March 16, 2026
IMG-20241229-WA0184.jpg

ಚಳ್ಳಕೆರೆ ಡಿ.29

ಆಯಿಲ್ ಸಿಟಿಯಲ್ಲಿ ಎರಡನೇ ಬಾರಿಗೆ ಶಬರಿಮಲೆ ಸನ್ನಿಧಾನದ ಶೈಲಿಯಲ್ಲಿರುವ ಪ್ರತಿರೂಪದ ಮಂಪಟವನ್ನು ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ನಿರ್ಮಿಸಿ ಜನವರಿ 2 ರಂದು ಗುರುವಾರ ವಿಶೇಷವಾಗಿ ಅಯ್ಯಪ್ಪ ಪೂಜೆ ಮತ್ತು ಪಡಿಪೂಜಾ ಮಹೋತ್ಸವವನ್ನು ಇಲ್ಲಿನ ಹರಿಹರಸುತ ಸೇವಾ ಸಮಿತಿಯಿಂದ 4ನೇ ವರ್ಷದ ಅಯ್ಯಪ್ಪ ಪೂಜೆ ಪಡಿಪೂಜಾ ಮಹೋತ್ಸವ ಆಚರಿಸಲಾಗುತ್ತಿದೆ.

ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಬರಿಮಲೆ ಅರ್ಚಕರಾದ ಪೂಜ್ಯ ಶ್ರೀಯುತ ಆನಂದ ನಂಬೂದರಿ ಮತ್ತು ತಂಡದಿಂದ ಕೇರಳ ಸಂಪ್ರದಾಯಕ ಚಂಡೆಮೇಳದೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಜನವರಿ 2 ಗುರುವಾರ ಬೆಳಗಿನ ಜಾವ 5 ಗಂಟೆಗೆ ಮಹಾಗಣಪತಿ ಹೋಮ.6 ಗಂಟೆಗೆ ನವಗ್ರಹ ಹೋಮ.
7 ಗಂಟೆಗೆ ಗೋಪೂಜೆ.ತುಪ್ಪಾಭಿಷೇಕ ಅಷ್ಟಾಭಿಷೇಕ.10 ಗಂಟೆಗೆ ಸರ್ವೈಶ್ಚರ್ಯ ಪೂಜೆ.
ಸಂಜೆ 6 ಗಂಟೆಗೆ ವಿಶೇಷ ಪಡಿ ಪೂಜೆ.8 ಗಂಟೆಗೆ ಪುಸ್ಪಾಭಿಷೇಕ. ರಾತ್ರಿ11 ಗಂಟೆಗೆ ಹರಿವರಾಸನಂ
ಶ್ರೀಯುತ ವೀರಮಣಿರಾಜು ಇವರಿಂದ ಪ್ರಪ್ರಥಮಬಾರಿಗೆ ಚಳ್ಳಕೆರೆ ನಗರಕ್ಕೆ ಬಂದು ವಿಶೇಷ ಅಯ್ಯಪ್ಪಗಾನಾಮೃತ ಮತ್ತು ಭಜನಾ ಕಾರ್ಯಕ್ರಮ ವಿರುತ್ತದೆ.
ಕೇದರನಾಥದಿಂದ 4 ಸಾವಿರ ಕಿ.ಮೀ ಅಯ್ಯಪ್ಪ ಸನ್ನಿದಿಗೆ ಪಾದಯಾತ್ರೆ ಮಾಡಿದ್ದ ಅಂಕುಶ್ ಸ್ವಾಮೀಜಿಯವರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ರಾತ್ರಿ 8 ಗಂಟೆಯಿಂದಲೇ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗುವುದು.
ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವರಿ ಸಚಿ ಡಿ.ಸುಧಾಕರ್.ಶಾಸಕರಾದ ಟಿ.ರಘುಮೂರ್ತಿ. ಕೆ.ಸಿ.ವೀರೇಂದ್ರಪ್ಪಿ ಹಾಗೂ ನಗರಸಭೆ ಅಧ್ಯಕ್ಷೆ ಉಪಾಧ್ಯಕ್ಷೆ ಸದಸ್ಯರು ಭಾಗವಹಿಸಲಿದ್ದಾರೆ.
ಹರಿಹರಸುತ ಸೇವಾ ಸಮಿತಿ ಸದಸ್ಯ ಕೀರ್ತಿ ಪ್ರಸಾದ್ ಮಾತನಾಡಿ ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ .ಮಕರ ಸಂಕ್ರಾಂತಿಯ ಶುಭ ಕೋರುತ್ತಾ ಅಯ್ಯಪ್ಪಸ್ವಾಮಿಯ ಹತ್ತಾರು ವಿಶೇಷ ಪೂಜಾ ಕಾರ್ಯಕ್ರಮ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಶಬರಿಮಲೆಯ 18 ಮೆಟ್ಟಿಲುಗಳ ಅಕರ್ಷಕ ಶೆಟ್ ನಿರ್ಮಾಣ ಮಾಡುವ ಜತೆಗೆ ಶಬರಿಮಲೆ ಅರ್ಚಕ ಶ್ರೀ ಆನಂದನಂಬೂರಿ ಸಮ್ಮುಖದಲ್ಲಿ ಅವರ ತಂಡ ಹಲವು ಪೂಜಾ ಕಾರ್ಯಗಳ ಜತೆಗೆ ಕೇರಳದ ಸಾಂಪ್ರದಾಯಿಕ ಚಂಡೆಮೇಳದೊಂದಿಗೆ ವಿಶೇಷ ಭಗವತಿ ಸೇವೆ ನಡೆಸಿ ಕೊಡುತ್ತಿರುವುದು ವಿಶೇಷವಾಗಿದೆ.
ಜ.2ರ ಮುಂಜಾನೆಯಿಂದ ಗಣಹೋಮದೊಂದಿಗೆ ಪೂಜಾ ಕಾರ್ಯ ಆರಂಭಿಸಿ ದತ್ತಾತ್ರೇಯಸ್ವಾಮಿ ದೇವಾಲಯದಿಂದ ಅಯ್ಯಪ್ಪಸ್ವಾಮಿ ವಿಗ್ರಹವನ್ನು ಮೆರವಣಿಗೆಯ ಮೂಲಕ ಗಾಯತ್ರಿ ಕಲ್ಯಾಣ ಮಂಪಟದ ಆವರಣದಲ್ಲಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ಮಂಟಪದಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಪಡಿಪೂಜಾ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
ಇತ್ತ ಶಬರಿಮಲೆ ಪ್ರತಿರೂಪದಂತೆ ನಿರ್ಮಿಸಿ ಪ್ರತಿಷ್ಠಾಪಿಸಿರುವ ಮಂಪಟದಲ್ಲಿ ಭಕ್ತರು ದರ್ಶನ ಪಡೆದುಕೊಂಡು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿಶೇಷ ಪೂಜಾ ಕಾರ್ಯದಲ್ಲಿ ನಡೆಸಲಾಗುತ್ತಿದೆ. ಭಕ್ತರು ಅಯ್ಯಪ್ಪನ ದರ್ಶನ ಮಾಡಿಕೊಂಡು ಪ್ರಸಾದ ಸ್ವೀಕರಿಸಿಕೊಂಡು ಹೋಗುವಂತ ವ್ಯವಸ್ಥೆಮಾಡಲಾಗುತ್ತಿದೆ.
ಚಳ್ಳಕೆರೆಯಲ್ಲಿ ಎರಡನೇ ಬಾರಿಗೆ ಶಬರಿ ಮಲೆ ಅಪ್ಪಯ್ಯಸ್ವಾಮಿ ಮಂಟಪ ಶೈಲಿಯಲ್ಲಿ ನಿರ್ಮಿಸಿ ಅಯ್ಯಪ್ಪ ಪೂಜೆ ಮತ್ತು ಪಡಿಪೂಜೆ ಸಲ್ಲಿಸಲಾಗುತ್ತಿದ್ದು,ಶಬರಿ ಮಲೆಗೆ ಸನ್ನಿಧಿಗೆ ಹೋಗಲಾಗದವರು ಸ್ಥಳೀಯವಾಗಿಯೇ ಅಯ್ಯಪ್ಪನ ದರ್ಶನ ಪಡೆಯಬಹುದು. ಇನ್ನೂ ವಿಶೇಷವಾಗಿ 10 ರಿಂದ 50 ವರ್ಷದ ಮಹಿಳೆಯರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಕೇರಳದಲ್ಲಿ ಮಾತ್ರ ಮಾಡುವ ಅಯ್ಯಪ್ಪ ಪೂಜೆ ಮತ್ತು ವಿಶೇಷವಾಗಿ ಭಗವತಿ ಸೇವೆಯನ್ನು 108 ಮಣ್ಣಿನ ದೀಪಗಳನ್ನಿಟ್ಟು ಚಂಡೆ ಮೇಳ ವಾದ್ಯದೊಂದಿಗೆ ಚಳ್ಳಕೆರೆಯಲ್ಲಿ ಪೂಜೆ ಸಲ್ಲಿಸುತ್ತಿರುವುದು ವಿಶೇಷ.ಇದಕ್ಕಾಗಿ ಶಬರಿ ಮಲೆಯಿಂದಲೇ ಅರ್ಚಕರನ್ನು ಕರೆಸಲಾಗುತ್ತಿದೆ. ವಿಶೇಷವಾಗಿ ಶಬರಿ ಮಲೆ ಅಯ್ಯಪ್ಪಸ್ವಾಮಿ ಪ್ರತಿರೂಪದಂತೆ 23 ಅಡಿ ಎತ್ತರದ ಮಂಟಪ ನಿರ್ಮಿಸಿ ಪೂಜೆ ಸಲ್ಲಿಸಲಾಗುವುದು .
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಸಗವಹಿಸಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆಯುವಂತೆ ಹರಿಹರಸುತ ಸೇವಾ ಸಮಿತಿ ಮನವಿ ಮಾಡಿಕೊಂಡಿದ್ದಾರೆ.

ಚಳ್ಳಕೆರರೆ ನಗರದ ಕಳೆದ ವರ್ಷ ಗಾಯಿತ್ರಿ ಕಲ್ಯಾಣಮಂಟದಲ್ಲಿ ಶಬರಿಮಲೆ ಪ್ರತಿರೂಪದಂತೆ ಮಂಟಪ ನಿರ್ಮಿಸಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ಚಿತ್ರಣ  ಎರಡನೇ ಬಾರಿಯ ಈ ವರ್ಷವೂ ಸಹ ಇದೇ ರೀತಿ ನಡೆಯಲಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading