January 30, 2026
IMG-20250330-WA0038.jpg

ಚಳ್ಳಕೆರೆ:ಯಾರೋ ಕೀಡಿಗೆಡಿಗಳು ವೈಯಕ್ತಿಕ ದ್ವೇಷದಿಂದ ಫಸಲಿಗೆ ಬಂದಿರುವ ಅಡಿಕೆ ತೋಟವನ್ನು ನಾಶ ಪಡಿಸಲು ಬೆಂಕಿಯನ್ನು ಇಟ್ಟು ಪರಾರಿಯಾಗಿದ್ದು, ಬೆಂಕಿ ಒತ್ತಿಕೊಂಡು ಉರಿಯುವುದನ ಕಂಡ ರೈತ ಅವರ ಮಕ್ಕಳ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ ಘಟನೆ ಯುಗಾದಿ ಅಮಾವಾಸ್ಯೆ ದಿನವಾದ ಶನಿವಾರ ಸಂಜೆ 4 ಗಂಟೆ ಸಮಯದಲ್ಲಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಬಡವನಹಳ್ಳಿ ಕಾವಲಿನಲ್ಲಿ ಬರುವ ರಿ.ಸರ್ವೆ 44/ 20 ನಂಬರ್ ರಲ್ಲಿ ಗುಂಗಜ್ಜರ ಮೈಲಾರಪ್ಪ ಎಂಬ ರೈತ ತನ್ನ 2ಎಕರೆ ಜಮೀನಿನಲ್ಲಿ ನೀರಾವರಿ ಮಾಡಿಕೊಂಡು ಅಡಿಕೆ ಸಸಿಗಳು ಇಟ್ಟು ಬೆಳೆಯನ್ನು ಬೆಳೆಯಲು ಹಾರೈಕೆ ಮಾಡುತ್ತಿದ್ದಾನೆ, ರೈತನ ಬೆಳವಣಿಗೆ ಸಹಿಸದ ಯಾರೋ ಕೀಡಿಗೆಡಿಗಳು ವೈಯಕ್ತಿಕ ದ್ವೇಷದಿಂದ, ಅಡಿಕೆ ಬೆಳೆಯ ಪಕ್ಕದಲ್ಲಿ ಇರುವ ಬದುವಿಗೆ ಬೆಂಕಿಯನ್ನು ಇಟ್ಟು ಪರಾರಿಯಾಗಿದ್ದು. ಗಾಳಿಯ ಮೂಲಕ ಬೆಂಕಿ ಜಮೀನಿನ ಸುತ್ತ ಆವರಿಸಿದ್ದನ ಗಮನಿಸಿದ ರೈತ ಹಾಗೂ ಅವರ ಮಕ್ಕಳ ಸಮಯ ಪ್ರಜ್ಞೆಯಿಂದ ಅಗ್ನಿಶಾಮಕ ದಳದವರನ್ನು ಕರೆಸಿ ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿ ಬೆಂಕಿಯನ್ನು ನಂದಿಸಲು ಯಶಸ್ವಿ ಯಾಗಿದ್ದಾರೆ.

ರೈತ ಮೈಲಾರಪ್ಪ ಮಾತಾನಾಡಿ ಮಾಹಿತಿ ನೀಡಿ‌ ಅಡಿಕೆ ಸಸಿಗಳು ಇಟ್ಟು ಐದು ವರ್ಷದಿಂದ ಅವುಗಳನ್ನು ಹಾರೈಕೆ ಮಾಡಿಕೊಂಡು ಬಂದಿದ್ದೇನೆ ಅಡಿಕೆ ಸಸಿಗಳು ಫಸಲಿಗೆ ಬಂದಿದ್ದು ಫಸಲು ಈ ವರ್ಷ ನಮ್ಮ ಕೈಗೆ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟಿದ್ದೆವು ಅದರೆ ಇದನ್ನು ಸಹಿಸದ ಯಾರೋ ಕೀಡಿಗೆಡಿಗಳು ವೈಯಕ್ತಿಕ ದ್ವೇಷಕ್ಕೆ ಬೆಂಕಿ ಹಚ್ಚಿದರಿಂದ 40 ಅಡಿಕೆ ಗಿಡಗಳು, ಎಂಟು ಬೇವಿನ ಮರಗಳು 15 ಬಾಳೆ ಗಿಡಗಳ ಬದುವಿಗೆ ಬೆಂಕಿಯನ್ನು ಇಟ್ಟಿದ್ದಾರೆ, ಬೆಂಕಿಯ ಝಳಕ್ಕೆ ಅಡಿಕೆ ಗಿಡಗಳು ಬಾಳೆ ಗಿಡಗಳು ಸಂಪೂರ್ಣ ಒಣಗಿ ಹೋಗಿದೆ. ಬೆಂಕಿ ಝಳಕ್ಕೆ ಸಸಿಗಳು ಬತ್ತಿ ಹೋಗುತ್ತವೆ.ಇದರಿಂದ ಫಸಲಿಗೆ ಬಂದಿರುವ ಗಿಡಗಳು ಸುಟ್ಟಿದು ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಪರಿಹಾರ ನೀಡುವಂತೆ ಮನವಿಗೆ ಆಗ್ರಹಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading