
ಚಳ್ಳಕೆರೆ:
ಮನುಕುಲದಲ್ಲಿ ಸಮಾನತೆ ಬಯಸಿದ್ದ ಅಂಬೇಡ್ಕರ್ ಅವರನ್ನು ದೇವಾಲಯದಲ್ಲಿ ಪೂಜ್ಯನೀಯವಾಗಿ ಕಾಣುವ ಪರಿವರ್ತನೆ ಅಗತ್ಯವಿದೆ ಎಂದು ದೊಡ್ಡೇರಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನ ಸಂಸ್ಥಾಪಕ ನಿವೃತ್ತ ಉಪನ್ಯಾಸಕ ಡಿ.ಎಸ್. ರಾಜಣ್ಣ ಹೇಳಿದರು.
ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಕುಟುಂಬದ ಹಿರಿಯರ ಪೂಜಾ ಪದ್ದತಿ ಪರಂಪರೆ ಮುಂದುವರೆಸಲು ಸುಮಾರು ೧೫ ಲಕ್ಷ ವೆಚ್ಚದಲ್ಲಿ ಶ್ರೀಬಸವೇಶ್ವರ ದೇವಸ್ಥಾನ ಸ್ಥಾಪನೆ ಮಾಡಿಕೊಂಡು ಪ್ರತಿನಿತ್ಯ ಪೂಜೆ ಮಾಡುತ್ತಿರುವ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆಯೊಂದಿಗೆ ಅಂಬೇಡ್ಕರ್ ಅವರ ಫೋಟೋ ಪ್ರತಿಷ್ಠಾಪನೆ ಮಾಡಿ ಮಾತನಾಡಿದರು.
ತಂದೆ ಸ್ವಾತಂತ್ರö್ಯ ಹೋರಾಟಗಾರ ಶರಣ ಬಸವಯ್ಯ, ತಾಯಿ ಸರ್ವ ಮಂಗಳಮ್ಮ ಅವರ ಧಾರ್ಮಿಕ ಸೇವಾ ಮನೋಭಾವನೆ ಕುಟುಂಬದಲ್ಲಿ ಪೋಷಣೆ ಮಾಡಿಕೊಂಡಿದ್ದೇವೆ. ಕುಟುಂಬಕ್ಕೆ ಸಲ್ಲಿಕೆಯಾಗುತ್ತಿದ್ದ ಪಿಂಚಣಿ ಹಣವನ್ನು ಸಂಗ್ರಹಿಸಿಕೊAಡು ೧೫ ಲಕ್ಷ ವೆಚ್ಚದಲ್ಲಿ ಬಸವೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದೇವೆ. ದೇವಸ್ಥಾನ ಸ್ಥಳದಲ್ಲಿ ಮೂಲ ವಿಗ್ರಹಗಳಾಗಿದ್ದ ವಿಘ್ಞೇಶ್ವರ, ನಾಗರ ವಿಗ್ರಹ ಜತೆಗೆ ಬಸವ ಮತ್ತು ಕಾಶಿ ಲಿಂಗವನ್ನು ಪ್ರತಿಷ್ಠಾಪಿಸಿದ್ದೇವೆ. ವಿಶೇಷವಾಗಿ ಬುದ್ಧ, ಬಸವ ಭಾವಚಿತ್ರಗಳನ್ನು ಅಳವಡಿಸಿದ್ದ ದೇವಾಲಯದಲ್ಲಿ ಪರಿಪೂರ್ಣ ಚಿಂತನೆಗಾಗಿ ಅಂಬೇಡ್ಕರ್ ಫೋಟೋ ಸ್ಥಾಪಿಸಿಕೊಂಡಿದ್ದೇವೆ ಎಂದು ಹೇಳಿದರು.
ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ದೇವಾಲಯ ಪ್ರವೇಶ ಮಾಡುವ ತಳಸಮುದಾಯಗಳ ವಿಚಾರದಲ್ಲಿ ಸಂಘರ್ಷಗೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ, ಬಸವೇಶ್ವರ ದೇವಾಲಯದಲ್ಲಿ ಅಂಬೇಡ್ಕರ್ ಫೋಟೋ ಸ್ಥಾಪನೆ ಜಾಗೃತಿ ಚಿಂತನೆಯಾಗಿದೆ. ಮನುಕುಲದ ಒಳಿತಿಗಾಗಿ ಚಿಂತಿಸಿದ ಅನೇಕ ಸಾಂಸ್ಕೃತಿಕ ನಾಯಕರು ಪೂಜ್ಯನೀಯರಾಗಿದ್ದಾರೆ. ಸರ್ವಧರ್ಮ ಮತ್ತು ಪ್ರತಿಯೊಬ್ಬರ ಭಾವನೆಗೂ ಗೌರವ ಸಿಗಬೇಕು ಎನ್ನುವ ಅಂಬೇಡ್ಕರ್ ಚಿಂತನೆ ಸರ್ವಕಾಲಕ್ಕೂ ಸತ್ಯವಾಗಿದೆ. ಈ ದೂರದೃಷ್ಟಿಯಿಂದ ದೊಡ್ಡೇರಿ ಬಸವೇಶ್ವರ ದೇವಸ್ಥಾನದ ಕಾರ್ಯ ಸಮಾಜಕ್ಕೆ ಮಾದರಿ ಅನಿಸುತ್ತದೆ ಎಂದು ಹೇಳಿದರು.
ಪೂಜಾ ಕಾರ್ಯಕ್ರಮದಲ್ಲಿ ಅನುರಾಧ ಡಿ.ಎಸ್. ರಾಜಣ್ಣ, ಎನ್. ಕೆಂಚಪ್ಪ, ವಕೀಲರಾದ ಡಿ.ಎಸ್. ಶಿವಕುಮಾರ್, ಡಿ. ಮಲ್ಲಿಕಾರ್ಜುನ, ಪತ್ರಕರ್ತ ರಘುನಾಗ್, ಜಿ.ಎಸ್. ಸುನೀಲ್‌ಕುಮಾರ್ ಮತ್ತಿತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.