
ಚಳ್ಳಕೆರೆ ಜೂ30
ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಕೆ.ಹೆಚ್. ರಾಜು ಅಧಿಕಾರಸ್ವೀಕರ.


ನಂತರ ಪ್ರಾಚಾರ್ಯ ಮಾತನಾಡಿ
ನಾನು ಕಾಲೇಜಿನ ಶಿಸ್ತು ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಕಾಲೇಜಿನ ಆವರಣದಲ್ಲಿ ಬೆಳೆದಿರುವ ಪಾರ್ಥೇನಿಯಂ ಗಿಡಗಳನ್ನು ನೋಡಿ ಇನ್ನೂ ಮೂರು ನಾಲ್ಕು ದಿನಗಳ ಒಳಗಡೆ ಪಾರ್ಥೇನಿಯಂ ಗಿಡಗಳನ್ನು ಸ್ವಚ್ಛಗೊಳಿಸಬೇಕೆಂದು ಎನ್ ಎಸ್ ಎಸ್ ಅಧಿಕಾರಿಯವರಿಗೆ ಸೂಚನೆ ನೀಡಿದರು. ಈ ಕಾರ್ಯಕ್ಕೆ ನಾನು ವೈಯಕ್ತಿಕವಾಗಿ 20 ಸಾವಿರ ರೂಗಳನ್ನು ನೀಡುವುದಾಗಿ ಘೋಷಣೆ ಮಾಡಿದರು. ನಾನು ಸಹ ವಿಜ್ಞಾನ ವಿಭಾಗದ ಭೌತಶಾಸ್ತ್ರ ಉಪನ್ಯಾಸಕನಾಗಿ ಸೇವೆ ಸಲ್ಲಿಸಿರುವುದರಿಂದ ವಿಜ್ಞಾನ ವಿಭಾಗದ ಸಮಸ್ಯೆಗಳನ್ನು ಅರಿತಿದ್ದೇನೆ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಿವಾರಿಸಿ ಕಾಲೇಜಿನ ಫಲಿತಾಂಶ ಹೆಚ್ಚಿಸುವುದಕ್ಕೆ ಮತ್ತು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ ಪ್ರಭಾರ ಪ್ರಾಚಾರ್ಯ ಪುಷ್ಪಲತಾ ಎನ್ಎಸ್ಎಸ್ ಕಾರ್ಯಕ್ರಮಧಿಕಾರಿ ಶಾಂತಕುಮಾರಿ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ ಶ್ರೀನಿವಾಸ್ ಕಾಲೇಜು ಸಿಬ್ಬಂದಿ ಕಾರ್ಯದರ್ಶಿ ಸಾಹಿತಿ ನಾಗರಾಜ ಬೆಳಗಟ್ಟ ಕ್ರೀಡಾ ಕಾರ್ಯದರ್ಶಿ ಎಚ್.ಆರ್ ಜಬಿವುಲ್ಲಾ ಉಪನ್ಯಾಸಕರಾದ ಡಾ. ರೇಖಾ ಹೀನ ಕೌಸರ್ ಜಾನಕಮ್ಮ ಕೆ. ವಿ.ಚಂದ್ರಶೇಖರ ಚಂದ್ರಶೇಖರ ಕಾಶಿಪುರ ನಿರಂಜನ್ ರಾಘವೇಂದ್ರ ಶೆಟ್ಟಿ ವೀರಣ್ಣ ತಿಪ್ಪೇಸ್ವಾಮಿ ಜಗದೀಶ್ ಪುಟ್ಟರಂಗಪ್ಪ ಮಂಜುನಾಥ್ ಇಬ್ರಾಹಿಂ ಇತರರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.