
.ವರದಿ:ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಮಂತ್ರಿಯಾಗುವ ಅರ್ಹತೆ ಇದೆ ಇದನ್ನು ಹೈಕಮಾಂಡ್ ತೀರ್ಮಾನಿಸಬೇಕು ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಮಂತ್ರಿ ಪದವಿ ಕುರಿತಂತೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.


ಮನುಮೈಯ್ಯನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಎರಡು ಕೋಟಿ ರೂಪಾಯಿ ವೆಚ್ಚದ ರಾಜ್ಯ ಹೆದ್ದಾರಿ ರಸ್ತೆ, ಬೋಸೆದೇವರಹಟ್ಟಿ ಹತ್ತಿರದ ಪಿಕಪ್ ನಿರ್ಮಿಸಿ ಕಾಲುವೆ ಮುಕಾಂತರ ದೊಡ್ಡಕೆರೆಗೆ ನೀರು ತುಂಬಿಸುವ ಕಾಮಗಾರಿ ಜೋಗಿಹಟ್ಟಿ ಮಲ್ಲೂರಹಟ್ಟಿ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯ ನೆರವೇರಿಸಿ ಮಾತನಾಡಿದ ಅವರು,ರಾಜಕಾರಣದಲ್ಲಿ ನನಗಿಂತ ಹಿಂದೆ ಬಂದು ಗೆದ್ದವರು ಎರಡು- ಮೂರು ಬಾರಿ ಮಂತ್ರಿಗಳು ಆಗಿದ್ದಾರೆ.ಏಳು ಬಾರಿ ಶಾಸಕನಾಗಿರುವ ನನಗೆ ಮಂತ್ರಿಯಾಗುವ ಎಲ್ಲಾ ಅರ್ಹತೆಯು ಇದೆ. ಮಂತ್ರಿ ಪದವಿಯನ್ನು ನಿಭಾಯಿಸುವ ಶಕ್ತಿ ಇದೆ,ನನಗೆ ಮಂತ್ರಿ ಪದವಿ ಕೊಟ್ಟರೆ ಸರ್ಕಾರ ಮತ್ತು ಪಕ್ಷಕ್ಕೂ ಒಳಿತು.
ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಮಂತ್ರಿ ಪದವಿ ಸಿಗಲಿದೆ ಎನ್ನುವುದನ್ನು ನೋಡಿದ್ದೇನೆ ಆದರೆ ಇದು ನನಗೆ ನಂಬಿಕೆ ಇಲ್ಲ,ರಾಜ್ಯಪಾಲರಿಂದ ಅಧಿಕೃತ ಸಂದೇಶ ಬಂದಾಗ ಮಾತ್ರ ನನಗೆ ನಂಬಿಕೆ ಬರುತ್ತದೆ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ನಂಜುಂಡಪ್ಪ ಆಯೋಗದ ವರದಿ ಪ್ರಕಾರ ಅತ್ಯಂತ ಹಿಂದುಳಿತ ಪ್ರದೇಶವಾಗಿದೆ.ಇಂತಹ ಪ್ರದೇಶವನ್ನು ಅಭಿವೃದ್ಧಿ ಮಾಡಲು ಮಂತ್ರಿ ಪದವಿ ಅವಶ್ಯಕತೆಯಿದೆ. ನಾನು ಮತ್ತು ನನ್ನ ಸ್ವಭಾವ ಎಂತದ್ದು ಎಂದೂ ಹೈಕಮಾಂಡ್ಗೆ ಗೊತ್ತಿದೆ.ಹೈಕಮಾಂಡ್ ಗೆ ಹೆಚ್ಚಿನ ಪರಿಚಯವೂ ಇದೆ, ಬಳ್ಳಾರಿ ಉಪಚುನಾವಣೆಯಲ್ಲಿ ನಿಂತು ಗೆದ್ದಿದ್ದೇನೆ,ಪಕ್ಷಕ್ಕೋಸ್ಕರ ದುಡಿದಿದ್ದೇನೆ ಈ ಎಲ್ಲಾ ಮಾನದಂಡಗಳನ್ನು ಆಧರಿಸಿ ಕ್ಷೇತ್ರದ ಜನರ ಬಯಕೆಯಂತೆ ಮಂತ್ರಿ ಪದವಿ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲರಾಜ್, ಪ್ರಭುಸ್ವಾಮಿ, ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ, ನೇರಲಗುಂಟೆ ಸೂರನಾಯಕ, ಬಂಡೆ ಕಪಿಲೆ ಓಬಣ್ಣ, ತಳಕು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಬಗರ್ ಹುಕುಂ ಸದಸ್ಯ ಪಿ. ಜಿ .ಬೋರನಾಯಕ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸದಸ್ಯರಾದ ಜೆ. ಆರ್. ರವಿಕುಮಾರ್, ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ .ತಿಪ್ಪೇಸ್ವಾಮಿ , ಸದಸ್ಯರಾದ ಕೆ.ಟಿ. ಜಯಂತಿಬಾಯಿ, ಶಿವಣ್ಣ, ಮುಖಂಡರಾದ ವಕೀಲ ಉಮಾಪತಿ, ವರವು ಕಾಟಯ್ಯ ,ಶಂಕರ್ ಮೂರ್ತಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ, ಕುದಾಪುರ ಪ್ರಕಾಶ್, ಶ್ರೀನಿವಾಸ್, ಜಿ .ಬಿ. ಮುದಿಯಪ್ಪ, ಶ್ರೀಕಾಂತ್, ರಾಮಸಾಗರ ಕಾಟಯ್ಯ, ಗೌಡಗೆರೆ ಟಿ. ಮಲ್ಲೂರಹಳ್ಳಿ ಕಾಟಯ್ಯ ಎ.ಟಿ. ಅಶೋಕ್, ಓಬಳೇಶ್, ಜೋಗಿಹಟ್ಟಿ ಎಚ್ ಬಿ. ತಿಪ್ಪೇಸ್ವಾಮಿ, ಇನ್ನೂ ಮುಂತಾದವರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.