
ಹಿರಿಯೂರು:
ಸ್ತ್ರೀ ಪುರುಷ ಇಬ್ಬರಿಗೂ ಸಮಾನವಾದ ಶಿಕ್ಷಣ ಅವಶ್ಯಕ ಎಂದಿದ್ದ ಜ್ಯೋತಿ ಬಾಪುಲೆ ತುಳಿತಕ್ಕೊಳಗಾದ ಶೂದ್ರರು ಹಾಗೂ ಮಹಿಳೆಯರ ಶಿಕ್ಷಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಸ್ವಾರ್ಥವು ಕಾಲಕ್ಕೆ ತಕ್ಕಂತೆ ಒಮ್ಮೆ ಜಾತಿ, ಒಮ್ಮೊಮ್ಮೆ ಧರ್ಮದ ರೂಪದ ಧಾರಣೆ ಮಾಡುತ್ತದೆ. ಎಂಬುದಾಗಿ ಅಂಬೇಡ್ಕರ್ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಬಿ.ಪಿ.ತಿಪ್ಪೇಸ್ವಾಮಿ ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪಿಯು ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಶೋಧಕ ಮಹಾತ್ಮ ಜ್ಯೋತಿ ಬಾಪುಲೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮವು ಸಮಾಜದ ಹಿತ ಹಾಗೂ ಕಲ್ಯಾಣಕ್ಕಾಗಿ ಇರಬೇಕು. ಸಮಾಜದ ಹಿತ ಕಾಯದ ಧರ್ಮ ಧರ್ಮವೇ ಅಲ್ಲ. ಸಮಾಜದಲ್ಲಿ ವ್ಯಾಪಕವಾದ ಕಟ್ಟುಪಾಡುಗಳು ಹಾಗೂ ಅಂಧವಿಶ್ವಾಸಗಳು ಸಮಾಜದ ಏಕತೆ ಹಾಗೂ ಬಂಧುತ್ವಕ್ಕೆ ಅಡಚಣೆಯಾಗಿದೆ. ಜಾತೀಯತೆ ಎಂಬುದು ಒಂದು ಧರ್ಮವಲ್ಲ, ಇತರರನ್ನು ಕೀಳಾಗಿ ಕಾಣುವ ಪ್ರವೃತ್ತಿಯಾಗಿದೆಎಂಬುದಾಗಿ ಅವರು ಪ್ರತಿಪಾದಿಸಿದ್ದರು.
ರೈತನ ದುಡಿಮೆಯ ಪ್ರತಿಫಲ ಅವನಲ್ಲಿಯೇ ಉಳಿಯಬೇಕು. ಜಮಿನ್ದಾರಿ ಪದ್ದತಿ ಕೊನೆಯಾಗಬೇಕು ಎಂಬುದಾಗಿ ಪ್ರತಿಪಾದಿಸಿದ ಅವರು ಉದ್ಯೋಗವು ಮೇಲಲ್ಲ, ಕೀಳಲ್ಲ.ಸ್ರೀ-ಪುರುಷ ಎಲ್ಲರೂ ತಮ್ಮ ಅಧಿಕಾರವನ್ನು ಚಲಾಯಿಸುವ ಸ್ವಾತಂತ್ರ್ಯಬೇಕೆಂದು ಅವರು ಹೋರಾಡಿದ್ದರು.
ವಿಧವಾ ವಿವಾಹಕ್ಕೆ ಪ್ರಾಮುಖ್ಯತೆ ನೀಡಿ ವಿಧವೆಯರ ಮಕ್ಕಳಿಗೆ ಅನಾಥಾಲಯ ಸ್ಥಾಪಿಸಿದರು. ತನ್ನ ಹೆಂಡತಿ ಸಾವಿತ್ರಿ ಬಾಪುಲೆಗೆ ಶಿಕ್ಷಕ ತರಬೇತಿ ಕೊಡಿಸಿ ಕನ್ಯಾಪಾಠ ಶಾಲೆ ಆರಂಭಿಸಿದರು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿಅವರ ಸೇವೆ ಮತ್ತು ಶ್ರಮ ಅಜರಾಮರವಾಗಿರುತ್ತದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ.ರಂಗಪ್ಪ, ಉಪನ್ಯಾಸಕರಾದ ಈ ನಾಗೇಂದ್ರಪ್ಪ, ಎಚ್.ಆರ್.ಲೋಕೇಶ್, ಎಲ್.ಶಾಂತಕುಮಾರ್, ಈ.ಪ್ರಕಾಶ್, ಮಂಜು, ಜಯಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.