
ಚಳ್ಳಕೆರೆ : ಕರ್ನಾಟಕದ ಸಂಸ್ಕೃತಿಕ ನಾಯಕ ಹಾಗೂ ವಿಶ್ವ ಗುರು ಎಂಬ ಬಿರುದು ಪಡೆದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಮತ್ಸಮುದ್ರ ಗ್ರಾಮದಲ್ಲಿ ವೀರಶೈವ ಸಮಾಜದವರಿಂದ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.12ನೇ ಶತಮಾನದ ಸಮಾಜದಲ್ಲಿ ತಂಡಾ ವಾಡುತಿದ್ದ ಕಂದಾಚಾರವನ್ನು ಕಿತ್ತೊಗೆದು, ಸರ್ವರಿಗೂ ಉತ್ತಮ ಸಮಾಜದಲ್ಲಿ ಬದುಕಲು ಬೆಳಕಾದವರು ಬಸವೇಶ್ವರರು. ಇಂದಿಗೂ ವೀರಶೈವ ಲಿಂಗಾಯತ ಸಮಾಜದವರು ಬಸವೇಶ್ವರ ಅವರು ಹಾಕಿಕೊಟ್ಟ ತತ್ವ ಮರ್ಗದಲ್ಲಿ ಬದುಕುತ್ತಿದ್ದು ಈ ಸಮಾಜದವರು ದೆಹವೆ ದೇವಾಲಯವೆಂಬ ಬಸವೇಶ್ವರ ತತ್ವದಡಿ ಇಷ್ಟ ಲಿಂಗ ಪೂಜೆ ಮಾಡುತ್ತಿದ್ದು ಇವರು ಸಮಾಜದಲ್ಲಿ ಮಧ್ಯಮ ವರ್ಗದವರಿಗೆ ಇಂತಹ ಕೆಳಮಟ್ಟದಲ್ಲಿದ್ದು ಹಾಗೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತುಂಬಾ ಕೊಡು ಬಡವರಾಗಿದ್ದು ಜೀವನ ಉಪಯೋಗಕ್ಕಾಗಿ ಕೃಷಿ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಾರೆ ಹಾಗೂ ವಿವಿಧ ವೃತ್ತಿ ಕೆಲಸ ಮಾಡುತ್ತಿದ್ದು ಇವರ ಸಮಾಜದ ಪರಿಸ್ಥಿತಿ ತೀರ ಕೆಳಮಟ್ಟದ್ದಾಗಿದೆ. ಆದ್ದರಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಸಮಾಜದ ಅಭಿವೃದ್ಧಿಗೆ ಸರ್ಕಾರ ಇತರೆ ಸಮಾಜಗಳಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಲ್ಪ ಸಂಖ್ಯಾತರ ವರ್ಗಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸಮಾಜದವರಿಗೆ ನೀಡಿದರೆ ಮಾತ್ರ ಸಮಾಜ ಉತ್ತಮ ಸ್ಥಿತಿಗೆ ಬರಲು ಸಾಧ್ಯ . ಕೂಡಲೇ ಸರ್ಕಾರ ವೀರಶೈವ ಸಮಾಜದ ಅಭಿರುದ್ದಿಗೆ ನೆರವಾಗಲು ಆಯೋಗ ರಚಿಸಿ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ಪರಿಶೀಲಿಸಿ ನಂತರ ಸದನದಲ್ಲಿ ಒಪ್ಪಿಗೆ ಪಡೆದು, ಕೆಳಮಟ್ಟದಲ್ಲಿರುವ ವೀರಶೈವ ಲಿಂಗಾಯತ ಸಮಾಜವನ್ನು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿಸಿದರಷ್ಟೇ ಈ ಸಮಾಜ ಅಭಿರುದ್ದಿಹೊಂದಲು ಸಾಧ್ಯ ಎಂದು ವೀರಶೈವ ಸಮಾಜದ ಮುಖಂಡರಾದ ಅಭಿಷೇಕ ಬಿ ಎ ಇವರು ತಿಳಿಸಿಸಿದರು.



About The Author
Discover more from JANADHWANI NEWS
Subscribe to get the latest posts sent to your email.