ಚಳ್ಳಕೆರೆ ಜ.30
ಗೋಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಕೆ. ಭವಾನಿ ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.







ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯತಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕೆ. ಭವಾನಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
17 ಸದಸ್ಯರುದ್ದು ಯಾರೂ ನಾಮಪತ್ರಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿಶು ಅಭಿವೃದ್ಧಿ ಅಧಿಕಾರಿ ಹರಿಪ್ರಸಾಧ್ ಘೋಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ,ರಾಧಮ್ಮ ಉಪಾಧ್ಯಕ್ಷೆ ರಾಧಮ್ಮ
ಸದಸ್ಯರಾದ ಶಿವಣ್ಣ ರಂಗೇಗೌಡ. ಓಚಿ ಬೋರಯ್ಯ, . ಕಲಾವತಿ ,ಸುಮಿತ್ರ.ಟಿ.ನಾಗರಾಜ್,ಗೀತಾ .ಲಕ್ಷ್ಮಿ, ಹಾಗೂ ಗ್ರಾಮದ ಮುಖಂಡರು ನೂತನವಾಗಿ ಆಯ್ಕೆಯಾದಅಧ್ಯಕ್ಷೆ ಭವಾನಿಗೆ ಸನ್ಮಾನಿಸಿ ಗೌರವಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಕೆ ಭವಾನಿ ಇವರಿಗೆ ಪಿಡಿಓ ಎನ್ ಆರ್. ತಿಪ್ಪೇಸ್ವಾಮಿ ಕಾರ್ಯದರ್ಶಿ ಎಸ್ ಆರ್. ಕರಿಯಪ್ಪ ಹಾಗೂ ಗ್ರಾಮಪಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.