January 30, 2026
IMG-20250329-WA0078.jpg

ನಗರದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಇರುವ ಶಾಸಕರ ಭವನಕ್ಕೆ ಇದೀಗ ಮತ್ತೆ ಹೈಟೆಕ್ ಕಾಯಕಲ್ಪದ ಭಾಗ್ಯ ಒದಗಿ ಬಂದಿದೆ.
2004ರಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಭವನ ಉಪಯೋಗಕ್ಕೆ ಬಾರದಂತೆ ಪಾಳು ಬಿದ್ದು ಹೋಗಿತ್ತು. ಉದ್ಘಾಟನೆ ಭಾಗ್ಯ ಕಂಡಿದ್ದು ಬಿಟ್ಟರೆ ಈ ಭವನವನ್ನು ಆಯ್ಕೆ ಆಗಿ ಹೋದ ಶಾಸಕರು ಕುಳಿತು ಸಾರ್ವಜನಿಕರ ಸಮಸ್ಯೆ ಬಗ್ಗೆ ಚರ್ಚಿಸಿದ್ದು ಮಾತ್ರ ವಿರಳ.
ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಗದ್ದುಗೆ ಏರಿದ ಮೇಲೆ ಪಾಳು ಬಿದ್ದು ಹೋಗಿದ್ದ ಭವನಕ್ಕೆ ಸುಣ್ಣ ಬಣ್ಣದಿಂದ ಕಾಯಕಲ್ಪ ನೀಡಲಾಗಿತ್ತು.
ದಿನಕಳೆದಂತೆ ಸುಸಜ್ಜಿತ ವಿಶಾಲವಾದ ಸಭಾಂಗಣ. ಮಿನಿ ಗ್ರಂಥಲಾಯ. ದಿನಪತ್ರಿಕೆಗಳು ಶಾಸಕರ ಭವನಕ್ಕೆ ಸಮಸ್ಯೆಗಳನ್ನು ಒತ್ತು ತಂದ ಜನತೆ ಹಸಿವಿನಿಂದ ಯಾರೂ ಹೋಗ ಬಾರದು ಎಂದು ಹಸಿದ ಹೊಟ್ಟೆಗೆ ಅನ್ನ ಸಾಂಬಾರ್ .ಕಾಫಿ.ಟೀ ವ್ಯವಸ್ಥೆ ಮಾಡಲಾಯಿತು.
ಸರ್ವಜನಾಂಗದ ಶಾಂತಿ ತೋಟ ಎಂಬಂತೆ ವಿವಿಧ ಪಕ್ಷಗಳಿಂದ ಅಧಿಕಾರವಹಿಸಿಕೊಂಡ ರಾಷ್ಟ್ರಪತಿ.ರಾಜ್ಯಪಾಲರ.ಪ್ರಧಾನಿಗಳ.ಸಂಸದರ.ಶಾಸಕರ ಭಾವಚಿತ್ರಗಳು.ದೇಶಕ್ಕೆ ಕೊಡುಗೆ ನೀಡಿದ ಮಹಾನಿಯರ ಭಾವಚಿತ್ರಗಳು ಕ್ಷೇತ್ರದ ಅಭಿವೃದ್ಧಿ ಕಟ್ಟಡಗಳ ಪೋಟೋಗಳು ಇದೊಂದು ಜ್ಞಾನ ದೇಗುಲವಾಗಿದೆ.
ಮತ್ತೆ ಇದೀಗ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ವಿಶಾಲವಾದ ಅಡುಗೆ ಕೋಣೆ ಶಾಸಕ ಕಚೇರಿಗೆ ಹೈಟೆಕ್ ಸ್ಪರ್ಶದ ಕಾಮಗಾರಿ ಭರದಿಂದ ಸಾಗುತ್ತಿದೆ.
ಶಾಸಕರ ಭವನ ಸಾರ್ವಜನಿಕರು ಬಂದು ಹೋಗಲು ಅನುಕೂಲ ಆಗುತ್ತದೆ. ಪ್ರತಿ ತಿಂಗಳ ಎರಡು ಬಾರಿ ತಾಲ್ಲೂಕಿನ ಕಸಬಾ, ಪರಶುರಾಂಪುರ ಹಾಗೂ ತುರುವನೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳ ಜನರು ತಮ್ಮ ಗ್ರಾಮದ ಸಮಸ್ಯೆಗಳೂ ಸೇರಿದಂತೆ ಕುಂದು-ಕೊರತೆಗಳ ಅಹವಾಲು ಸಲ್ಲಿಸಲು ಬರುತ್ತಿದ್ದಾರೆ
ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ ಪರಿಶೀಲಿಸಲು ಭವನದಲ್ಲಿ ಇಬ್ಬರು ಸಹಾಯಕರನ್ನು ನೇಮಿಸಲಾಗಿದ್ದು ಕಚೇರಿಗೆ ಬಂದವರಿಗೆ ಕಾಫಿ ಟಿ ನೀಡಿ ಮನವಿ ಸ್ವೀಕರಿ ಶಾಸಕರ ಹಮನ ಸೆಳೆಯುತ್ತಾರೆ. ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಇದ್ದ ಭವನದ ನವೀಕರಣ ಕಾರ್ಯ ಗಮನಿಸುತ್ತಿರುವ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading