ಲೌಕಿಕ ಬದುಕಿನಲ್ಲಿ ಇದ್ದುಕೊಂಡೆ ಪಾರಮಾರ್ಥವನ್ನು ಸಮಾಜಕ್ಕೆ ಪರಿಚಯಿಸಿದ ವಿಶ್ವದಲ್ಲೇ ಏಕೈಕ ವ್ಯಕ್ತಿ ಎಂದರೆ ಅದು ವಿಶ್ವಗುರು ಜಗಜ್ಯೋತಿ ಬಸವಣ್ಣ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು




ಅವರು ದೊಡ್ಡ ಉಳ್ಳರ್ತಿ ಗ್ರಾಮದಲ್ಲಿ ಬಸವ ಸದನದಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವದ ಸಮಾರಂಭದ ದೀಪ ಬೆಳಗಿಸಿ ಮಾತನಾಡಿ ಅಂತರಂಗದ ಅರಿವನ್ನು ಹೆಚ್ಚಿಸಲು ಆಚಾರವನ್ನು ಶುದ್ದಿಗೊಳಿಸಲು ಸಮಾಜಕ್ಕೆ ಪ್ರೇರಣೆ ನೀಡಿದ್ದು ಬಸವೇಶ್ವರರು ಇವರ ಅನುಭವ ಮಂಟಪದ ಪರಿಕಲ್ಪನೆ ಸಮಾಜದಲ್ಲಿನ ಲಿಂಗ ತಾರತಮ್ಯ ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡುವುದಾಗಿತ್ತು ಮನುಷ್ಯನ ಬದುಕಿನದ್ದಕ್ಕೂ ಇವರ ವಚನಗಳು ಜೀವಾಮೃತವಿದ್ದಂತೆ ಹಾಗೆಯೇ ಕನ್ನಡ ಸಾಹಿತ್ಯ ಮತ್ತು ಪರಂಪರೆಗೆ ಬಸವಣ್ಣನ ವಚನಗಳು ಆಧುನಿಕ ಸ್ಪರ್ಶ ನೀಡಿದವು ಆದರೆ ಬಸವಣ್ಣನ ಆದರ್ಶಗಳು ಮತ್ತು ವಚನಗಳನ್ನು ಪರಿಪೂರ್ಣವಾಗಿ ಸಮಾಜಕ್ಕೆ ಬಳಕೆ ಯಾಗಿ ಅನುಷ್ಠಾನವಾಗದೇ ಇರುವುದು ದುರ್ದೈವದ ಸಂಗತಿ
“ನಡೆಯೊಂದು ನುಡಿಯೊಂದು ಪರಿಯುಳ್ಳವ ತತ್ವವ ವಿಧನಲ್ಲ ಜಡಮತಿ ತನ್ನ ನಗುವವನರಿಯ ಕರ್ಮವಿಲ್ಲ ಭಕ್ತಿ ಜ್ಞಾನವಿಲ್ಲ ವೆಂಬ ಒಮ್ಮೆಯೂ ವೈರಾಗ್ಯ ತನ್ನಲ್ಲಿಲ್ಲ “
ಎನ್ನುವ ವಚನಗಳು ಸೇರಿದಂತೆ ಬಸವೇಶ್ವರರ ಸಂಪೂರ್ಣ ವಚನಗಳು ಸಮಾಜದ ಪರಿವರ್ತನೆಗೆ ದಿವ್ಯ ಮಂತ್ರ ವಿದ್ದಂತೆ ಈ ಎಲ್ಲಾ ಆದರ್ಶಗಳನ್ನು ಇಡೀ ಸಮಾಜ ಪಾಲಿಸಿ ಅವರಿಗೆ ಭಕ್ತಿ ಸಮರ್ಪಣೆ ಮಾಡೋಣವೆಂದು ಹೇಳಿದರು
ಹನುಮಂತ್ ರೆಡ್ಡಿ ವಿರೂಪಾಕ್ಷಪ್ಪ ಕರಿಯಣ್ಣ ಮುಂತಾದವರು ಬಸವಣ್ಣನವರ ಬಗ್ಗೆ ಮಾತನಾಡಿದರು ಬಸವ ಸದನದ ಎಲ್ಲಾ ಕಾರ್ಯಕಾರಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.