ಹೊಸದುರ್ಗ: ತಾಲೂಕು ಆಡಳಿತ,ತಾಲೂಕು ಪಂಚಾಯಿತಿ ಪುರಸಭೆ ಹೊಸದುರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಹಾಗೂ ತಾಲೂಕು ಶ್ರೀ ವೀರ ಮಡಿವಾಳ ಮಾಚಿದೇವ ಸಂಘ (ರಿ) ಹೊಸದುರ್ಗ ಇವರ ಸಹಯೋಗದೊಂದಿಗೆ ಫೆ ೧ ರಂದು ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಪಟ್ಟಣದ ಅಶೋಕ ರಂಗ ಮಂದಿರದಲ್ಲಿ ೧೨ ನೇ ಶತಮಾನದ ಶರಣರ ವಚನ ಸಂರಕ್ಷಕ ಶ್ರೀ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮವನ್ನ ಈ ಭಾರಿ ವಿಶೇಷ ಹಾಗೂ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಬೆಳಿಗ್ಗೆ ತಾಲೂಕು ಶ್ರೀ ವೀರ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಬಿ.ಲೋಕೇಶಪ್ಪ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೯ ಗಂಟೆಗೆ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಧಾನದಿಂದ ಕಲಾ ತಂಡಗಳೊAದಿಗೆ ಶರಣ ಶ್ರೀ ವೀರ ಮಡಿವಾಳ ಮಾಚಿದೇವರ ಭಾವಚಿತ್ರ ಹಾಗೂ ಜಗದ್ಗುರು ಶ್ರೀ ಬಸವಮಾಚಿದೇವ ಸ್ವಾಮೀಜಿಗಳ ಭವ್ಯ ಮೆರವಣಿಗೆಗೆ ಸಮಾಜ ಸೇವಕ ಗೋಪಿಕೃಷ್ಣ ಚಾಲನೆ ನೀಡಲಿದ್ದು ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಸಾಗಿ ಬೆಳಿಗೆ ೧೧ ಗಂಟೆಯ ಸಮಯಕ್ಕೆ ಕಾರ್ಯಕ್ರಮದ ಮುಖ್ಯ ವೇದಿಕೆಯಾದ ಅಶೋಕ ರಂಗ ಮಂದಿರವನ್ನ ಸೇರಲಾಗುವುದು ಎಂದರು.
ಸAಘದ ಕಾರ್ಯದರ್ಶಿ ಬಿ.ಎಂ.ರಮೇಶ್ ಮಾತನಾಡಿ ಮರೆವಣಿಗೆಯ ನಂತರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನ ಚಿತ್ರದುರ್ಗ ಮಡಿವಾಳ ಗುರುಪೀಠದ ಶ್ರೀ ಡಾ:ಬಸವ ಮಾಚಿದೇವ ಸ್ವಾಮೀಜಿ ವಹಿಸಲಿದ್ದು ಶಾಸಕ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆ ವಹಿಸಲಿದ್ದು ಚಳ್ಳಕರೆ ಶಾಸಕ ಟಿ.ರಘುಮೂರ್ತಿ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ ಎಂದರು.
ಸAಘದ ಗೌರವಾಧ್ಯಕ್ಷ ಬಿ.ಆರ್.ರಾಮಕೃಷ್ಣ ಮಾತನಾಡಿ ಕಾರ್ಯಕ್ರಮದಲ್ಲಿ ಅನುಭವ ಮಂಟಪದಲ್ಲಿ ಶರಣ ಮಾಚಯ್ಯನ ಸ್ಧಾನ ಮತ್ತು ಪವಾಡಗಳು ಕುರಿತಂತೆ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಹೆಚ್.ನಾಗರಾಜು ಉಪನ್ಯಾಸ ನಡೆಸಿಕೊಡಲಿದ್ದಾರೆ ನಂತರ ನಡೆಯಲಿರುವ ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ, ಸಾಧಕರಿಗೆ, ಸಮಾಜದ ಹಿರಿಯ ಮುಖಂಡರುಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
About The Author
Discover more from JANADHWANI NEWS
Subscribe to get the latest posts sent to your email.