January 29, 2026
IMG-20250130-WA0148.jpg

ನಾಯಕನಹಟ್ಟಿ: ಕರ್ನಾಟಕ ರಾಜ್ಯ ಉರ್ದು ಶಾಲಾ ಶಿಕ್ಷಕರ ಸಂಘ ಬೆಂಗಳೂರು. ಜಿಲ್ಲಾ ಶಾಖೆ ಚಿತ್ರದುರ್ಗ ವತಿಯಿಂದ ಫಾತಿಮ್ ಶೇಕ್ ಮತ್ತು ಮೌಲಾನಾ ಅಜಾದ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸಸಿಗೆ ನೀರು ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಫಾತಿಮಾ ಶೇಖ್ ಅವರು 1831 ಜ. 9ರಂದು ಪುಣೆಯಲ್ಲಿ ಜನಿಸಿದರು. ಫಾತಿಮಾ ತನ್ನ ಸಹೋದರ ಉಸ್ಮಾನ್‌ನೊಂದಿಗೆ ವಾಸಿಸುತ್ತಿದ್ದರು. ಕೆಳಜಾತಿಗಳ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದ್ದಾಗ ಫಾತಿಮಾ ಕುಟುಂಬ ಫುಲೆ ದಂಪತಿಗೆ ಆಶ್ರಯ ನೀಡಿತ್ತು. ಶೇಖ್‌ ಅವರ ಮನೆಯ ಛಾವಣಿ ಅಡಿಯಲ್ಲಿಯೇ ಫುಲೆ ದಂಪತಿ ಶಾಲೆಯನ್ನು ಆರಂಭಿಸಿದ್ದರು. ಈ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು, ಜಾತಿ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣವನ್ನು ನಿರಾಕರಿಸಿದ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ನೀಡಿದರು.ಸಮಾನತೆಗಾಗಿ ತಮ್ಮ ಜೀವಮಾನವಿಡಿ ಹೋರಾಟ ಮಾಡಿದ ಶೇಖ್, ಸ್ಥಳೀಯ ಗ್ರಂಥಾಲಯದಲ್ಲಿ ಕಲಿಯಲು ಮತ್ತು ಭಾರತೀಯ ಜಾತಿ ವ್ಯವಸ್ಥೆಯ ಬಿಗಿ ಹಿಡಿತದಿಂದ ಪಾರಾಗಲು ತನ್ನ ಸಮುದಾಯದ ದೀನದಲಿತರ ಮನೆ-ಮನೆಗೆ ತೆರಳಿ ಅವರನ್ನು ಆಹ್ವಾನಿಸಿದರು. ಸತ್ಯಶೋಧಕ್ ಆಂದೋಲನದಲ್ಲಿ ಭಾಗಿಯಾಗಿದ್ದವರನ್ನು ಅವಮಾನಿಸಲು ಪ್ರಯತ್ನಿಸಿದ ಪ್ರಬಲ ವರ್ಗಗಳಿಂದ ಅವರು ದೊಡ್ಡ ಪ್ರತಿರೋಧವನ್ನು ಎದುರಿಸಿದರು. ಹೀಗಿದ್ದರೂ ಶೇಖ್ ಮತ್ತು ಆಕೆಯ ಮಿತ್ರರು ಹೋರಾಟವನ್ನು ಮುಂದುವರಿಸಿದರು ಎಂದು ಹೇಳಿದರು.

ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣ ತಜ್ಞೆ ಮತ್ತು ಸ್ತ್ರೀವಾದಿ ಫಾತಿಮಾ ಶೇಖ್.ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹವರ್ತಿಯಾಗಿದ್ದ ಫಾತಿಮಾ ಶೇಖ್, 1848ರಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರು. ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಾರುತೇಶ್ ಮಾತನಾಡಿ ಭಾರತದ ಮೊಟ್ಟ ಮೊದಲ ಶಿಕ್ಷಕಿ ದಣಿವರಿಯದ ಸತ್ಯ ಶೋಧಕ, ಆಧುನಿಕ ಶಿಕ್ಷಣದ ತಾಯಿ, ಸಾವಿತ್ರಿಬಾಯಿ ಫುಲೆ ಅವರ ವೇಷಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನು ಅವರು ಧರಿಸುತ್ತಿದ್ದರು. ಸಾವಿತ್ರಿಬಾಯಿ ಫುಲೆ 1831ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಂಗನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ್ ಬಾಲ್ಯದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾ ಫುಲೆ ಅವರ ವನ್ನು ವಿವಾಹವಾದರು. ಅವರ ಯಶಸ್ಸು ಶ್ರೇಯಸ್ಸಿನ ಪಾಲು ಜ್ಯೋತಿಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾ ಫುಲೆ ಅವರಿಗೆ ಸಲ್ಲುತ್ತದೆ. ಬಾಲ್ಯ ವಿವಾಹ ರೂಡಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ ಎಂಟು ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಫುಲೆ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. 1847ರಲ್ಲಿ ಸಾವಿತ್ರಿಬಾಯಿ ಫುಲೆ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಅವರಿಗೆ 17 ವರ್ಷ ವಯಸ್ಸು ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾದರು ಎಂದು ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೇ ಸರ್ವ ಮಂಗಳ ಉಮಾಪತಿ, ಸದಸ್ಯರಾದ ಕೆ ಪಿ ತಿಪ್ಪೇಸ್ವಾಮಿ,ಜೆ. ಆರ್. ರವಿಕುಮಾರ್, ಅಬಕಾರಿ ತಿಪ್ಪೇಸ್ವಾಮಿ, ಎಂ ಟಿ ಮಂಜುನಾಥ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಓ .ಶ್ರೀನಿವಾಸ್, ಡಾ. ಅಬ್ದುಲ್ ಹಮೀದ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಸಿ. ಹನುಮಂತಪ್ಪ, ವಿಶ್ವನಾಥ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರು ಡಿ.ಸಿ. ಪಾಟೀಲ್, ಉರ್ದು ಶಾಲೆಯ ಜಿಲ್ಲಾಧ್ಯಕ್ಷ ಸೈಯದ್ ಹರೋನ್ ರಶೀದ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಸಣ್ಣಸೂರಮ್ಮ, ತಾಲೂಕು ಕಾರ್ಯದರ್ಶಿ ಹನುಮಂತ್ ರಾಯ, ನಾಯಕನಹಟ್ಟಿ ಸಿ ಆರ್ ಪಿ ಈಶ್ವರಪ್ಪ, ಶಿಕ್ಷಕ. ಸದಾಶಿವಯ್ಯ ,ನಿರೂಪಣೆ ಉರ್ದು ಶಿಕ್ಷಕರ ಸಂಘದ ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಅಬ್ದುಲ್ ಮಾಲಿಕ್ ಖಾಜೆ, ಉರ್ದು ಶಾಲೆಯ ಶಿಕ್ಷಕರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading