
ಚಳ್ಳಕೆರೆ: ವಿದ್ಯಾರ್ಥಿಗಳು ಕೇವಲ ಪಠ್ಕಕ್ಕೆ ಮನ್ನಣೆ ನೀಡದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಜಿಲ್ಲೆ ಹಾಗೂ ತಾಲ್ಲೂಕಿಗೆ ಹೆಸರು ತರಬೇಕು.ಎಂದು ಶಾಸಕ ಟಿ ರಘುಮೂರ್ತಿ ವಿಧ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ನಗರದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಧ್ಯಾರ್ಥಿಗಳ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ತಂದೆ ತಾಯಿ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರ ಅಭಿರುಚಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಅದರಲ್ಲಿ ಯಶಸ್ಸು ಕಂಡು ನಾಡಿಗೆ ಕೀರ್ತಿ ತರುತ್ತಾರೆ. ಇಂತಹ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಮಕ್ಕಳು ಭಾಗವಹಿಸಿ ಯಶಸ್ವಿಯಾಗಲೆಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ವಿದ್ಯಾರ್ಥಿಗಳು ಇಂತಹ ವೇದಿಕೆಗಳ ಮೂಲಕ ತಮ್ಮ ಕಲೆಗಳನ್ನು ಪ್ರದರ್ಶಿಸಿ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ತೆರಳಿ ಉತ್ತಮ ಸಾಧನೆ ಮಾಡಬೇಕು ತಮ್ಮಲ್ಲಿನ ಪ್ರತಿಭೆಯನ್ನು ನಾಶಗೊಳಿಸದೆ ಹೊರಹೊಮ್ಮಿಸಿದಾಗ ವಿದ್ಯಾರ್ಥಿಗಳ ಮನದಲ್ಲಿನ ಕೀಳರಿಮೆ ದೂರವಾಗುತ್ತದೆ ಎಂದು ತಿಳಿಸಿದರು.
ತಳಕು ಹೋಬಳಿ ಕಾಟಂದೇವರನಕೋಟೆ ಗ್ರಾಮದ ಸರ್ವೋದಯ ಶಾಲೆಯ ವಿದ್ಯಾರ್ಥಿ ಸಿ. ಅಜಯ್ ಭರತನಾಟ್ಯ ಮತ್ತು ಜನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಅಭಿನಂದಿಸಿದ ಶಾಸಕರು,
ನೃತ್ಯಪರಂಪರೆಯಲ್ಲಿ ಭರತನಾಟ್ಯ ನೆಲಮೂಲದ ಸಂಸ್ಕೃತಿಯ ವೈಭವವಾಗಿದೆ. ಇಂತಹ ಕಲಾ ಚಟುವಟಿಕೆಗಳು ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಬೇಕು ಎಂದು ಹೇಳಿದರು.
ಸರ್ವೋದಯ ಶಾಲೆಯ ವಿದ್ಯಾರ್ಥಿಗಳಾದ ಜಿ.ಜೆ. ಶರತ್, ಎನ್. ರಜಿನಿ, ಎಲ್. ಆಶಾ, ಆಶುಭಾಷಣ, ರಂಗೋಲಿ ಮತ್ತು ಛದ್ಮವೇಷದಲ್ಲಿ ವಿಜೇತರಾಗಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.
ಹಿರಿಯ ಮತ್ತು ಕಿರಿಯ ವಿಭಾಗದ 22 ಸ್ಪರ್ಧೆಗಳು ಸೇರಿದಂತೆ ವೈಯಕ್ತಿಕ 13 ಸ್ಪರ್ಧೆ ಮತ್ತು 3 ಸಾಮೂಹಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಶಾಲೆಗಳಿಂದ 1007 ವಿದ್ಯಾರ್ಥಿಗಳು ಭಾಗವಹಿಸಲಾಗಿತ್ತು. 135 ಶಿಕ್ಷಕರು
ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಜೈತುನ್‌ಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ರಮೇಶ್ ಗೌಡ ರಾಘವೇಂದ್ರ ಹೊಯ್ಸಳ ಗೋವಿಂದ ಕವಿತಾ ಸುಮಕ್ಕ ಸುಮಾ ಬಿಇಒ ಕೆ.ಎಸ್. ಸುರೇಶ್, ಡಿ.ಟಿ. ಶ್ರೀನಿವಾಸನ್, ಡಿ.ಎಸ್. ಪಾಲಯ್ಯ, ಮಾರುತಿ ಭಂಡಾರಿ, ಗದ್ದಿಗೆ ತಿಪ್ಪೇಸ್ವಾಮಿ, ಸಿ.ಟಿ. ವೀರೇಶ್ ಮತ್ತಿತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.