
.ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಇಲ್ಲಿನ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಭಣೆಯಿಂದ ಜರಗಿತು.
ತೋರೆಕೋಲಮ್ಮನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಪಾರಾಧನೆ, ಪಾದಗಟ್ಟೆವರಿಗೂ ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಿಗ್ಗೆ ಕಳಸ ಪೂಜೆ ನೆರವೇರಿಸಿದ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂವುಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿ ಸ್ವಾಮಿ ಬಸವೇಶ್ವರ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ತಂದು ರಥೋತ್ಸವದಲ್ಲಿ ಕೂರಿಸಿ ಪ್ರತಿಷ್ಠಪಿಸಲಾಯಿತು ಇನ್ನೂ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಗ್ರಾಮದ ಹುಗಿ ಗೌಡ್ರು ಕಲ್ಲೇಪ್ಪರ ಮನೆಯಿಂದ ಬಲಿ ಅನ್ನ ತರಲಾಯಿತ್ತು. ಕಾಸು ಮೀಸಲು, ಮೊಸರು, ಕುಂಭ, ಜಿನ್ನಿಗೆ ಹಾಲು ತಂದು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಎಡೆ ಹಾಕಲಾಯಿತ್ತು ನಂತರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರಥಕ್ಕೆ ಅನ್ನ ಸಂತರ್ಪಣೆ ನೆರವೇರಿಸಿ, ಮಧ್ಯಾಹ್ನ 4 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು. ರಥ ಸಂಚರಿಸುವ ದಾರಿಯುದ್ದಕ್ಕೂ ಭಕ್ತರು ಬಾಳೆ ಹಣ್ಣು, ಮಂಡಕ್ಕಿ ಎರಚುತ್ತಿದ್ದರು. ರಥೋತ್ಸವದಲ್ಲಿ ಕೋಲಾಟ, ಡೊಳ್ಳು ಹಾಗೂ ನವಿಲುಗಳ ಕುಣಿತ ಗಮನ ಸೆಳೆದವು.







ಇದೇ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ ಜಯಣ್ಣ, ಸದಸ್ಯರಾದ ಕೆ ಜಿ ತಿಪ್ಪೇಸ್ವಾಮಿ, ಸುಮಿತ್ರಮ್ಮ, ಮಾರಕ್ಕ ,ಗಾದ್ರಪ್ಪ, ಸೇರಿದಂತೆ ಸಮಸ್ತ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.