
ನಾಯಕನಹಟ್ಟಿ
ವಚನ ಸಾಹಿತ್ಯ ದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯಗಳು ಕನ್ನಡ ಭಾಷೆಗೆ ವಿಶಿಷ್ಟ ಸಾಂಸ್ಕೃತಿಕ ಸೊಬಗುಗನ್ನು ನೀಡಿವೆ ಎಂದು ನಿಕಟ ಪೂರ್ವ ತಹಸಿಲ್ದಾರ್ ಏನ್ ರಘುಮೂರ್ತಿ ಹೇಳಿದರು
ಅವರು ನಾಯಕನಟಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರಜಾರೋಹಣ ಮಾಡುವುದರೊಂದಿಗೆ ಉದ್ಘಾಟಿಸಿ ಮಾತನಾಡಿ ನಮ್ಮ ನಾಡಿನ ಹಿರಿ ಕವಿ ಪುಂಗವರು ಕನ್ನಡ ಸಾಹಿತ್ಯವನ್ನು ಹೇರಳವಾಗಿ ಮತ್ತು ಉತ್ಕೃಷ್ಟವಾಗಿ ಕಾದಂಬರಿಗಳು ಬರಹಗಳು ಮತ್ತು ವಿಮರ್ಶೆಗಳ ಮುಖಾಂತರ ಸಂಗ್ರಹಿಸಿಟ್ಟಿದ್ದಾರೆ ಇವುಗಳನ್ನು ನಾವು ಓದದೆ ಇರುವುದು ಮತ್ತು ಮಕ್ಕಳಿಗೆ ಪರಿಚಯಿಸದೆ ಇರುವುದು ದೌರ್ಭಾಗ್ಯದ ಸಂಗತಿ ಕನ್ನಡ ಭಾಷೆ ಉಳಿಯಬೇಕೆಂದರೆ ಇಂತಹ ಕಾದಂಬರಿಗಳನ್ನು ಮತ್ತು ವಿಮರ್ಶೆಗಳನ್ನು ಪ್ರತಿ ಮನೆಯ ಪ್ರತಿಯೊಬ್ಬರ ಸದಸ್ಯರಿಗೆ ಸಮೂಹನದ ಮುಖಾಂತರ ಪರಿಚಯಿಸಿದಾಗ ಮಾತ್ರ ಕನ್ನಡ ಭಾಷೆಯ ಉಳಿವು ಆಗುತ್ತದೆ ಸಾಮಾಜಿಕ ಬದಲಾವಣೆಗೆ ಮತ್ತು ಮಾನವೀಯ ಮೌಲ್ಯಗಗಳಿಗೆ ದಾಸ ಮತ್ತು ಶರಣ ಸಾಹಿತ್ಯದ ಪ್ರಕಾರಗಳು ಮತ್ತು ವಚನಗಳು ಸಹಕಾರಿಯಾಗಿವೆ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ನಾಗರೀಕರ ಸಹಭಾಗಿತ್ವ ಅಗತ್ಯ ಕನ್ನಡವೇ ಕನ್ನಡಿಗರಾಗಿರುವಂತಹ ಪ್ರತಿಯೊಬ್ಬರು ಕೂಡ ಸ್ವಯಂ ಪ್ರೇರಿತವಾಗಿ ಇಂತಹ ಕಾರ್ಯಕ್ರಮಗಳಿಗೆ ಭಾಗಿಯಾದಾಗ ಮಾತ್ರ ಕನ್ನಡ ಭಾಷೆಯ ಬಗ್ಗೆ ಗೌರವವನ್ನು ಉಳಿಸಿಕೊಂಡಂತಾಗುತ್ತದೆ ಎಂದರು
ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದಂತಹ ಮಂಜುನಾಥ್ ಮಾತನಾಡಿ ಕನ್ನಡ ನಾಡಿನಲ್ಲಿ ಇರುವಂತಹ ಪ್ರತಿ ಪ್ರಾಣಿ ಮತ್ತು ಪಕ್ಷಿಗಳು ಕೂಡ ಕನ್ನಡ ಭಾಷೆಯನ್ನು ಅನುಕರಣಿಸುವ ಭಾಷಾ ರೂಪದಲ್ಲಿ ಕೂಗುತ್ತವೆ ಕನ್ನಡ ಭಾಷೆಯ ಪರಂಪರೆಯನ್ನು ಉಳಿಸಬೇಕಾಗಿದೆ ಎಂದರು
ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಜಯಣ್ಣ ಮಾತನಾಡಿ ವ್ಯವಹಾರಿಕವಾಗಿ ಬೇರೆ ಭಾಷೆ ಮಾತನಾಡಿದರು ಕೂಡ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮನೆಯಲ್ಲಿ ಮಾತಾಡಿದರೆ ಭಾಷೆಯನ್ನು ಉಳಿಸಲು ಮತ್ತು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು
ಈ ಸಂದರ್ಭದ ದಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಪಟ್ಟಣ ಪಂಚಾಯತಿ ಸದಸ್ಯರಾದ ಮಂಜುನಾಥ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಜಯಣ್ಣ ಮಂಜುನಾಥ್ ಗೌಡ್ರು ನಾಯಕನಹಟ್ಟಿ ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ (ಕೋಟಿ) ಉಪಾಧ್ಯಕ್ಷರಾದ ಬೋರಯ್ಯ ಎನ್ ಗೌರವ ಅಧ್ಯಕ್ಷರಾದ ಶ್ರೀಯುತ ಟಿ ತಿಪ್ಪೇಸ್ವಾಮಿ ಪ್ರಧಾನ ಕಾರ್ಯದರ್ಶಿಯಾದ ಸುರೇಶ ಎನ್ ಸಂಘಟನೆ ಕಾರ್ಯದರ್ಶಿಯಾದ ಓಬಯ್ಯ ಯುವ ಘಟಕದ ಅಧ್ಯಕ್ಷರಾದ ಶಿವು ಯುವ ಘಟಕದ ಉಪಾಧ್ಯಕ್ಷರಾದ ರಂಗನಾಥ ಸಂಘಟನಾ ಉಸ್ತುವಾರಿಗಳಾದ ಎಸ್ ಕಾಟಯ್ಯ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಶ್ರೀಯುತ ತಿಪ್ಪೇಸ್ವಾಮಿ ಪತ್ರಿಕಾ ಮಿತ್ರರಾದ ಶಿವಮೂರ್ತಿ ಓಬಳೇಶ್ ಹರೀಶ್ ಪದಾಧಿಕಾರಿಗಳಾದ ಸೋಮಶೇಖರ್ ತಿಪ್ಪೇಸ್ವಾಮಿ ಮನೋಜ್ ಕುಮಾರ್ ಮೋಹನ್ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಾಜರಿದ್ದರು ಮತ್ತು ಎಲ್ಲಾ ಪದಾಧಿಕಾರಿಗಳ ಮತ್ತು ಜನ ಸಮೂಹ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.