September 15, 2025
IMG-20250430-WA0221.jpg

ಚಳ್ಳಕೆರೆ: ಭಾರತದ ಆರ್ಥಿಕ ಇತಿಹಾಸದಲ್ಲಿ ಹಾಗೂ ಅರ್ಥಶಾಸ್ತ್ರದಲ್ಲಿ ಹನ್ನೆರಡನೆಯ ಶತಮಾನದ ವಿಶ್ವಗುರು ಬಸವಣ್ಣನವರು ತಮ್ಮದೇ ಆದ ಗೌರವಯುತ ಸ್ಥಾನ ಹೊಂದಿದ್ದರು. ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು.

ನಗರದ ತಾಲೂಕು ಕಚೇರಿ.ಶಾಸಕರ ಭವನ.ಬಸವ ಧಳ.ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಶ್ರೀ ಬಸವೇಶ್ವರ ಜಯಂತಿ ಆಚರಣೆ

ನಗರದತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 892ನೇ ವಿಶ್ವಗುರು ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು ವಿಶ್ವಗುರು ಬಸವಣ್ಣನವರು ಸರ್ವ ಸಮಾನತೆಯ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದ ಶರಣ ಮಹಾಶಯರು ಆರ್ಥಿಕ ವಿಚಾರಗಳಲ್ಲಿ ಬದಲಾವಣೆಯನ್ನು ತಂದರು. ಬಹುಶಃ ಭಾರತದ ಆರ್ಥಿಕ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆರ್ಥಿಕ ಬದಲಾವಣೆ ತರುವಂತಹ ಜವಾಬ್ದಾರಿಯುತ ಕಾರ್ಯವನ್ನು ಕೈಗೊಂಡರು. ಸಮಾಜದ ವ್ಯವಸ್ಥೆಯ ಸ್ವರೂಪವು ಅದರ ನಿರ್ವಹಣೆಯನ್ನವಲಂಬಿಸಿದೆ. ಅರ್ಥವ್ಯವಸ್ಥೆಯ ಕಾರ್ಯದಕ್ಷತೆ, ಸಮರ್ಪಕ ಆಡಳಿತದಿಂದ ನಿರ್ಧಾರವಾಗುತ್ತದೆ. ಸಮಾಜದ ಆರ್ಥಿಕ ಬದಲಾವಣೆಗೆ ನಿರ್ದಿಷ್ಟವಾದ ಹಾಗೂ ನಿರ್ಣಯಾತ್ಮಕ ಪಾತ್ರವಿದೆ ಎಂಬುದನ್ನು ಅವರು ಮನಗಂಡಿದ್ದರು. ಎಂದರು. 

ತಹಸಿಲ್ದಾರ್ ರೆಹಾನ್ ಪಾಷಾ ಮಾತನಾಡಿ ಸಾಮಾಜಿಕ ಕ್ರಾಂತಿಯ ಹರಿಕಾರನೆಂದು ನಾವು ಗುರುತಿಸುವ ಬಸವಣ್ಣನವರು ಆರ್ಥಿಕ ಕ್ರಾಂತಿಯ ಹರಿಕಾರನೂ ಆಗಿದ್ದರು. 12ನೇ ಶತಮಾನದಲ್ಲಿ ಸಮಾಜದಲ್ಲಿ ದೈತ್ಯಾಕಾರವಾಗಿ ಬೆಳೆಯುತ್ತಿದ್ದ ಸಾಮಾಜಿಕ ಅಸಮಾನತೆಗೆ ಆರ್ಥಿಕ ಅಸಮಾನತೆಯೂ ಸಹ ಒಂದು ಪ್ರಮುಖ ಕಾರಣವೆಂದು ಮೊದಲ ಬಾರಿಗೆ ಗುರುತಿಸಿದವರು ಬಸವಣ್ಣ. ಮಾತ್ರವಲ್ಲ ತಮ್ಮ ಮುಂದಾಳತ್ವದಲ್ಲಿ ಅರ್ಥಶಾಸ್ತ್ರಕ್ಕೆ ಅಂದು ಹೊಸ ತಿರುವನ್ನೇ ನೀಡಿದರು. ಅರ್ಥಶಾಸ್ತ್ರದ ಹೆಸರಿನಲ್ಲಿ ಅವರಿವರಂತೆ ಪ್ರತ್ಯೇಕವಾಗಿ ಯಾವ ಗ್ರಂಥಗಳನ್ನು ಅವರು ಬರೆಯಲಿಲ್ಲ. ಆದರೆ ಸರ್ವ ಸಮಾನತೆಯ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದಾಗ ತಾನಾಗಿಯೇ ಹುಟ್ಟಿಕೊಂಡ ಆರ್ಥಿಕ ಯೋಜನೆಗಳ ಕುರಿತ ಅವರ ವಚನಗಳು ಯಾವುದೇ ಅರ್ಥಶಾಸ್ತ್ರದ ಗ್ರಂಥಗಳಿಗಿಂತ ಕಮ್ಮಿಯೇನಿಲ್ಲ. ಪ್ರಾಚೀನ ಕಾಲವಿಂದಲೂ ಧರ್ಮದ ಹೆಸರಿನಲ್ಲಿ, ಆಧ್ಯಾತ್ಮದ ಹೆಸರಿನಲ್ಲಿ ಹಣಕ್ಕೆ ಸಿಗದೇ ಹೋದ ಪ್ರಾಮುಖ್ಯವನ್ನು ಗುರುತಿಸಿದ ಶರಣರು ಅರ್ಥಕ್ಕೆ ಅರ್ಥವನ್ನು ಒದಗಿಸಿಕೊಟ್ಟರು ನಾವೆಲ್ಲರೂ ಅವರ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು  ದಂಡಾಧಿಕಾರಿಗಳಾದ ರೇಹಾನ್ ಪಾಷಾ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ, ನಗರಸಭೆ ಅಧ್ಯಕ್ಷೆ ಮಂಜುಳಾ ಆರ್ ಪ್ರಸನ್ನಕುಮಾರ್, ಉಪಾಧ್ಯಕ್ಷೆ ಸುಮಾ ಭರಮಯ್ಯ, ಸದಸ್ಯರುಗಳು, ಜಿಲ್ಲಾ ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ನಾಗರಾಜ್, ಹಿರಿಯ ಮುಖಂಡರಾದ ಪ್ರಭುದೇವ್, ಬಸವರಾಜ್, ಹೊಸಮನೆ ಸ್ವಾಮಿ, ನಾಗರಾಜ್, ಕಿರಣ್ ಶಂಕರ್, ಮುಖಂಡರು, ಕಾರ್ಯಕರ್ತರು ಹಾಗೂ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading