
ವರದಿ : ಕೆ .ಟಿ. ಓಬಳೇಶ್ ನಲಗೇತನಹಟ್ಟಿ
ನಾಯಕನಹಟ್ಟಿ: ಗಾಳಿ, ಬೆಳಕು, ಪ್ರಕೃತಿಗೆ ಇಲ್ಲದ ಜಾತಿಯ ಸಂಘರ್ಷ ಮನುಷ್ಯನಿಗೆ ಯಾಕಿದೆ, ಮನುಷ್ಯರ ನಡುವೆ ಸಂಘರ್ಷಗಳು ನಡೆಯುತ್ತಲೇ ಇವಗಳನ್ನ ತಡೆಗಟ್ಟಲು ನಾವೆಲ್ಲರೂ ಸಂವಿಧಾನದಲ್ಲಿನ ಕಾನೂನುಗಳನ್ನ ತಿಳಿದುಕೊಳ್ಳಬೇಕಾಗಿದೆ ಎಂದು ಮಡಿಲ ಸಂಸ್ಥೆ ಕಾರ್ಯದರ್ಶಿ ಆನಂದ್ ರವರು ತಿಳಿಸಿದರು.
ಮಡಿಲ ಸಂಸ್ಥೆ ವತಿಯಿಂದ ಬೀದಿ ನಾಟಕಕ್ಕೆ ಚಾಲನೆ
ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯಗಳನ್ನ ನಿರ್ಮೂಲನೆ ಮಾಡುವ ಕುರಿತು ವಿಚಾರ ಸಂಕೀರ್ಣ ಮತ್ತು ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ವಿಶ್ವದಲ್ಲಿ ಅತೀ ದೊಡ್ಡ ಸಂವಿಧಾನ ಹೊಂದಿರುವ ಭಾರತ ದೇಶದಲ್ಲಿ ಇಂದಿಗೂ ಕೂಡ ಜಾತಿಯ ವ್ಯವಸ್ಥೆ ತುಂಬಿ ತುಳುಕುತಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರು ಜಾತಿಯ ಅವ್ಯವಸ್ಥೆಯನ್ನು ತೊಲಗಿಸಲು ಸಂವಿಧಾನದಲ್ಲಿ ವಿಶೇಷ ಕಾನೂನುಗಳನ್ನು ತಂದರು ಸಹ ಸುಧಾರಣೆಯಾಗುತ್ತಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಕಾನೂನು ವ್ಯವಸ್ಥೆ ಭದ್ರವಾಗಿದ್ದರೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಜಾತಿಯ ವೈಶ್ಯಮ್ಯತೆಗಳು ಇನ್ನೂ ಜೀವಂತವಾಗಿವೆ ಇವುಗಳನ್ನು ಹೋಗಲಾಡಿಸಬೇಕಾದರೆ ಮೊದಲು ಅಕ್ಷರಸ್ಥರಾಗಬೇಕೆಂದು ತಿಳಿಸಿದರು.
ಎಸ್.ಟಿ.ಎಸ್.ಆರ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ ಎಂ ತಿಪ್ಪೇಸ್ವಾಮಿ ಮಾತನಾಡಿ ಎಸ್ ಸಿ ಎಸ್ ಟಿ ಜನಾಂಗದವರು ಮಕ್ಕಳು ಉನ್ನತ ವ್ಯಾಸಂಗದ ಕೊರತೆ ಎದ್ದು ಕಾಣುತ್ತಿದೆ ಓದುವುದಕ್ಕೆ ಸಾಕಷ್ಟು ಸರ್ಕಾರ ಯೋಜನೆಗಳನ್ನು ರೂಪಿಸಿದರು ಸಹ ಅಕ್ಷರ ಆಗದೆ ಅನಕ್ಷರಸ್ಥರಾಗುತ್ತಿದ್ದಾರೆ ಇವುಗಳು ಸಹ ಜಾತಿಯ ಸಂಘರ್ಷಕ್ಕೆ ಎಡೆ ಮಾಡಿಕೊಳ್ಳುವಂತಾಗಿದೆ ಜ್ಞಾನದ ಅರಿವಿಲ್ಲದೆ ಪ್ರಚೋದನಾತ್ಮಕ ಕ್ರಿಯೆಗಳಲ್ಲಿ ತೊಡಗುತ್ತಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಅಕ್ಷರಸ್ಥರಾಗಿ ಅಸ್ಪೃಶ್ಯತೆ ನಿರ್ಮೂಲನೆಗೆ ಸಹಕರಿಸಬೇಕಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಏಕತೆ ಯಾವಾಗ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತದೆ ಆಗ ಅಸ್ಪೃಶ್ಯತೆ ಎನ್ನುವ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕಬಹುದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏಕತೆ ಸಾರುವ ನಿಟ್ಟಿನಲ್ಲಿ ಒಂದೇ ಬಣ್ಣದ ಯೂನಿಫಾರಂ ಗಳನ್ನು ಹಾಕಿಸಲಾಗುತ್ತದೆ. ಇದೇ ರೀತಿ ನಮ್ಮಲ್ಲಿ ಎಲ್ಲರೂ ಒಂದೇ ಎನ್ನುವ ಮನೋಭಾವನೆ ಮೂಡಿದಾಗ ಮಾತ್ರ ನವ ಭಾರತವನ್ನು ಕಟ್ಟಬಹುದೆಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಐ.ಎ.ಎಸ್, ಐ.ಪಿ.ಎಸ್, ಕೆ ಎ.ಎಸ್ ವ್ಯಾಸಂಗದಲ್ಲಿ ತೊಡಗಿಕೊಳ್ಳಲು ಸಾಕಷ್ಟು ಸರ್ಕಾರ ಹಣವನ್ನು ಬಳಕೆ ಮಾಡುತ್ತದೆ ಇವುಗಳ ಸದುಪಯೋಗ ಪಡೆದುಕೊಂಡು ಅಕ್ಷರಸ್ಥರಾಗಿ ಹೊರಹೊಮ್ಮಿದಾಗಬೇಕು ಎಂದರು.
ಎಸ್.ಟಿ.ಎಸ್.ಆರ್ ಕಾಲೇಜು ಉಪ ಪ್ರಾಂಶುಪಾಲರಾದ ರಮೇಶ್ ಮಾತನಾಡಿ ದೇಶದಲ್ಲಿ ಅಸಮಾನತೆಯನ್ನು ನಿರ್ಮೂಲನೆ ಮಾಡಬೇಕಾದರೆ ಮೊದಲು ಅಕ್ಷರಸ್ಥರಾಗಬೇಕು, ಪ್ರತಿಯೊಬ್ಬರು ಜ್ಞಾನವಂತರಾಗಿ ಸರಿ ತಪ್ಪುಗಳನ್ನ ತಿಳಿದುಕೊಳ್ಳುವ ಆಲೋಚನೆ ಪ್ರತಿಯೊಬ್ಬರಲ್ಲಿ ಮೂಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು..
ಹಿಂದಿನ ಕಾಲದಿಂದಲ್ಲಿ ಕಸುಬು ಆಧಾರಿತವಾಗಿ ಜಾತಿಗಳನ್ನು ಸೃಷ್ಠಿಸಲಾಗಿದೆ ಯಾವ ಕಾಯಕ ಶ್ರೇಷ್ಠ? ಯಾವ ಕಾಯಕ ಕನಿಷ್ಠ ಎಂಬುವುದರ ನಡುವೆಯಲ್ಲಿ ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ. ಇವುಗಳನ್ನೆಲ್ಲ ಸರಿದೂಗಿಸಬೇಕಾದರೆ ನಮ್ಮಲ್ಲಿ ಏಕತೆ ಮನೋಭಾವನೆ ಬೆಳೆಯಬೇಕು ಆಗ ಮಾತ್ರ ಏಕತೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಬೋರಯ್ಯ, ಪ್ರಾಂಶುಪಾಲರಾದ ವಿಜಯಕುಮಾರ್, ಮಂಜುನಾಥ್, ರಮೇಶ್, ಮಡಿಲು ಸಂಸ್ಥೆ ಕುಮಾರಸ್ವಾಮಿ, ಪ್ರವೀಣ್, ಪ್ರದೀಪ್, ದ್ಯಾಮ ಕುಮಾರ್ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.