July 30, 2025
1753797553605.jpg


ಹಾಸನ ಜುಲೈ.29- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ 2025-26 ನೇ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆಯನ್ನು ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಪ್ರಾಧಿಕಾರಿಗಳನ್ನಾಗಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅದರಂತೆ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾರವರ ಅಧ್ಯಕ್ಷತೆಯಲ್ಲಿ 2024-25 ನೇ ಸಾಲಿನಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಜಿಲ್ಲಾ ಮಟ್ಟದ ಕೌನ್ಸಿಲಿಂಗ್ ವರ್ಗಾವಣೆಗೆ ಸಂಬAಧಿಸಿದ ನೌಕರರುಗಳು ವರ್ಗಾವಣೆ ಬಯಸಿದ ಸ್ಥಳಗಳಿಗೆ ಕೌನ್ಸಿಲಿಂಗ್ ನಡೆಸಲಾಯಿತು.

ಜು.25 ರಂದು ವಿಶೇಷ ಪ್ರಕರಣಗಳಾದ ಅಂಗವಿಕಲತೆ ಮತ್ತು ದೈಹಿಕ ಅಸಮರ್ಥತಾ ಪ್ರಕರಣಗಳು, ಪತಿ- ಪತ್ನಿ ಪ್ರಕರಣಗಳು ಮತ್ತು 12 ವರ್ಷದೊಳಗಿನ ಮಕ್ಕಳಿರುವ ಒಂಟಿ ಪೋಷಕರು / ಒಂಟಿ ಮಹಿಳೆ / ವಿಕಲಚೇತನ ಮಕ್ಕಳಿರುವ ಪೋಷಕರುಗಳಿಗೆ ಶೇ.3 ರ ಮಿತಿಯಲ್ಲಿ ನಡೆಸಲಾಯಿತು.

ಜು.,28 ರ ಪೂರ್ವಾಹ್ನ ವಿಶೇಷ ವರ್ಗಾವಣಾ ಪ್ರಕರಣಗಳಿಂದ ಬಾಧಿತರಾದ ನೌಕರರುಗಳಿಗೆ ಹಾಗೂ ಸಾಮಾನ್ಯ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಶೇ.3 ರ ಮಿತಿಯಲ್ಲಿ ಹಾಗೂ ಜು.29 ರಂದು 5 ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ಒಂದೇ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಶೇ.6 ರ ಮಿತಿಯಲ್ಲಿ ಪಾರದರ್ಶಕವಾಗಿ ನಿಯಮಾನುಸಾರ ವರ್ಗಾವಣೆ ಕೌನ್ಸಿಲಿಂಗ್ ನಡೆಸಲಾಯಿತು.

ಈ ವೇಳೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆಯಾದ ಸಂಬAಧಪಟ್ಟ ನೌಕರರಿಗೆ ವರ್ಗಾವಣೆ ಆದೇಶವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ (ಅಭಿವೃದ್ಧಿ)ಗಳಾದ ಕೆ.ಹೆಚ್ ಕೃಷ್ಣಮೂರ್ತಿ ಯವರು ಉಪಸ್ಥಿತರಿದ್ದರು.
*-

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading