September 15, 2025
IMG-20250430-WA0340.jpg

ನಾಯಕನಹಟ್ಟಿ:: ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟವರು ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ಪ್ರೇಮಾಲತಾ ಶಂಕರಮೂರ್ತಿ
ಹೇಳಿದ್ದರು.
ನಾಯಕನಹಟ್ಟಿ ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತೋತ್ಸವದಲ್ಲಿ ಪಾಲ್ಗೊಂಡು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು ಮಹಿಳೆಯರಿಗೆ ಸಮಾನತೆ ಕೊಟ್ಟ ಮೊದಲಿಗರು ಬಸವಣ್ಣನವರು ಜಾತಿ, ವರ್ಣ, ವರ್ಗ, ರಹಿತ, ಸಮ, ಸಮಾಜ ನಿರ್ಮಾಣ ಅವರ ಕನಸಾಗಿತ್ತು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ ಎಸ್‌ ಮಂಜಣ್ಣ ಮಾತನಾಡಿದರು ಅಂತಹರಂಗದ ಅರಿವುನ್ನು ಹೆಚ್ಚಿಸಲು ಆಚಾರ ಶುದಧಿಗೊಳಿಸಲು ಸಮಾಜಕ್ಕೆ ಪ್ರೇರಣೆ ನೀಡಿದ್ದು ಶ್ರೀ ಶರಣ ಬಸವೇಶ್ವರ ಆದ್ಧರಿಂದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಬಸವ ಜಯಂತಿ ಅಚರಿಸಲಾಗಿದೆ ಎಂದರು.
ಇನ್ನೂ ಗಜ್ಜುಗಾನಹಳ್ಳಿ ಬಸವಕೇಂದ್ರ ಅಧ್ಯಕ್ಷ ಕೆ ನಾಗರಾಜ ಮಾತಾಡಿ ಬಸವಣ್ಣನವರು ಜನಸಿದ್ದು ಅವರು 1130 ರಲ್ಲಿ ಕರ್ನಾಟಕದ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು ಬಸವಣ್ಣ ಭಾರತೀಯ 12 ನೇ ಶತಮಾನದ ರಾಜನೀತಿಜ್ಞ, ತತ್ವಜ್ಞಾನಿ, ಕವಿ, ಶಿವ ಕೇಂದ್ರಿತ ಭಕ್ತಿ ಚಳುವಳಿಯಲ್ಲಿ ಲಿಂಗಾಯತ ಸಂತ ಮತ್ತು ಕಲ್ಯಾಣಿ ಚಾಲುಕ್ಯ/ಕಳಚೂರಿ ರಾಜವಂಶದ ಆಳ್ವಿಕೆಯಲ್ಲಿ ಹಿಂದೂ ಶೈವ ಸಮಾಜ ಸುಧಾರಕರಾಗಿದ್ದರು. ವಚನಗಳ ಮೂಲಕ ಸಮ ಸಮಾಜಕ್ಕೆ ಬುನಾದಿ ಹಾಕಿದವರು ಬಸವಣ್ಣನವರು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯರಾದ ಪಾಲಮ್ಮ ಜಿ ಬೋರಯ್ಯ, ಸದಸ್ಯೆ ಬಸಕ್ಕ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಡಿ ಎಸ್‌ ತಿಪ್ಪೇಸ್ವಾಮಿ, ಎಸ್‌ ಟಿ ಪ್ರಕಾಶ, ನಿಕಿಲ್‌, ಸ್ವಾಮಿ ಸಂಗಡಿಗರು ಹಾಗೂ ಸಮಸ್ತ ಗಜ್ಜುಗಾನಹಳ್ಳಿ ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading