ಚಳ್ಳಕೆರೆ-29 ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡಿದ ಸಾರ್ವಜನಿಕರ ನೆನಪಿನಲ್ಲಿ ಸದಾ ಉಳಿಯುವಂತೆ ಆಗುತ್ತದೆ ಚಳ್ಳಕೆರೆಯ ಎಲ್ಐಸಿ ದು ಗವರ್ ರಂಗಸ್ವಾಮಿ ಅಭಿಮಾನಿ ಬಳಗ ಸಾರ್ವಜನಿಕರ ಹಿತ ರಕ್ಷಣೆ ಮಾಡುವಲ್ಲಿ ಸದಾ ಮುಂದಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ತಿಳಿಸಿದರು.











ಅವರು, ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಐತಿಹಾಸಿಕ ದೇವಸ್ಥಾನ ಜಗಲೂರಜ್ಜಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಲ್‌ಐಸಿ ದುಗ್ಗಾವರರಂಗಸ್ವಾಮಿ ಅಭಿಮಾನಬಳಗದಿಂದ ಅವರನ್ನು ಸನ್ಮಾನಿಸಲಾಯಿತು.
ಎಲ್‌ಐಸಿ ದುಗ್ಗಾವರರಂಗಸ್ವಾಮಿ ಅಭಿಮಾನ ಬಳಗದ ಅಧ್ಯಕ್ಷ ಟಿ.ರಂಗಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಭಾಸ್ಕರ್‌ರಾವ್ ಸ್ನೇಹಜೀವಿ ಈ ಹಿಂದೆಯೂ ಸಹ ಚಳ್ಳಕೆರೆಗೆ ಆಗಮಿಸಿ ನಮ್ಮೊಂದಿಗೆ ಅನೇಕ ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದ್ಧಾರೆಎಂದರು
ಈ ಸಂದರ್ಭದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಪ್ರಧಾನಕಾರ್ಯದರ್ಶಿ ಉಮೇಶ್‌ಕಾಂತ್, ಬಳಗದ ಸದಸ್ಯರಾದ ನಾಗೇಂದ್ರ, ಮಾರುತಿ, ಬೇಕರಿವಿಜಯ್, ಟಿ.ವೆಂಕಟೇಶ್ ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.