September 14, 2025
IMG-20250530-WA0106.jpg

ಸಿರಿಗೆರೆ .ಮೇ.30: ತಮ್ಮ ವಿವಿಧ

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೊರಾರ್ಜಿ ವಸತಿ ಶಾಲೆ ಯ ಶಿಕ್ಷಕರು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ವಸತಿ ಶಾಲೆಯ ನೌಕರರ ಸಂಘದ ಕರೆಯ ಮೆರೆಗೆ ಶುಕ್ರವಾರದಂದು ಚಿತ್ರದುರ್ಗ ತಾಲೂ ಕಿನ ಕಡ್ಲೆಗುದ್ದ ಗ್ರಾಮದ ಶ್ರೀ ಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಶಿಕ್ಷಕ ವರ್ಗದವರು ಕಪ್ಪು ಪಟ್ಟಿ ಧರಿಸಿಕೊಂಡು ಶಾಲೆಯ ಮುಂಭಾಗ ಕರ್ತವ್ಯಕ್ಕೆ ಹಾಜರಾದರು.

ಕರ್ನಾಟಕ ದಲ್ಲಿ 830 ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅದರಡಿಯಲ್ಲಿ ಸುಮಾರು 8000 ಖಾಯಂ ಸಿಬ್ಬಂದಿ ಕಳೆದ ಹದಿಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ನ್ಯಾಯವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡದ ಹಿನ್ನೆಲೆಯಲ್ಲಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ.26 ರಿಂದ ಮೇ.28ರ ವರೆಗೆ ಸತ್ಯಾಗ್ರಹಕ್ಕೆ ಕುಳಿತುಕೊಂಡಿದ್ದರು. ಅದರ ಮುಂದುವರೆದ ಭಾಗವಾಗಿ ಶಾಲಾ ಹಂತದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಇದೆ ಮೇ 31 ರಂದು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾರೆ.

ನೌಕರರು ತಮಗೆ ದೊರೆಯಬೇಕಾದ ಕೆ.ಜಿ.ಐ.ಡಿ. ಸೌಲಭ್ಯ ವಸತಿ ನಿರ್ದೇಶನಾಲಯ, ಡಿ.ಸಿ.ಆರ್.ಜಿ. ಸೌಲಭ್ಯ, ಶೇ. ಹತ್ತರಷ್ಟು ಹೆಚ್ಚುವರಿ ವೇತನ, ಗೃಹ ಬಾಡಿಗೆ ವಿನಾಯತಿ, ಸೌಲಭ್ಯಗಳನ್ನು ಈ ಕೂಡಲೇ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಸಿದ್ದಪ್ಪ ಟಿ, ನಿಲಯ ಪಾಲಕರಾದ ಮನೋಜ್ ಹರನಾಳ, ಶಿಕ್ಷಕರಾದ ರಮೇಶ ನಾಯ್ಕ್ ಶ, ಶಿವಾನಂದಪ್ಪ ಮಡಿವಾಳರ, ಸಂಗಮೇಶ ಕತ್ತಿ , ಮಂಜುಶ್ರೀ , ಗೀತಾ ಟೆಂಗುಂಟಿ.ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading