
ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತಮ್ಮಣ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಬಾಬು ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಗೆ ತಮ್ಮಣ್ಣೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ತಮ್ಮಣ್ಣೇಗೌಡರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅಧಿಕೃತವಾಗಿ ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರುಕ್ಮಿಣಿ, ಸದಸ್ಯರುಗಳಾದ ಎ.ವಿ.ಧನಂಜಯ, ಬಾಬು, ತಮ್ಮಣ್ಣೇಗೌಡ, ಮಂಜುಳಮ್ಮ, ಲಕ್ಷ್ಮಮ್ಮ, ತುಳಸಮ್ಮ, ಪಿಡಿಓ ನವೀನ್, ಕಾರ್ಯದರ್ಶಿ ರಾಮೇಗೌಡ ಭಾಗವಹಿಸಿದ್ದರು.
ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ನೂತನ ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು, ವಿವಿಧ ಮುಖಂಡರುಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರುಗಳು ಅಭಿನಂದಿಸಿದರು.
ನೂತನ ಅಧ್ಯಕ್ಷರ ಬೆಂಬಲಿಗರು ಸಿಹಿ ವಿತರಿಸಿ ಅಪಾರ ಪ್ರಮಾಣದಲ್ಲಿ ಪಟಾಕಿಸಿಡಿಸಿ ಸಂಭ್ರಮಿಸಿದರು.
ನಂತರ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಹಲವು ಮುಖಂಡರೊಡಗೂಡಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ನೂತನ ಅಧ್ಯಕ್ಷ ತಮ್ಮಣ್ಣೇಗೌಡ ವಿಜಯೋತ್ಸವವನ್ನು ಆಚರಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಮಾಜಿ ನಿರ್ದೇಶಕಿ ವಿಜಯಲಕ್ಷ್ಮಮ್ಮ, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್, ಉಪಾಧ್ಯಕ್ಷ ಕುಚೇಲ, ವಕೀಲ ತಿಮ್ಮಪ್ಪ, ಮುಖಂಡರುಗಳಾದ ಜೆಸಿಬಿ ಬಲರಾಮ್, ಪ್ರಸನ್ನಚಾರ್, ಗೋವಿಂದೇಗೌಡ, ಮಹೇಂದ್ರ, ಅನಿಲ್ ಕುಮಾರ್, ರಂಗಪ್ಪ, ಸಚಿನ್, ಮಧು, ತಮ್ಮಣ್ಣೇಗೌಡ, ನಟರಾಜ್, ಎ.ಜಿ.ಮನು, ರವೀಂದ್ರ, ಲಾಲೂಸಾಹೇಬ್, ಮಂಜು, ಅಶೋಕ್, ಕುಮಾರ್, ಡೈರಿಪ್ರಕಾಶ್, ಬಲರಾಮೇಗೌಡ, ಚಂದು, ರಾಘವನ್ ಗೌಡ, ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಂಗನಾಥ, ಕಂಪ್ಯೂಟರ್ ಆಪರೇಟರ್ ಚಾಂದಿನಿ, ಅಟೆಂಡರ್ ರವಿ, ಸಿಬ್ಬಂದಿಗಳಾದ ರಾಜು, ತಿಮ್ಮಪ್ಪ, ಶೇಖರೇಗೌಡ, ಮಧು ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.