ನಾಯಕನಹಟ್ಟಿ:: ಅ.29.
ಸಮೀಪದ ಎನ್. ಮಹದೇವಪುರ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು.


ಎನ್. ಮಹದೇವಪುರ ಗ್ರಾಮ ಪಂಚಾಯತಿ ಒಟ್ಟು ಸದಸ್ಯರ ಸಂಖ್ಯೆ 13.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿದ್ದು ಈ ಸ್ಥಾನಕ್ಕೆ ಸೈಯದ ಅಕ್ತರ್ ಭಾನು, ನಾಮಪತ್ರವನ್ನು ಸಲ್ಲಿಸಿದರು.
ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಸರ್ವ ಸದಸ್ಯರು ಅವಿರೋಧವಾಗಿ ಸೈಯದ ಅಕ್ತರ ಭಾನು ರವರನ್ನು ಉಪಾಧ್ಯಕ್ಷೆನ್ನಾಗಿ ಆಯ್ಕೆ ಮಾಡಲಾಯಿತು.
ಎಂದು ಚುನಾವಣೆ ಅಧಿಕಾರಿ ಕೆ ಎಸ್ ಸುರೇಶ್ ತಿಳಿಸಿದರು.
ಇದೆ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಮಾತನಾಡಿದರು ನಮ್ಮ ಗ್ರಾ.ಪಂ. ಮೂರನೇ ಅವಧಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸೈಯದ್ ಅಕ್ತರ್ ಭಾನು ರವರಿಗೆ ಶುಭ ಹಾರೈಸುತ್ತೇನೆ
ಉಪಾಧ್ಯಕ್ಷರ ಚುನಾವಣೆಗೆ ಸಹಕಾರ ನೀಡಿದ ಸರ್ವ ಸದಸ್ಯರಿಗೂ ಅಭಿನಂದನೆಯನ್ನು ತಿಳಿಸಿದರು.
ಇನ್ನೂ ಇದೇ ವೇಳೆ ನೂತನ ಉಪಾಧ್ಯಕ್ಷೆ ಸೈಯದ ಅಕ್ತರ ಭಾನು ಮಾತನಾಡಿದರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಹಾಗೂ ಗ್ರಾ.ಪಂ. ಸರ್ವ ಸದಸ್ಯರ ಸಹಕಾರದಿಂದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆಯನ್ನು ತಿಳಿಸುತ್ತೇನೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಸ್ವಚ್ಛತೆ ಕುಡಿಯುವ ನೀರು ಸಿಸಿ ರಸ್ತೆ ಶಾಲೆಗಳ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ, ಮಹಮದ್ ಬಾಷಾ, ಎನ್ ಮಹದೇವಪುರ ಗ್ರಾ.ಪಂ.ಸದಸ್ಯರಾದ ಎಂ. ಪಾಲಯ್ಯ,ಕೆ.ಟಿ. ಜಯಂತಿ, ಪಿ.ಪಿ. ಶ್ವೇತಾ ಪಾಟೀಲ್, ತಿಪ್ಪಮ್ಮ,ಎಂ. ಓಬಳೇಶಪ್ಪ, ಶಾಂತಮ್ಮ, ರೋಹಿಣಿ ಬಾಯಿ,ಎಚ್ ,ಶಿವಣ್ಣ, ಎಂ. ನಿರಂಜನ್, ಗೋಮ್ಲಿಬಾಯಿ, ಆರ್ ಮಂಜುನಾಥ್, ಗ್ರಾ.ಪಂ.ಪಿಡಿಒ ರಾಘವೇಂದ್ರ. ಬಿಲ್ ಕಲೆಕ್ಟರ್ ಯೋಗೇಂದ್ರ, ಕಂಪ್ಯೂಟರ್ ಆಪರೇಟರ್ ತಿಪ್ಪೇರುದ್ರಪ್ಪ, ಹಾಗೂ ಪಂಚಾಯತಿ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.