
ಚಳ್ಳಕೆರೆ:
ಜು.3 ಕ್ಕೆ ಪಾದಯಾತ್ರೆ:
ಪರಶುರಾಂಪುರ ಹೋಬಳಿ, ಕರ‍್ಲಕುಂಟೆ ಗ್ರಾಮದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಲ್ಲಿ ಸೋಲಾರ್ ಲೈಟ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಕೆ ಮಾಡುವ ಬದಲು, ವೈಯಕ್ತಿಕವಾಗಿ ರೈತರ ಜಮೀನುಗಳಲ್ಲಿ ಅಳವಡಿಕೆ ಮಾಡುವ ಮೂಲಕ ಸರ್ಕಾರಿ ಸೌಲಭ್ಯವನ್ನು ದುರುಪಯೋಗ ಮಾಡಿಕೊಂಡಿರುವವರ ಮತ್ತು ಇಲಾಖೆ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಜು. ೦. ರಂದು ಬೆಳಗ್ಗೆ 19 ಗಂಟೆಯಿಂದ ಕೊರ‍್ಲಕುಂಟೆ ಗ್ರಾಮದಿಂದ 6ಕಿಮೀ ದೂರದ ಪಗಡಲಬಂಡೆ ಗ್ರಾಮ ಪಂಚಾಯಿತಿ ಕಚೇರಿ ತನಕ ಗ್ರಾಮಸ್ಥರೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಗ್ರಾಪಂ ಮಾಜಿ ಸದಸ್ಯ ಕರ‍್ಲಕುಂಟೆ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಈಗಾಗಲೇ ಪ್ರತಿಭಟನಾ ಸಂಬಂಧ ತಹಸೀಲ್ದಾರರು ಮತ್ತು ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿಗಳ ಅನುಮತಿಯನ್ನೂ ಪಡೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.