ಕೃಷಿ ಇಲಾಖೆ ಚಳ್ಳಕೆರೆ.
ಚಳ್ಳಕೆರೆ ತಾಲ್ಲೂಕಿನ ಕೃಷಿಕ ಸಮಾಜದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
ಚಳ್ಳಕೆರೆ ತಾಲ್ಲೂಕಿನ ಕೃಷಿಕ ಸಮಾಜದಲ್ಲಿ ಮತದಾರರ ಪಟ್ಟಿಯಂತೆ ಪ್ರಸ್ತುತ 406 ಸದಸ್ಯರಿದ್ದು 2024ನೇ ಸಾಲಿನಿಂದ ಮುಂದಿನ 5 ವರ್ಷದವರೆಗಿನ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಆಯ್ಕೆಗೆ ಚುನಾವಣೆ ವೇಳಾಪಟ್ಟಿಯನ್ನು ಮತದಾರರ ಪಟ್ಟಿಯೊಂದಿಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಚಳ್ಳಕೆರೆ ಹಾಗೂ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಲಭ್ಯವಿರುತ್ತದೆ. ಸದರಿ ಚುನಾವಣೆಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯು ಚುನವಣಾ ಕಛೇರಿಯಾಗಿ ಕಾರ್ಯನಿರ್ವಹಿಸಲಿದ್ದು, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಕೃಷಿಕ ಸಮಾಜದ ಚುನಾವಣಾಧಿಕಾರಿಗಳಾಗಿರುತ್ತಾರೆ. ಉಮೇದುದಾರರು ನಿರ್ದೇಶಕರಾಗಲು ನಾಮಪತ್ರ ವಿತರಣೆಯನ್ನು ದಿನಾಂಕ 30-11-2024 ರಿಂದ ಕೈಗೊಳ್ಳಲಾಗುವುದು ಹಾಗೂ ರೂ 250ಠೇವಣಿಯೊಂದಿಗೆ ದಿನಾಂಕ 6-12-2021ರ ಸಂಜೆ 5ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿದೆ. ದಿನಾಂಕ 9-12-2024ರಂದು ಮಧ್ಯಾಹ್ನ 3 ಗಂಟೆಯ ಒಳಗೆ ನಾಮಪತ್ರವನ್ನು ಹಿಂಪಡೆಯಲು ಅವಕಾಶವಿದ್ದು. ನಾಮಪತ್ರ ಸಲ್ಲಿಕೆಯಲ್ಲಿ ಉಮೇದಾರರ ಸಂಖ್ಯೆ 15ಕ್ಕೂ ಹೆಚ್ಚಿದ್ದು ಅವಿರೋಧ ಆಯ್ಕೆಯಾಗದಿದ್ದರೆ ದಿನಾಂಕ 15-12-2024ರಂದು ಭಾನುವಾರ 8ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವೇಳೆಗೆ ಚುನಾವಣೆ ನಡೆಸಲಾಗುವುದು ಮತ್ತು ಮುಂದಿನ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಜೆ.ಅಶೋಕ್ ಕೃಷಿ ಇಲಾಖೆ ಚಳ್ಳಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.