ನಾಯಕನಹಟ್ಟಿ : ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ಪುನೀತ್ ರಾಜಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ಆಚರಿಸಲಾಯಿತು.
ಕರವೇ ಹೋಬಳಿ ಅಧ್ಯಕ್ಷ ಮುತ್ತಯ್ಯ ಮಾತನಾಡಿ ಪುನೀತ್ ರಾಜಕುಮಾರ್ ಬಾಲ ನಟನಾಗಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಮುಂದೆ ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಅಪಾರ ಕೊಡುಗೆ ಇದೆ. ಇಂದು ನಾವೆಲ್ಲ ಸೇರಿ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಶಾಲೆಯ ಮಕ್ಕಳಲ್ಲಿ ಪುನೀತ್ ರಾಜಕುಮಾರ್ ಅಂಥವರನ್ನು ಕಾಣಬಹುದು ಎಂದರು.
ಪ್ರಿಯದರ್ಶಿನಿ ಶಾಲೆಯ ಕಾರ್ಯದರ್ಶಿ ಬೋರಸ್ವಾಮಿ ಮಾತನಾಡಿ ಈ ದಿನ ನಮ್ಮ ನೆಚ್ಚಿನ ನಟರಾದ ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ. ಪುಣ್ಯ ಸ್ಮರಣೆಗಿಂತ ಅವರ ಜಯಂತಿಯನ್ನು ಆಚರಣೆ ಮಾಡುವುದು ಸೂಕ್ತ. ಜೀವನದಲ್ಲಿ ಸಾರ್ಥಕ ಬದುಕು ಬದುಕಿರುವಂತವರು ಮತ್ತೊಮ್ಮೆ ಹುಟ್ಟಿ ಬರಲಿ ಅಂತ ಅವರ ಜಯಂತಿಗಳನ್ನು ಆಚರಣೆ ಮಾಡುತ್ತೇವೆ. ದೇಶಕ್ಕೆ ಮಹಾ ನಾಯಕರು ಕೊಡುಗೆ ತುಂಬಾ ಇದೆ. ಆದ್ದರಿಂದ ಅವರ ಜಯಂತಿಯನ್ನು ಆಚರಣೆ ಮಾಡುತ್ತೇವೆ. ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಸಿನಿಮಾ ರಂಗದಲ್ಲಿ ಹಾಗೂ ನಿಜ ಜೀವನದಲ್ಲಿ ನಾಡಿನ ಎಲ್ಲರ ಮನದಲ್ಲಿ ಇದ್ದಾರೆ. ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಮಗನಾಗಿರಲಿಲ್ಲ ಇಡೀ ರಾಜ್ಯದ 6 ಕೋಟಿ ಕನ್ನಡಿಗರ ಮಗನಂತಿದ್ದರು. ರಾಜ್ಯದ ಕನ್ನಡಿಗರ ಮನೆಗಳಲ್ಲಿ ಪುನೀತ್ ಕುಮಾರ್ ಅವರ ಫೋಟೋ ರಾರಾಜಿಸುತ್ತಿದೆ. ಸಿನಿಮಾ ರಂಗಕ್ಕೆ ಹಾಗೂ ಸಮಾಜಕ್ಕೆ ಅವರದೇ ಆದ ಅತ್ಯಂತ ಕೊಡುಗೆ ನೀಡಿರುವಂತಹ ವ್ಯಕ್ತಿ ಅಂದರೆ ತಪ್ಪಾಗಲಾರದು. ಅಂಥವರ ಪುಣ್ಯ ಸ್ಮರಣೆಯನ್ನು ನಮ್ಮ ಶಾಲೆಯ ಅತ್ಯಂತ ಆರ್ಥಿಕ ಹಾಗೂ ದುರ್ಬಲವಾಗಿ ಹಿಂದುಳಿದಂಥ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸಹಕಾರ ನೀಡಿದಂತ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು.
ಮದರ್ ತೆರೇಸಾ ಸಂಸ್ಥೆಯ ಕಾರ್ಯದರ್ಶಿ ಶಿವಮೂರ್ತಿ ಮಾತನಾಡಿ ಡಾಕ್ಟರ್ ರಾಜಕುಮಾರ್ ಅವರ ಪ್ರೀತಿಯ ಮಗ ಪುನೀತ್ ರಾಜಕುಮಾರ್ ಅವರು ನಿಧನ ಹೊಂದಿ ಇಂದಿಗೆ 3 ವರ್ಷಗಳಾಗಿದೆ. ಹಾಗಾಗಿ ಅವರ ಪುಣ್ಯಸ್ಮರಣೆ ಮಾಡುತ್ತಿದ್ದೇವೆ. ನಮ್ಮ ಜೀವನದಲ್ಲಿ ಅತ್ಯುಮೂಲ್ಯವಾದ ವಸ್ತುವನ್ನು ಕಳೆದುಕೊಂಡಿದ್ದೇವೆ. ಈ ದಿನವನ್ನು ನಾವುಗಳು ಯಾಕೆ ಆಚರಣೆ ಮಾಡುತ್ತೇವೆ ಎಂದರೆ ನಮ್ಮ ಮನಸ್ಸಿನಲ್ಲಿ ಯಾವತ್ತೂ ಶಾಶ್ವತವಾಗಿದ್ದಾರೆ. ಅವರನ್ನು ನೆನಪಿಸಿಕೊಂಡು ಪುಣ್ಯ ಸ್ಮರಣಯನ್ನು ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಕರವೇ ಹೋಬಳಿ ಉಪಾಧ್ಯಕ್ಷ ರಾಘವೇಂದ್ರ, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ಕರವೇ ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿಳೇಕಲ್ ಮಂಜುನಾಥ್, ಗೌರವ ಕಾರ್ಯದರ್ಶಿ ವಿಶ್ವನಾಥ್, ಜೋಗೆಹಟ್ಟಿ ಮಂಜು, ರೈತರಾದ ನಾಗರಾಜಪ್ಪ, ಮುಖ್ಯೋಪಾಧ್ಯಾಯರಾದ ಎಚ್ಎಸ್ ಸುರೇಶ್, ಶಿಕ್ಷಕರಾದ ಪಿ ಜಂಪಣ್ಣ, ಡಿ ಶಂಕ್ರಪ್ಪ, ದೈಹಿಕ ಶಿಕ್ಷಕ ಬಿ ಕೆ ತಿಮ್ಮರಾಜ್, ಶಿಕ್ಷಕಿ ಕೆ ಎಂ ವನಜಾಕ್ಷಿ, ಎಸ್ ಎಂ ಬಸವರಾಜ್, ಕೆ ಪಿ ನಾಗರಾಜ್,ಎಗ್ ರೈಸ್ ರಾಮು, ಬಿಸಿ ಊಟ ಕಾರ್ಯಕರ್ತರು ಇನ್ನು ಮುಂತಾದವರು ಹಾಜರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.