
ಚಿತ್ರದುರ್ಗಜುಲೈ29:
ಸಾಂಖ್ಯಿಕ ತಜ್ಞರಾದ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರು ಸಂಖ್ಯಾಶಾಸ್ತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಹೇಳಿದರು.
ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಾಂಖ್ಯಿಕ ತಜ್ಞರಾದ ಪ್ರೊ.ಪಿ.ಸಿ.ಮಹಲನೋಬಿಸ್ ಅವರ ಜನ್ಮ ದಿನಾಚರಣೆಯನ್ನು “ಸಾಂಖ್ಯಿಕ ದಿನಾಚರಣೆ”ಯನ್ನಾಗಿ ಆಚರಿಸುವ ಸಲುವಾಗಿ “75 years of National sample Survey” ವಿಷಯದ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೊ.ಪಿ.ಸಿ.ಮಹಾಲನೋಬಿಸ್ ಅವರು ಭಾರತ ಸಂಖ್ಯಾಶಾಸ್ತ್ರದ ಪಿತಾಮಹರಾಗಿದ್ದು, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು. ಸಾಂಖ್ಯಿಕ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು, ಸಿಬ್ಬಂದಿಗಳು ಸಾಂಖ್ಯಿಕ ಕ್ಷೇತ್ರಕ್ಕೆ ಸಣ್ಣ ಪ್ರಮಾಣದ ಕೊಡುಗೆ ನೀಡುವುದೇ ನಮ್ಮ ಜೀವಮಾನದಲ್ಲಿ ಮಾಡುವ ಸಾಧನೆ ಎಂದು ತಿಳಿಸಿದ ಅವರು, ಸಾಂಖ್ಯಿಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಕಷ್ಟು ಅವಕಾಶಗಳಿದ್ದು, ಬಹುಮುಖ ವ್ಯಕ್ತಿತ್ವ ವಿಕಸನಕ್ಕೆ ಸಾಂಖ್ಯಿಕ ಇಲಾಖೆ ಸಹಾಯಕವಾಗಲಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯ ಉಪನಿರ್ದೇಶಕಿ ಕುಮುದಾ ಮಾತನಾಡಿ, ಯಾವುದೇ ಒಂದು ಜನಸಾಮಾನ್ಯರ ಕಾರ್ಯಯೋಜನೆಗೆ ಸರ್ವೆಯ ಅಂಕಿ-ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರೊ.ಪಿ.ಸಿ. ಮಹಾಲನೋಬಿಸ್ ಅವರ ಕೊಡುಗೆ ಇಂದಿನ ಕಾಲಕ್ಕೆ ಒಂದು ಇಲಾಖೆಯಾಗಿ, ಇಲಾಖೆಯಡಿ ಕಾರ್ಯನಿರ್ವಹಿಸುವ ಹಲವರಿಗೆ ಉದ್ಯೋಗ ದೊರಕಿದ್ದು ಸಹ ಅವರ ಮೇರು ಕೊಡುಗೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ರವಿಕುಮಾರ ಮಾತನಾಡಿ, ರಾಷ್ಟ್ರೀಯ ಮಾದರಿ ಸಮೀಕ್ಷೆಯು ನಮ್ಮ ಜೀವನದ ತಳಮಟ್ಟದಿಂದ ಮೇಲಿನ ಹಂತದವರೆಗೂ ಒಂದು ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚನ್ನಬಸಪ್ಪ ಅವರು “75 years of National sample Survey” ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯ ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಅಶ್ವತ್ಥಾಮ, ಸಹಾಯಕ ನಿರ್ದೇಶಕಿ ಶಶಿರೇಖಾ, ತೋಟಗಾರಿಕೆ ಇಲಾಖೆಯ ಶಶಿಧರ್ ಸೇರಿದಂತೆ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.