
ಹೊಸದುರ್ಗ: ಮೊಬೈಲ್ ಬಳಕೆಯಿಂದಾಗಿ ಕಣ್ಣಿನ ದೃಷ್ಟಿಗಳು ಕುಂಠಿತವಾಗುತ್ತಿವೆ.ಅದರ ಜಾಗೃತಿ ವಹಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಧಳ ಸಂಸ್ಧೆಯ ಯೋಜನಾಧಿಕಾರಿ ಶಿವಣ್ಣ.ಎಸ್ ಅಭಿಪ್ರಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ತಾಲೂಕಿನ ಒಬಳಾಪುರ ಗ್ರಾಮದ ಬಯಲು ರಂಗಮAದಿರ ಆವರಣದಲ್ಲಿ ನಡೆದ ಕಣ್ಣಿನ ತಪಸಣಾ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನದಲ್ಲಿ ಮಕ್ಕಳು ಹಿರಿಯರು ಮೊಬೈಲ್ ,ಟಿ.ವಿಗಳನ್ನು ಸಮೀಪದಲ್ಲಿ ನೋಡುತ್ತಿರುವುದರಿಂದ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸದಸ್ಯರಿಗೆ ಕಣ್ಣಿನ ಪರೀಕ್ಷೆ ಮಾಡಿ ಅಗತ್ಯ ಚಿಕಿತ್ಸೆಗಳನ್ನು ಸ್ಥಳೀಯ ನೇತ್ರಾಲಯ ಕಣ್ಣಿನ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಕಾರ್ಡ್ ಮತ್ತು ಸಂಪೂರ್ಣ ಸುರಕ್ಷಾ ಕಾರ್ಡ್ ಮೂಲಕ ಊಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಕಣ್ಣಿಗೆ ಸಂಬAದಪಟ್ಟ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಎಂದು ತಿಳಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹೆಗ್ಗೆರೆ ಶಂಕರಪ್ಪ, ಮಾಜಿ ಅಧ್ಯಕ್ಷ ಗ್ರಾಮ ಪಂಚಾಯಿತಿ ಹೆಗ್ಗೆರೆ ಪಿ.ಲಿಂಗರಾಜು ಒಕ್ಕೂಟದ ಅಧ್ಯಕ್ಷರು ಮಂಜುಳಾ, ಗ್ರಾಮದ ಮುಖಂಡ ವೈಕುಂಟಪ್ಪ, ಜ್ಞಾನವಿಕಾಸ ಸಮನ್ವಯಾಧಿಕಾರಿ ಲೀಲಾ, ಸೇವಾಪ್ರತಿನಿಧಿ ತಾರಾ,ಆಸ್ಪತ್ರೆಯ ಸಿಬ್ಬಂದಿಗಳಾದ ತೇಜಸ್ವಿನಿ, ಚೈತ್ರ ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.