December 14, 2025
IMG-20251029-WA0209.jpg

ಚಳ್ಳಕೆರೆ: ಸಮಾಜದಲ್ಲಿ ತಾನು ದುಡಿದ ಹಣವನ್ನು ಬಡವರಿಗಾಗಿ ವಿನಿಯೋಗಿಸಿ ದಾನ ಧರ್ಮದ ಮೂಲಕ ತಮ್ಮ ತಂದೆಯ ಹಾಗೂ ಮನೆತನದ ಗೌರವವನ್ನು ಉಳಿಸಿ ಇಡೀ ವಿಶ್ವದ ಜನರ ಮನಸ್ಸನ್ನು ಗೆದ್ದ ವ್ಯಕ್ತಿ ಯಾರಾದರೂ ಇದ್ದರೆ ಅದು ಡಾ. ಪುನೀತ್ ರಾಜಕುಮಾರ್ ಮಾತ್ರ ಎಂದು ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಆರ್ ಪ್ರಸನ್ನ ಅಭಿಪ್ರಾಯ ಪಟ್ಟರು.

ನಗರದ ಬನಶ್ರೀ ವೃದ್ಧಾಶ್ರಮದಲ್ಲಿ ನೇತಾಜಿ ಸ್ನೇಹ ಬಳಗ ಹಾಗೂ ವಿಭಾ ಚಿಟ್ ಫಂಡ್ ಸಹಯೋಗದಲ್ಲಿ ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿನ ವೃದ್ಧರಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ವೃದ್ಧಾಶ್ರಮಗಳು ಬೆಳೆಯಲು ಇಂದಿನ ವಿದ್ಯಾವಂತರು ಕಾರಣರಾಗುತ್ತಿದ್ದಾರೆ ಪುನೀತ್ ರವರ ನಟನೆಯ ರಾಜಕುಮಾರ ಚಿತ್ರದಲ್ಲಿ ವೃದ್ಧಾಶ್ರಮ ಬೆಳವಣಿಗೆಯ ಬಗ್ಗೆ ಸವಿಸ್ತಾರವಾಗಿ ತೋರಿಸಿ ಜನರಿಗೆ ಮನಮುಟ್ಟುವಂತೆ ನಟಿಸಿದ್ದರು ಮಕ್ಕಳು ಜನಿಸಿದಾಗ ತಮ್ಮ ಲಾಲನೆ ಪಾಲನೆ ಮಾಡಿದ ತಂದೆ ತಾಯಿಗಳನ್ನು ವೃದ್ಧಾಶ್ರಮದಲ್ಲಿ ಬಿಡದೆ ಕೊನೆಯವರೆಗೂ ನೋಡಿಕೊಂಡಾಗ ಮಾತ್ರ ಪುನೀತ್ ರಾಜಕುಮಾರ್ ರವರ ಕನಸು ಈಡೇರಿದಂತಾಗುತ್ತದೆ ಅವರ ಪ್ರಬುದ್ಧ ನಟನೆಯಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ ಇಂದು ಅವರು ದೈಹಿಕವಾಗಿ ಮರೆಯಾಗಿದ್ದರು ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದರು.

ಪ್ರಾಂಶುಪಾಲ ಎಂ ರಮೇಶ್ ಮಾತನಾಡಿ ಮನುಷ್ಯರು ಸತ್ತಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಇದ್ದಾಗ ಏನನ್ನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ ಪುನೀತ್ ರಾಜಕುಮಾರ್ ಅವರ ಉಸಿರು ನಿಂತಿರಬಹುದು ಆದರೆ ಹೆಸರನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಅಭಿಮಾನಿಗಳು ಪುನೀತ್ ರಾಜಕುಮಾರ್ ರವರ ಅಭಿಮಾನಿ ಎಂದು ಹೇಳಿಕೊಂಡು ಓಡಾಡಿದರೆ ಸಾಲದು ಅವರ ಆದರ್ಶಗಳನ್ನು ತಮ್ಮ ಕೈಲಾದಷ್ಟು ಪಾಲನೆ ಮಾಡಿದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ನೇತಾಜಿ ಸ್ನೇಹ ಬಳಗದ ನಿರ್ದೇಶಕ ನಾಗೇಂದ್ರ ಮಂಡಿ ಶರಣಪ್ಪ ಜಯಶಂಕರ್ ಸುಧಾಕರ್ ವಿಭಾಚಿಟ್ ನ್ ಸೌಂದರ್ಯ,ಮೌನಿಕ ವೃದ್ಧಾಶ್ರಮದ ಮುಖ್ಯಸ್ಥರಾದ ಮಂಜುಳಮ್ಮ ಹಾಜರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading