
ವರದಿ : ಕೆ ಟಿ ಓಬಳೇಶ್ ನೆಲಗೇತನಹಟ್ಟಿ
ಚಳ್ಳಕೆರೆ/ನಾಯಕನಹಟ್ಟಿ :
ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಜನ ಔಷಧಿ ಕೇಂದ್ರದ ಮುಂದೆ ಶುಕ್ರವಾರ ಬಿಜೆಪಿ ಮಂಡಲ ವತಿಯಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಣೆ ನಡೆಸಲಾಯಿತ್ತು.
ಇದೇ ವೇಳೆ ನಿಕಟ ಪೂರ್ವ ಅಧ್ಯಕ್ಷ ಎಂ ವೈ ಟಿ ಸ್ವಾಮಿ ಮಾತಾನಾಡಿದರು ಪ್ರಧಾನಿ ಮಂತ್ರಿ ನರೇಂದ್ರ ಮೋದಿಜೀಯವರು ಬಡ ಜನರ ಏಳಿಗೆಗಾಗಿ ಕಡಿಮೆ ದರದಲ್ಲಿ ಔಷಧಿ ಮಾತ್ರೆಗಳನ್ನು ನೀಡುವುದರ ಮೂಲಕ ವಯೋವೃದ್ಧರಿಗೆ ಮತ್ತು ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ, ಸಕ್ಕರೆ ಕಾಯಿಲೆ, ಬಿಪಿ ಶುಗರ್ ಸೇರಿದಂತೆ ಇನ್ನೂ ಅನೇಕ ಕಾಯಿಲೆಗಳಿಗೆ ಅನುಕೂಲವಾಗುವ ಸಲುವಾಗಿ ಇಡೀ ದೇಶದಲ್ಲಿ ಪಟ್ಟಣ ನಗರ ಗ್ರಾಮೀಣ ಪ್ರದೇಶಗಳಲ್ಲಿ ಜನ ಔಷದಿ ಕೇಂದ್ರಗಳನ್ನು ತೆರೆಯಲಾಗಿತ್ತು, ಜನ ಸಾಮಾನ್ಯರ ದಾರಿ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಬಿಟ್ಟಿ ಗ್ಯಾರಂಟಿ ಯೋಜನೆಗಳ ಮೂಲಕ ಮುಂಬರುವ ತಾಲ್ಲೂಕು ಪಂಚಾಯ್ತಿ ಜಿಲ್ಲಾ ಪಂಚಾಯ್ತಿ ಚುನಾವಣೆ ಇರುವುದರಿಂದ ರಾಜ್ಯಗಳಲ್ಲಿ ಜನ ಔಷಧಿ ಮುಚ್ಚಿಸುವಂತೆ ಆದೇಶ ನೀಡಿದ್ದಾರೆ, ಕೂಡಲೇ ರಾಜ್ಯದಲ್ಲಿ ಜನ ಔಷದಿ ಕೇಂದ್ರಗಳನ್ನು ತರೆಯಬೇಕು ಇಲ್ಲವಾದಲ್ಲಿ ರಾಜ್ಯ ಸರ್ಕಾರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.
ನಿಕಟ ಪೂರ್ವ ಅಧ್ಯಕ್ಷ ಈ ರಾಮರೆಡ್ಡಿ ಮಾತಾನಾಡಿದರು ಭಾರತದ ಹೆಮ್ಮೆಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಜೀಯವರು ಇವರು ಬಡತನದಲ್ಲಿ ಜನಸಿ ದೇಶದ ಪ್ರಧಾನಿ ಮಂತ್ರಿಯಾಗಿ ಜನರ ಕಷ್ಟಗಳನ್ನು ಅರಿತು ದೇಶದಲ್ಲಿ ಜನ ಔಷಧಿ ಕೇಂದ್ರಗಳನ್ನು ಸ್ಥಾಪಿಸಿದರು, ಇತ್ತೀಚಿನ ದಿನಗಳಲ್ಲಿ ನಾವು ತಿನ್ನು ಆಹಾರ ಪಧಾರ್ಥಗಳು, ರಾಸಾಯನಿಕ ಔಷಧಿ ಹೊಲದಲ್ಲಿ ಬೆಳೆಗಳಿಗೆ ಹಾಕುವುದರಿಂದ ಜನ ಸಾಮಾನ್ಯರಿಗೆ ಹಲವು ರೋಗಗಳಿಗೆ ತುತ್ತಾ ಆಗುತ್ತಾರೆ ಆದ್ದರಿಂದ ಜನ ಸಾಮಾನ್ಯರಿಗೆ ಆರೋಗ್ಯ ಸುಧಾರಿಸುವ ಶಕ್ತಿ ಜನ ಔಷಧಿ ಕೇಂದ್ರ ವರದಾನಗಿದೆ ಎಂದರು.
ಇದೇ ಸಂಧರ್ಭದಲ್ಲಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶಿ, ಎಸ್. ಟಿ ಮೋರ್ಚ ಜಿಲ್ಲಾ ಅಧ್ಯಕ್ಷ ಪಿ ಶಿವಣ್ಣ, ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ ಮಾತಾನಾಡಿದರು.
ಪ್ರತಿಭಟಣೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಬಂಕಿ ಗೋವೀಂದಪ್ಪ, ಬಿಜೆಪಿ ಮುಖಂಡ ಬೇಡಾರೆಡ್ಡಿಹಳ್ಳಿ ಜಗದೇಶ ರೆಡ್ಡಿ, ಗೌಡಗೆರೆ ಗ್ರಾಮ ಪಂಚಾಯ್ತಿ ಸದಸ್ಯರಾದ ಗಿಣೇಯರ್ ತಿಪ್ಪೇಶ್, ಜಿ ಓಬಳೇಶ್, ವೆಂಕಟೇಶ್, ದಳಪತಿ, ಕೆಂಗ ರುದ್ರಪ್ಪ, ಬಿ ಟಿ ಪ್ರಕಾಶ್ ಜಾಗನೂರಹಟ್ಟಿ, ಎನ್ ತಿಪ್ಪೇಸ್ವಾಮಿ ಜೆಸಿಬಿ, ತಾರಕೇಶ್, ಪರ್ವತಯ್ಯ, ಬೋಸೆರಂಗಪ್ಪ, ಗಿಡ್ಡಾಪುರ ಬೋರಯ್ಯ, ಲೋಕೇಶ್, ವಿಷ್ಣುಸಿಂಹ, ಕೆ ಬಿ ಬೋರಯ್ಯ ಇನ್ನೂ ಮುತಾಂದವರು ಇದ್ದರು.





About The Author
Discover more from JANADHWANI NEWS
Subscribe to get the latest posts sent to your email.