ಚಿತ್ರದುರ್ಗ ನ.29:
ಸತ್ಯ ಹಾಗೂ ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂಬ ಮಹಾತ್ಮ ಗಾಂಧೀಜಿ ಸಂಕಲ್ಪ ಹಾಗೂ ಸಮಾಜದಲ್ಲಿ ತುಳಿತ ಹಾಗೂ ಅಸ್ಪøಶ್ಯತೆಗೆ ಒಳಗಾದ ಜನರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಡಾ.ಅಂಬೇಡ್ಕರ್ ಅವರ ಸಂಕಲ್ಪ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ ಹೇಳಿದರು.


ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಕಲಾ (ಸ್ವಾಯತ್ತ) ಕಾಲೇಜು ಸಹಯೋಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ, ಸಾಂಸ್ಕ್ರತಿಕ, ಕ್ರೀಡೆ, ಎನ್.ಸಿ.ಸಿ, ಎನ್.ಎಸ್.ಎಸ್, ಹಾಗೂ ರೆಡ್‍ಕ್ರಾಸ್ ಮತ್ತು ರೋವರ್ಸ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭೆ ಎಲ್ಲರಲ್ಲೂ ಅಡಕವಾಗಿರುತ್ತದೆ. ಅದನ್ನು ಗುರುತಿಸಿಕೊಂಡು ಗುರಿ ಹಾಗೂ ಸಂಕಲ್ಪದೊಂದಿಗೆ ಮುನ್ನಡೆಯಬೇಕು. ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಸೇರಿದಂತೆ ಹಲವಾರು ಸಾಧಕರು ಸಂಕಲ್ಪದಿಂದಲೇ ಜೀವಿಸಿ ಸಾಧನೆ ಮಾಡಿದ್ದಾರೆ. ಶಾಂತಿಯುತವಾಗಿ ಸ್ವಾತಂತ್ರ್ಯ ಹೋರಾಟ ಮಾಡಬೇಕು ಎನ್ನುವುದು ಮಹಾತ್ಮಾ ಗಾಂಧೀಜಿಯವರ ಸಂಕಲ್ಪವಾಗಿತ್ತು. ಇದಕ್ಕಾಗಿ ಸತ್ಯ ಹಾಗೂ ಅಹಿಂಸೆಯನ್ನು ತಮ್ಮ ಹೋರಾಟದ ಅಸ್ತ್ರಗಳನ್ನಾಗಿ ಬಳಸಿದರು. ಶತಮಾನಗಳ ಕಾಲ ತುಳಿತಕ್ಕೆ ಒಳಗಾಗಿದ್ದ ಅಸ್ಪøಶ್ಯರ ವಿಮೋಚನೆ ಅಂಬೇಡ್ಕರ್ ಸಂಕಲ್ಪ ಮಾಡಿದರು. ಸಂವಿಧಾನ ಅಸ್ಪøಶ್ಯತೆಯನ್ನು ತೊಡೆದು ಹಾಕಲು ಕಾನೂನು ರಚಿಸಿದರು. ದಮನಿತರಿಗೆ ಶಾಸನ ಬದ್ದ ಅವಕಾಶ ಹಾಗೂ ರಕ್ಷಣೆ ದೊರೆಯುವಂತೆ ಮಾಡಿದರು. ಸಂವಿಧಾನದ ಮೂಲ ಉದ್ದೇಶವೇ ಸಮಾನತೆ ತರುವುದಾಗಿದೆ. ವಿದ್ಯಾರ್ಥಿಗಳು ಸಹ ಸಮಾಜದಲ್ಲಿ ಬದಲಾವಣೆ ತರುವ ಸಂಕಲ್ಪದೊಂದಿಗೆ ವಿದ್ಯಾಭ್ಯಾಸ ಮಾಡಬೇಕು. ಜೀವನದ ಹಾದಿಯಲ್ಲಿ ಏನಾದರೂ ಸಾಧಿಸಲಿಕ್ಕೆ ಹಠ, ಛಲ, ನಿರಂತರ ಅಧ್ಯಯನಶೀಲತೆಗಳು ಎಡೆ ಮಾಡಿಕೊಡುತ್ತವೆ. ವಿದ್ಯಾರ್ಥಿಗಳೂ ಸ್ವಾಭಿಮಾನದಿಂದ ಕಂಡುಕೊಂಡು ಮನೆಯವರು, ನೆರೆ ಹೊರೆಯವರು ಹಾಗೂ ವಿದ್ಯೆ ಸಂಸ್ಕಾರದ ಕಲಿಸಿದ ಗುರು ವೃಂದದವರನ್ನು ಪ್ರೀತಿ-ಸ್ನೇಹ, ಗೌರವದಿಂದ ಕಾಣುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ ಕವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಕರಿಯಪ್ಪ ಜೆ ಮಾಳಿಗೆ, ಸಾಂಸ್ಕøತಿಕ ಚಟುವಟಿಕೆಗಳು ವಿಶ್ವಪ್ರೀತಿ, ವಿಶ್ವ ಮೈತ್ರಿಯ ಪ್ರಜ್ಞೆಯನ್ನು ಅರಳಿಸುವವು. ವಿದ್ಯಾರ್ಥಿಗಳಿಗೆ ತರಬೇತಿಯ ಪಠ್ಯದಷ್ಟೇ ಮುಖ್ಯ. ಪಠ್ಯೇತರ ಚಟುವಟಿಕೆಗಳು ಇವೆರಡನ್ನೂ ಸಮನ್ವಯಗೊಳಿಸಿಕೊಂಡು ಸಾಗಿದ್ದಲ್ಲಿ ಯಶಸ್ಸು ಲಭಿಸುತ್ತದೆ ಎಂದರು.
ಬರಗಾಲ, ಬಡತನ ಹಿನ್ನಲೆ ಇರುವವಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರತೆಗೆಯುವ ಪ್ರಯತ್ನವೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ದೇಶವಾಗಿದೆ ಎಂದು ಹೇಳಿದರು.
ಕಾಲೇಜು ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಹನುಮಂತಪ್ಪ ಮಾತನಾಡಿ, ಶಿಕ್ಷಣದ ಜೊತೆಗೆ ಸಾಂಸ್ಕøತಿಕ ಮತ್ತು ಕ್ರೀಡೆ ಪಠ್ಯೇತರ ಚಟುವಟಿಕೆಗಳು ಅಭಿವೃದ್ಧಿ ವ್ಯಕ್ತಿಗಳನ್ನಾಗಿ ಮಾಡುತ್ತವೆ. ಉತ್ತಮ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಸಾಧಕರ ಪಟ್ಟಿಯಲ್ಲಿ ಸೇರುತ್ತಿರಿ ಎಂದರು.
ಐಕ್ಯೂಎಸಿ ಸಂಚಾಲಕಿ ಹಾಗೂ ಪ್ರಾಧ್ಯಾಪಕಿ ಡಾ.ಆರ್.ತಾರಿಣಿ ಶುಭದಾಯಿನಿ ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ಉಪಸ್ಥಿತರಿದ್ದು “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಹಾಡು ಪ್ರಸ್ತುತಪಡಿಸಿದರು. ಎನ್.ಸಿ.ಸಿ ಅಧಿಕಾರಿ ಪ್ರೊ.ಮಂಜುನಾಥ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಸುರೇಶ, ಸಾಂಸ್ಕ್ರತಿಕ ಸಮಿತಿ ಸಂಚಾಲಕ ಪ್ರೊ.ಬಿ.ಇ.ಜಗನ್ನಾಥ, ಪತ್ರಾಂಕಿತ ವ್ಯವಸ್ಥಾಪಕ ಮಾರ್ಡಿನ್ ಸ್ಯಾಮುಯೆಲ್ ಡಬ್ಲ್ಯೂ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಸನ್ನಕುಮಾರ.ಡಿ.ಆರ್, ಯುವ ರೆಡ್ ಕ್ರಾಸ್ ಸಂಚಾಲಕ ಡಾ.ಪ್ರದೀಪಕುಮಾರ.ಜಿ.ಎಂ, ರೋವರ್ಸ್ ಲೀಡರ್ ಪ್ರೊ.ಮುರುಳಿಧರ.ಬಿ, ರಾಷ್ಟ್ರೀಯ ಯೋಜನಾಧಿಕಾರಿ ಡಾ.ವಿ.ಪ್ರಸಾದ್, ರೇಂಜರ್ಸ್ ಲೀಡರ್ ಡಾ.ಕೆ.ಲಿಲಾವತಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.