
ನಾಯಕನಹಟ್ಟಿ:: 12ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದವರು ಬಸವಣ್ಣನವರು ಎಂದು ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಬಾಬು ಹೇಳಿದರು.






ಬುಧವಾರ ಹೋಬಳಿಯ
ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ವಿಶ್ವಗುರು ಬಸವ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು ಸಾಂಸ್ಕೃತಿಕ ನಾಯಕ 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯನ್ನು ತಂದವರು ಬಸವಣ್ಣನವರ ನಂತರ ಅಂಬೇಡ್ಕರ್ ಅವರು ಭಾರತ ಸರ್ಕಾರದಲ್ಲಿ ಕರಡು ಸಮಿತಿಯ ಅಧ್ಯಕ್ಷರಾಗಿ ಕಾನೂನನ್ನ ಜಾರಿಗೆ ತಂದವರು ಬಸವಣ್ಣನವರ ಪ್ರೇರಣೆಯಿಂದ ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳು ತಿಳಿಸಿದರು.
ಎನ್ ದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ
ನಿರ್ದೇಶಕ ಎಚ್. ನಾಗರಾಜ್ ಮಾತನಾಡಿದರು ಬುದ್ಧ ಬಸವ ಅಂಬೇಡ್ಕರ್ ಮೂವರ ಸಿದ್ದಾಂತಗಳು ಸಹ ಭಾರತದ ಅತಿ ಹಿಂದುಳಿದ ಶೋಷಿತರ ಧ್ವನಿ ಸಿಗಬೇಕಾದಂತಹ ನ್ಯಾಯದ ಬಗ್ಗೆ ಬಸವಣ್ಣನವರು 12ನೇ ಶತಮಾನದಲ್ಲಿ ಹೋರಾಟ ಮಾಡಿದರು ಬಸವಣ್ಣನವರ ತತ್ವ ಸಿದ್ಧಾಂತವನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಪಾಲಿಸಿ ಇಡೀ ವಿಶ್ವವೇ ಸಂವಿಧಾನವನ್ನು ನೀಡಿದರು ಬಸವಣ್ಣನವರಿಗೆ ನಾವು ಎಷ್ಟು ಗೌರವವನ್ನು ಕೊಡುತ್ತೇವೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಷ್ಟೇ ಗೌರವವನ್ನು ಕೊಡಬೇಕು ಎಂದರು
ಈಕಾರ್ಯಕ್ರಮದಲ್ಲಿ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಎಸ್ ಸಿದ್ದಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಗಳಾದ ಬಿ.ಎಚ್ ಸಣ್ಣ ಸಿದ್ದಪ್ಪ , ಗ್ರಾಮಸ್ಥರಾದ ಸಿದ್ದಪ್ಪ, ಸಿದ್ದಪ್ಪ, ಸಣ್ಣಸಿದ್ದಪ್ಪ, ಕೆ ತಿಪ್ಪೇಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಟಿ ರಾಜಣ್ಣ ಲೆಕ್ಕ ಸಹಾಯಕ ಕುಮಾರಸ್ವಾಮಿ ಇದ್ದರು,
About The Author
Discover more from JANADHWANI NEWS
Subscribe to get the latest posts sent to your email.