December 14, 2025
IMG-20250130-WA0150.jpg

ಚಳ್ಳಕೆರೆ:-ಇಂದಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರು ಆದರ್ಶವಾಗಲಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಸಂತೋಷ ಕುಮಾರ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಹತ್ತಿರದ ದೇವರಹಟ್ಟಿ ಗ್ರಾಮದ ಶ್ರೀಬೊಮ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಗೂ ಅದ್ಭುತವಾದದ್ದನ್ನು ಸಾಧಿಸುವ ಶಕ್ತಿಯಿದೆ.
ಅದರಲ್ಲಿ ನಾವು ವಿಶ್ವಾಸವಿಟ್ಟು ಪರಿಶ್ರಮಪಟ್ಟರೆ ಖಂಡಿತವಾಗಿಯೂ ಉನ್ನತವಾದದ್ದನ್ನು ಸಾಧಿಸಬಹುದು.ಇಂತಹ ಸಕಾರಾತ್ಮಕ ಜೀವನಶೈಲಿಯನ್ನು ರೂಢಿಸಿಕೊಳ್ಳಲು ನಾವು ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು. ಚೇತನ್ ಕುಮಾರ್ ಮಾತನಾಡಿ ಸ್ವಾಮಿ ವಿವೇಕಾನಂದರ ಮುಖ್ಯ ಸಂದೇಶವೇ ನಾವು ಕುರಿಗಳೆನ್ನುವ ಭ್ರಾಂತಿಯನ್ನು ಬಿಟ್ಟು ಹುಲಿಗಳೆಂಬ ನಿಜಸತ್ಯವನ್ನು ಅರಿತುಕೊಳ್ಳುವುದಾಗಿದೆ ಎಂದು ಹೇಳಿದರು.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಭಕ್ತರಿಗೆ ಭಜನೆಗಳನ್ನು ಹೇಳಿಕೊಟ್ಟರು.ಈ ಸಂದರ್ಭದಲ್ಲಿ ಚಳ್ಳಕೆರೆಯ ಶ್ರೀಶಾರದಾಶ್ರಮದ ವತಿಯಿಂದ ದೇವರ ಹಸುಗಳಿಗೆ ಬಾಳೆಹಣ್ಣು ವಿತರಿಸಲಾಯಿತು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಬೊಮ್ಮಕ್ಕ, ಚೆನ್ನಕೇಶವ, ಡಾ.ಭೂಮಿಕ, ಎತ್ತಿನ ಕಾಟಯ್ಯ,ವಿಜಯಮ್ಮ, ಚಿತ್ತಮ್ಮ, ಲಕ್ಷ್ಮೀ ,ಅಶ್ವಿನಿ,ಭೂಮಿಕ, ಶಾರದಾ,ಹೇಮಾ, ಹೇಮಲತಾ,ರಕ್ಷಿತ, ವಿನೋದ್, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading