December 15, 2025
1759152961716.jpg


ಚಿತ್ರದುರ್ಗಸೆ.29:
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಗಳು ಕಾಣೆಯಾದ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನಗರದ ಬಿ.ಡಿ.ರಸ್ತೆ ಭೋವಿ ಕಾಲೋನಿಯ ಪುನೀತ್ ತಂದೆ ಲೇಟ್ ರಮೇಶ್(21) 25 ಫೆಬ್ರವರಿ 2024 ರಂದು ಕಾಣೆಯಾಗಿರುತ್ತಾನೆ. ಪುನಿತ್ 6 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು ತಲೆಯ ಬಾಲ ಭಾಗದಲ್ಲಿ ಹಳೆಯ ಗಾಯದ ಗುರುತಿದೆ. ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾನೆ.
ನಗರದ ರಾಜೀವ್ ಗಾಂಧಿ ಆಶ್ರಯ ಬಡಾವಣೆ 2ನೇ ಹಂತದ ನಿವಾಸಿ ಬಸವರಾಜ ತಂದೆ ತಿಪ್ಪೇಸ್ವಾಮಿ(36) 27 ಸೆಪ್ಟಂಬರ್ 2024 ರಂದು ಕಾಣೆಯಾಗಿರುತ್ತಾನೆ. ಬಸವರಾಜ 5.6 ಅಡಿ ಎತ್ತರವಿದ್ದು, ಸಾಧರಣ ಮೈಕಟ್ಟು ಹೊಂದಿದ್ದು ಗಾರೆ ಕೆಲಸ ಮಾಡುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.
ಕಾಣೆಯಾದವರ ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-222933, 9480803145, ಪೊಲಿಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194-222430, 9480803120 ಹಾಗೂ ಕಂಟ್ರೋಲ್ ರೂಂ ಸಂಖ್ಯೆ 08194-222782ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading