March 18, 2026
d29-tm1.jpg


ಹೊಸದುರ್ಗ: ನಾಡಿಗೆ ಒಳ್ಳೆಯದಾಗಲಿ. ಕಲ್ಯಾಣವಾಗಲಿ. ಎಲ್ಲಾ ಜನರ ರೋಗ ರುಜಿನೆಗಳು ದೂರವಾಗಿ, ಮನುಷ್ಯರಿಗೆ ಸಕಲ ಕಾರ್ಯ ಸಿದ್ಧಿಸಲಿ. ಮಳೆ ಬೆಳೆ ಚೆನ್ನಾಗಿ ಆಗಿ, ರೈತರು ಸಂತಸ ಪಡಲಿ ಹೀಗೆ ಹತ್ತು ಹಲವು ಉದ್ದೇಶಗಳಿಂದ ಹೋಮ ಹವನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಧುರೆಯ ಸಮೀಪದ ಬ್ರಹ್ಮವಿದ್ಯಾನಗರ ದಲ್ಲಿನ ಭಗೀರಥ ಗುರುಪೀಠದಲ್ಲಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರ ಜನ್ಮ ದಿನೋತ್ಸವದ ಅಂಗವಾಗಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧ್ಯಾನ, ಪೂಜೆ, ಮಂತ್ರ, ಮೋಕ್ಷಕ್ಕೆ ಮೂಲ ಗುರುಕೃಪೆಯಿರಬೇಕು. ಯಾವುದಾದರೂ ರೂಪದಲ್ಲಿ ಗುರುವಿನ ಕೃಪಾದೃಷ್ಟಿ ನಮ್ಮ ಮೇಲೆ ಬಿದ್ದರೆ, ಬದುಕು ಪಾವನವಾದಂತೆ ಸರ್ವರೂ ಆಧ್ಯಾತ್ಮಿಕ ದಾರಿಯಲ್ಲಿ ಸಾಗಬೇಕು. ಗುರುಭಕ್ತಿ ನಿರಂತರವಾಗಿರಬೇಕು. ಗುರುವಿನ ಮಾರ್ಗದರ್ಶನದಲ್ಲಿ ನಡೆದು, ಸದಾ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಜನಮಾನಸದಲ್ಲಿ ನೆಲೆಸಿರಿ ಎಂದರು.
ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ ‘ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರು ಪೀಠ ಅಲಂಕರಿಸಿದ ನಂತರ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಉಪ್ಪಾರ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ವಿಶ್ವಮಾನವರೆನಿಸಿದ್ದಾರೆ. ಅವರ ತತ್ವಾದರ್ಶಗಳಿಂದ ಸಮಾಜಕ್ಕೆ ಒಳಿತಾಗಲಿದೆ ಎಂದು ಹೇಳಿದರು.’
ಕಾರ್ಯಕ್ರಮದಲ್ಲಿ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ,  ಗದ್ದುಗೇಶ್ವರ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ವಚನನಾನಂದ ಸ್ವಾಮೀಜಿ ಶಿವಲಿಂಗಾನAದ ಸ್ವಾಮೀಜಿ, ಕೃಷ್ಣಯಾದವಾನಂದ ಸ್ವಾಮೀಜಿ , ಜ್ಞಾನಾನಂದಪುರಿ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಅನ್ನಪೂರ್ಣೇಶ್ವರಿ ಕ್ಷೇತ್ರದ ಮಹಾಲಿಂಗಸ್ವಾಮಿ, ಅಭಿನವ ಧರಣೇಶ್ವರ ಸ್ವಾಮೀಜಿ, ಮುರುಳಿಧರ ಸ್ವಾಮೀಜಿ, ಮಹಾದೇವಮ್ಮ ತಾಯಿ, ಸಾಗರಾನಂದ ಸ್ವಾಮೀಜಿ, ಮುರುಗೇಶ್ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಶಾಸಕ ಬಿ.ಜಿ. ಗೋವಿಂದಪ್ಪ, ಯೋಗ ವಿಸ್ಮಯ ಟ್ರಸ್ಟ್ ನ ಅನಂತ್ ಜೀ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್ ಬಿಲ್ಲಪ್ಪ ಸೇರಿದಂತೆ ವಿವಿಧ ಮಠಾಧೀಶರು, ಸಮಾಜದ ಮುಖಂಡರಿದ್ದರು. 

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading