಬಂದಿವೆ ಎಂಬುದು ಎಲ್ಲರಿಗೂ ಸರ್ವೆ ಸಾಮಾನ್ಯವಾಗಿ ಗೊತ್ತಿರುವ ವಿಚಾರವೇ ಸರಿ,ರೈತ ಬೆಳ ಬೆಳೆಯಬೇಕಾದರೆ ಸಾಕಷ್ಟು ವಿವಿಧ ಸಾವಯವ ಮತ್ತಿ ರಾಸಾಯನಿಕ ಗೊಬ್ಬರಗಳನ್ನ ಹಾಕಿ ಬೆಳೆತೆಗೆಯುತ್ತಾನೆ ಹಾಗೆಯೇ ಪ್ರಸ್ತುತವಾಗಿ ರೈತನಿಗೆ ನ್ಯಾನೋ ಯೂರಿಯಾ ಎಂಬುದು ರೈತನಿಗೆ ಪರಿಚಯವಾಗುತ್ತಿದೆ.ನ್ಯಾನೋ ಯೂರಿಯಾ ಎಂದರೇನು, ಇದೇ ಗೊಬ್ಬರವನ್ನ ಏಕೆ ಬಳಸಬೇಕು ಇದರಿಂದ ರೈತನಿಗೆ ಹಾಗುವ ಅನುಕೂಲವಾದರೂ ಏನು ಎಂಬುದನ್ನು ಸ್ವಲ್ವ ಮಾಹಿತಿಯನ್ನ ತಿಳಿದು ಕೊಳ್ಳೋಣ ಅಲ್ಲವೇ..
೨೦೨೫-೨೬ನೇ ಸಾಲಿನ ಮುಂಗಾರು-ಹAಗಾಮಿನಲ್ಲಿ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ರೈತರು ವಿವಿಧ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಅಲ್ಲದೇ, ವಿವಿಧ ಬೆಳೆಗಳಿಗೆ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡುತ್ತಿದ್ದು, ಹರಳು ರೂಪದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಕಸಬಾ ಹೋಬಳಿ ಗುತ್ತಿಕಟ್ಟೆ ಗ್ರಾಮದಲ್ಲಿ ನ್ಯಾನೋ ಯೂರಿಯಾ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಪ್ರಾತ್ಯಕ್ಷತೆ ವೀಕ್ಷಿಸಿ ರೈತರನ್ನು ಕುರಿತು ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ ರೈತರು ಹೆಚ್ಚು ಸಾವಯವ ಕೃಷಿಗೆ ಅವಲಂಬಿತರಾಗಿಬೇಕು. ಸಾವಯವ ಕೃಷಿಯು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಅದರ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕೀಟಗಳು ಮತ್ತು ರೋಗಗಳನ್ನು ನಿಯಂತ್ರಿಸಲು ನೈಸರ್ಗಿಕ ವಿಧಾನಗಳನ್ನು ಬಳಕೆ ಮಾಡಿಕೊಳ್ಳಿ. ನೈಸರ್ಗಿಕ ಸಂಪನ್ಮೂಲಗಳಾದ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರವನ್ನು ಬಳಸಿ. ಸಾವಯವ ಕೃಷಿಯು ಪರಿಸರಕ್ಕೆ ಹಾನಿಕಾರಕವಲ್ಲದ ಮತ್ತು ಸುಸ್ಥಿರ ಕೃಷಿ ಪದ್ಧತಿಯಾಗಿದ್ದು, ಈ ಪದ್ಧತಿಯಿಂದ ಬೆಳೆದ ಆಹಾರವು ರಾಸಾಯನಿಕ ಮುಕ್ತ ಮತ್ತು ಆರೋಗ್ಯಕರವಾಗಿರುತ್ತದೆ. ಇದು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸುತ್ತದೆ. ಅಲ್ಲದೇ, ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ರೈತರು ಬೆಳೆದ ಬೆಳೆಗಳ ಆದಾಯವನ್ನು ಕೂಡ ಹೆಚ್ಚಿಸುತ್ತದೆ ಎಂದು ಸಲಹೆ ನೀಡಿದರು.
ರೈತರೊಂದಿಗೆ ಮುಖಾ ಮುಖಿಯಾಗಿ ನ್ಯಾನೋ ಯೂರಿಯಾ ಬಗ್ಗೆ ವಿಶ್ಲೇಷಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಈಶ ಹರಳು ರೂಪದ ಯೂರಿಯಾ ರಸಗೊಬ್ಬರವನ್ನು ಬಳಸುವುದರಿಂದ ಮಾನವನ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪಪರಿಣಾಮ ಬೀರುತ್ತಿದೆ. ಹರಳು ರೂಪದ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಸಿದಾಗ ಬೆಳೆದ ತರಕಾರಿ, ಹಣ್ಣುಗಳು ಮತ್ತು ಧಾನ್ಯಗಳಲ್ಲಿ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವುಗಳನ್ನು ದೀರ್ಘವಾಗಿ ಸೇವಿಸಿದರೆ, ಮಾನವನಿಗೆ ವಿಷಕಾರಿಯಾಗಿ ಹೊಟ್ಟೆ ನೋವು, ಅಜೀರ್ಣ, ವಾಂತಿ ಮುಂತಾದವು ಸಂಭವಿಸಬಹುದು. ಅಲ್ಲದೇ, ಬೆಳೆಗಳಿಗೆ ಕೀಟಬಾಧೆ ಹಾಗೂ ರೋಗಬಾಧೆ ಹೆಚ್ಚಾಗಿ ಕಂಡು ಬರುತ್ತದೆ.
ಅದೇ ನ್ಯಾನೋ ಯೂರಿಯಾ ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ. ಎಂಬುದು ಕೃಷಿ ಇಲಾಖೆಯ ಮಾಹಿತಿ.
ಪ್ರಾತ್ಯಕ್ಷತೆಯ ಸಂಧಬ್ದದಲ್ಲಿ ಇಪ್ಕೋ ಸಂಸ್ಥೆ ವ್ಯವಸ್ಥಾಪಕ ಚಿದಂಬರA ಮತ್ತು ಕೃಷಿ ವಿಜ್ಞಾನಿ ಸರಸ್ವತಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಗುತ್ತಿಕಟ್ಟೆ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.



ಹರಳು ರೂಪದ ಯೂರಿಯಾ ರಸಗೊಬ್ಬರ ಬಳಸುವುದರಿಂದ ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತದೆ. ಆದ್ದರಿಂದ ಹರಳು ರೂಪದ ಯೂರಿಯಾ ರಸಗೊಬ್ಬರದ ಬದಲು ದ್ರವ ರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಆದ್ದರಿಂದ ನ್ಯಾನೋ ಯೂರಿಯಾವನ್ನು ಪ್ರತಿ ಲೀಟರ್ ನೀರಿಗೆ ೩ ರಿಂದ ೪ ಎಂ.ಎಲ್ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಮೊಳಕೆಯೊಡದ ೩೦ ರಿಂದ ೩೫ ದಿನಗಳಿಗೊಮ್ಮೆ ಸಿಂಪಡಣೆ ಹಾಗೂ ೪೫ ರಿಂದ ೫೦ ದಿನಗಳಿಗೊಮ್ಮೆ ಸಿಂಪಡಣೆ ಮಾಡಬೇಕು.
– ಸಿ.ಎಸ್.ಈಶ
ಸಹಾಯಕ ಕೃಷಿ ನಿರ್ದೇಶಕರು
About The Author
Discover more from JANADHWANI NEWS
Subscribe to get the latest posts sent to your email.