ಚಳ್ಳಕೆರೆ ಅ.29:
ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಐಸಿಎಂಆರ್ ಮತ್ತು ಕೆಹೆಚ್‍ಪಿಟಿ ಸಂಸ್ಥೆಯಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಮಗುವಿನ ಮೊದಲ 1000 ದಿನಗಳನ್ನು ಬಲಪಡಿಸುವ ಸಲುವಾಗಿ ಒಂದು ದಿನದ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಎಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಯಿತು.
ಆಡಳಿತ ವೈದ್ಯಾಧಿಕಾರಿ ಡಾ.ಗುರುಪ್ರಸಾದ್ ಅವರು ತರಬೇತಿಗೆ ದೀಪ ಹಚ್ಚುವುದರ ಮೂಲಕ ಉದ್ಘಾಟನೆ ಮಾಡಿದರು. ನಂತರ ಈ ಕಾರ್ಯಗಾರದ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐಸಿಎಂಆರ್ ಮತ್ತು ಕೆಹೆಚ್‍ಪಿಟಿ ಸಂಸ್ಥೆಯ ತಂಡದವರಾದ ಉಮೇಶ್, ಮೇಘ, ವಾಣಿ ಅವರು ಕಾರ್ಯಾಗಾರದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ, ಗರ್ಭಿಣಿ ನೋಂದಣಿ, early registration and late registration ಬಗ್ಗೆ, ಬಾಣಂತಿ ಭೇಟಿ ಬಗ್ಗೆ, ಸಾರ್ವತ್ರಿಕಾ ಲಸಿಕೆ ಬಗ್ಗೆ, ಎದೆಯಾಲಿನ ಮಹತ್ವದ ಬಗ್ಗೆ , ಗಂಡಾಂತರ ಗರ್ಭಿಣಿಯರ ಬಗ್ಗೆ, ಹೆರಿಗೆಯ ಪೂರ್ವ ಸಿದ್ಧತೆ, ಕಾಂಗರು ಮದರ್ ಕೇರ್, ವೈಯಕ್ತಿಕ ಸ್ವಚ್ಛತೆ ಬಗ್ಗೆ, ಪೌಷ್ಟಿಕ ಆಹಾರ, ತಾಯಿ ಮರಣ, ಶಿಶು ಮರಣ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ನವೀನ್ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶಕುಂತಲಮ್ಮ, ಅರುಣ ಕುಮಾರಿ, ಸಮುದಾಯ ಆರೋಗಯ ಅಧಿಕಾರಿಗಳಾದ ಸ್ನೇಹ ಹಾಗೂ ಶಬೀನಬಾನು, ಆರೋಗ್ಯ ಸಿಬ್ಬಂದಿಗಳಾದ ಶಂಕರ್ , ಪೂರ್ಣಸಾಗರ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.