ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಮಹನೀಯರ, ದಾರ್ಶನಿಕರ ಹಾಗೂ ಗಣ್ಯರ ಆದರ್ಶ ಗುಣಗಳನ್ನು ಸರ್ವರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ರುಖಿಯಾ ಬೇಗo ಹೇಳಿದರು.
ಅವರು ಸಾಲಿಗ್ರಾಮ ಪಟ್ಟಣದ ಗಾಂಧಿ ವೃತ್ತದಲ್ಲಿ
ತಾಲೂಕು ವಿಶ್ವ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರು ಮತ್ತು ರಾಷ್ಟ್ರಕವಿ ಕುವೆಂಪು ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಡು ಕಂಡಂತಹ ಮಹಾನ್ ಚೇತನಗಳು ಇವರುಗಳಾಗಿದ್ದು ಅವರುಗಳು ಹಾಕಿಕೊಟ್ಟಿರುವ ಸನ್ಮಾರ್ಗ ಮತ್ತು ನಡೆದು ಬಂದ ದಾರಿಯಲ್ಲಿ ಸರ್ವರು ಸಾಗಬೇಕು. ಆ ಮೂಲಕ ಅವರುಗಳಿಗೆ ನಿಜವಾಗಿ ಗೌರವ ಸಲ್ಲಿಸಬೇಕು ಎಂದರು. ಇಂತಹ ಮಹನೀಯರುಗಳನ್ನು ವರ್ಷಕ್ಕೊಮ್ಮೆ ನೆನೆಯದೆ ನಿತ್ಯ ಸ್ಮರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರು ಮತ್ತು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ, ಸಂಘದಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಂತರ ಸಾರ್ವಜನಿಕರಿಗೆ ತಿಂಡಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎ.ಟಿ.ಸೋಮಶೇಖರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಂ, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ತಾಲೂಕು ವಿಶ್ವ ಒಕ್ಕಲಿಗರ ಸಂಘದ ಅಧ್ಯಕ್ಷ ಕುಪ್ಪಳ್ಳಿ ಸೋಮಶೇಖರ್, ಉಪಾಧ್ಯಕ್ಷ
ಸಾ.ರಾ.ಗುರುಪ್ರಸಾದ್, ಕಾರ್ಯದರ್ಶಿ ಎಸ್.ಆರ್.ಪ್ರಕಾಶ್, ಖಜಾಂಚಿ ನಾಗೇಶ್, ಸಂಘಟನಾ ಕಾರ್ಯದರ್ಶಿಗಳಾದ ಟ್ರ್ಯಾಕ್ಟರ್ ಅನಂತ, ಪಾಪಣ್ಣ, ಗ್ರಾ.ಪಂ. ಉಪಾಧ್ಯಕ್ಷೆ ಸುಧಾರೇವಣ್ಣ, ಸದಸ್ಯರಾದ ಲೋಕೇಶ್, ಹರೀಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಮುಖಂಡರುಗಳಾದ ಬಲರಾಮೇಗೌಡ, ಕುಮಾರ್, ಜ್ಯೋತಿ ವೆಂಕಟೇಶ್, ಸಾ.ರಾ.ಸತೀಶ್, ಮಟನ್ ಮಹದೇವ್, ಎಸ್.ಕೆ.ಶ್ರೀನಿವಾಸ್, ಚಿಕ್ಕನಾಯಕನಹಳ್ಳಿವಾಸು, ಗೋಪಾಲ, ಲಾಲುಸಾಹೇಬ್, ಬೊಮ್ಮರಾಯಿಗೌಡ, ರವೀಶ್, ಸೋಮು, ಮೇಲೂರು ಮಂಜು, ಆಟೋ ರಾಮು, ಎಸ್.ಎಸ್.ಮಂಜು, ಮಾರುತಿ, ಮಂಜು, ನವೀನ್, ಕಾಟ್ನಾಳು ಸುನೀಲ್, ಗುಡ್ಡೆರಂಗಪ್ಪ, ಕೃಷ್ಣ, ಬಾಹುಬಲಿ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.