December 14, 2025
1761744576299.jpg

ಚಿತ್ರದುರ್ಗ .ಅ.29:
ವಿವಿಧ ತಲೆಮಾರುಗಳ ಪೀಳಿಗೆ ಜನರು ಹೇಗೆ ಸಾಮರಸ್ಯದಿಂದ ಬಾಳಬೇಕು ಎಂಬುದಕ್ಕೆ ಅವಿಭಕ್ತ ಕುಟುಂಬ ಮಾದರಿಯಾದೆ. ಜಾಗತಿಕವಾಗಿ ತಂತ್ರಜ್ಞಾನ ಆವರಿಸದ ಕಾಲದಲ್ಲಿ ಅವಿಭಕ್ತ ಕೂಡು ಕುಟುಂಬಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚಿತ್ತು. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಕರುಣೆ, ವಾತ್ಸಲ್ಯ, ತಾಳ್ಮೆ, ಸಂಯಮದಿಂದ ಬಾಳುತ್ತಿದ್ದರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ, ಆಯೋಜಿಸಲಾಗಿದ್ದ ಒಂದು ದಿನದ ಅಂತರ-ಪೀಳಿಗೆಯ ಬಾಂಧವ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಕ್ತ ಕುಟುಂಬಗಳಲ್ಲಿ ಮುಂದಿನ ಕಿರಿಯರಿಗೆ ಹಿರಿಯರ ಮಾರ್ಗದರ್ಶನ ದೊರಕುತ್ತಿತ್ತು. ಸಂಸ್ಕøತಿ, ಸಂಪ್ರದಾಯ, ಆರೋಗ್ಯಯುತವಾದ ಜೀವನ, ಉತ್ತಮ ಮೌಲ್ಯಗಳು ಬಳುವಳಿಯಾಗಿ ದೊರಕುತ್ತಿದ್ದವು. ಎಲ್ಲಾ ವಯೋಮಾನದವರು ಪ್ರೀತಿ, ಪರಸ್ಪರ ಸಹಕಾರ ಹಾಗೂ ಸಹಬಾಳ್ವೆಯಿಂದ ಬದುಕು ಸಾಗಿಸುತ್ತಿದ್ದರು. ಆದರೆ ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ತಂತ್ರಜ್ಞಾನದ ಪ್ರಭಾವದಿಂದ ಹಿರಿಯರು ಮತ್ತು ಕಿರಿಯರ ನಡುವೆ ಕಂದಕ ಸೃಷ್ಠಿಯಾಗುತ್ತಿದೆ. ಭೌತಿಕ ಹಾಗೂ ಐಹಿಕ ಸುಖಗಳಿಗೆ ಕಿರಿಯರು ಮಾರು ಹೋಗುತ್ತಿದ್ದಾರೆ. ಇದನ್ನು ತೊರೆದು ಹಿರಿಯ ಅನುಭವದ ಮಾತುಗಳಿಗೆ ಕಿರಿಯರು ಆಲಿಸಬೇಕು. ಉತ್ತಮ ಮೌಲ್ಯ ಹಾಗೂ ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು ಎಂದು ನ್ಯಾಯಾಧೀಶ ಎಂ.ವಿಜಯ್ ಹೇಳಿದರು.
ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ಮಕ್ಕಳು ಶ್ರಯೋಭಿವೃದ್ಧಿಯಲ್ಲಿ ಹಿರಿಯರ ಶ್ರಮ ಶ್ಲಾಘನಿಯವಾದುದ್ದು. ತಂತ್ರಜ್ಞಾನ ಬದಲಾದ ಹಾಗೆ ಮಾನವೀಯ ಸಂಬಂಧಗಳ ಸ್ವರೂಪವೂ ಬದಲಾಗುತ್ತಿದೆ. ಮನುಷ್ಯನರ ಸಂಬಂಧಗಳು ಕೂಡ ಪ್ಲಾಸ್ಟಿಕ್ ರೀತಿ ಬಳಸಿ ಬೀಸಾಡುವ ಮನಸ್ಥಿಗೆ ತಲುಪಿರುವುದು ಬೇಸರ ಸಂಗತಿಯಾಗಿದೆ. ಕಿರಿಯ ತಲೆಮಾರಿನವರು ತ್ರಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡದೆ ಕೂಡು ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯದಿಂದ ಬಾಳಬೇಕು ಎಂದು ಹೇಳಿದರು.
ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಹಿರಿಯ ನಾಗರಿಕರು, ಹೆಣ್ಣು ಮಕ್ಕಳು, ಕಿರಿಯ ಮಕ್ಕಳ ಮೇಲೆ ಗೌರವ, ಪ್ರೀತಿ ಹಾಗೂ ಕಾಳಜಿ ಇರುವ ಸಮಾಜ ಉತ್ತಮ ಸಂಸ್ಕøತಿಯಿಂದ ಕೂಡಿರುತ್ತದೆ. ಮನುಷ್ಯ ಹುಟ್ಟಿನಿಂದ ಮುಪ್ಪಿನವರೆಗೂ ನೆಮ್ಮದಿ ಜೀವನ ನಡೆಸಲು ಎಲ್ಲರಿಗೂ ಸಂವಿಧಾನದ ಕಾನೂನಿನಡಿ ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಪ್ರೇಮನಾಥ ಮಾತನಾಡಿದರು.
ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆ-2007 ಕುರಿತು ಕಾನೂನು ನೆರವು ಅಭಿರಕ್ಷ ಎಂ.ಮೂರ್ತಿ, ನಮ್ಮ ಹಿರಿಯರು ನಮ್ಮ ಆದರ್ಶ ವಿಷಯದ ಕುರಿತು ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ಜಯಕುಮಾರ್ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ನಾಗರಿಕರಾದ ಡಿ.ನಾಗಭೂಷಣ್, ಜಿ.ಎಸ್.ಉಜ್ಜಿನಪ್ಪ, ಪಿ.ತಿಪ್ಪೇಸ್ವಾಮಿ, ಡಾ.ಬಿ.ರಾಜಶೇಖರ್, ರಮಾದೇವಿ ವೆಂಕಣ್ಣಾಚಾರ್, ಪ್ರೊ.ಎಚ್.ಲಿಂಗಪ್ಪ, ಎನ್.ವೆಂಕಟಸ್ವಾಮಿ, ಡಾ.ಪಿ.ಯಶೋಧ ರಾಜಶೇಖರಪ್ಪ, ಗಾಯತ್ರಿ ಶಿವರಾಂ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಿಲ್ಲಾ ನಿರೂಣಾಧಿಕಾರಿ ಡಿ. ಮಂಜುನಾಥ್, ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಸೇರಿದಂತೆ ಮತ್ತಿರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading