
ಕರ್ನಾಟಕ ರಾಜ್ಯ ನಧಾಪ್/ಪಿಂಜಾರ ಸಂಘ ಚಳ್ಳಕೆರೆ. ತಾಲ್ಲೂಕು ಘಟಕದ ವತಿಯಿಂದ ತೃತೀಯ ತ್ರೈಮಾಸಿಕ ಸಭೆ ಇಂದು ಮಧ್ಯಾನ್ಹ ೧.೩೦ಕ್ಕೆ ನಗರದ ಕನ್ನಡ ಕೌಸ್ತುಭದಲ್ಲಿ ನಲ್ಲಿ ನಡೆದಿದ್ದು ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಷೇಕ್ ಬುಡೇನ್ ಅವರು ವಹಿಸಿದ್ದರು.






ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಸಮಿತಿಯ ಸದಸ್ಯರಾದ ಡಿ.ಶಬ್ರಿನಾ ಮಹಮದ್ ಅಲಿ ಅವರು ಮಾತನಾಡಿ,’ಪಿಂಜಾರ’ ಎನ್ನುವುದು ಒಂದು ವೃತ್ತಿವಾಚಕ ಪದ. ಹತ್ತಿ ಗಿಂಜಿ ಗಂಜಿ ಕುಡಿತಿದ್ದ ಶ್ರಮಿಕ ವರ್ಗದವರು. ಈ ಸಮುದಾಯದವರು ಯಾರೇಯಾಗಲಿ ಸರ್ವರನ್ನು ಸಮಾನವಾಗಿ ಕಂಡು ಭಾವೈಕ್ಯತೆ ಮನೋಭಾವದಿಂದ ಬದುಕುತ್ತಾರೆ. ಈ ಸಮುದಾಯ ಜಾತ್ಯತೀತವಾಗಿದೆ. ಸರ್ವಧರ್ಮವನ್ನು ಸಮಾನವಾಗಿ ಕಾಣುವ ವಿಶೇಷ ಗುಣ ಪಿಂಜಾರ ಸಮುದಾಯದ ಪ್ರಮುಖ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ವಿಭಾಗೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಕರೀಂಸಾಬ್ ಅವರು ಮಾತನಾಡಿ “ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಮುದಾಯದ ಏಳಿಗೆ ಸಾಧ್ಯ, ಸಂಘ ನಮಗೆ ಏನು ಮಾಡಿದೆ ಅನ್ನುವುದಕ್ಕಿಂತ ಸಂಘಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದು ಮುಖ್ಯ. ಹಾಗಾಗಿ ನಾವೆಲ್ಲರೂ ಬದ್ಧತೆಯಿಂದ ಸಮುದಾಯದ ಏಳಿಗಿಗೆ ಶ್ರಮಿಸಬೇಕು ಎಂದರು. ಮತ್ತೋರ್ವ ರಾಜ್ಯಸಮಿತಿಯ ಸದಸ್ಯರಾದ ಜನಾಬ್ ಬಷೀರ್ ಅಹಮದ್ ಅವರು ಮಾತನಾಡಿ, ಸದಸ್ಯತ್ವ ಮಾಡಿಸುವಲ್ಲಿ ಸ್ವ ಇಚ್ಚೆ ಬಹಳ ಮುಖ್ಯವಾಗುತ್ತದೆ. ಎಲ್ಲರೂ ಬದ್ದತೆಯಿಂದ ಇದ್ದಾಗ ಮಾತ್ರ ಸದಸ್ಯತ್ವ ಅಭಿಯಾನ ಯಶಸ್ವಿಯಾಗುತ್ತದೆ ಎಂದರು. ಉದ್ಘಾಟನೆ ಮಾಡಿದ ಮಹಮದ್ ಇಮಾಂ ಸರ್ ಅವರು ” ಸಮುದಾಯದ ಏಳಿಗೆಗಾಗಿ ಎಲ್ಲರು ಒಂದಾಗಿ ಶ್ರಮಿಸುವುದೇ ಮುಖ್ಯ. ನಮಗೆ ಭಾಷೆ ಬಾರದಿದ್ದರೂ ಇಸ್ಲಾಂ ನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತಿದ್ದೇವೆ. ಅದಕಾಗಿ ನಾವು ಹಿಂಜರಿಯುವ ಅಗತ್ಯವಿಲ್ಲ. ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಏನೇಯಿದ್ದರು ಅದನ್ನ ಲೆಕ್ಕಿಸಬಾರದು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಷೇಕ್ ಬುಡೇನ ಸರ್ ಅವರು,ಸಭೆಯ ಚರ್ಚಾಂಶಗಳನ್ನು ತಿಳಿಸುತ್ತಾ…ಪಿಂಜಾರ ಎಂದು ಹೇಳಲು ಹಿಂಜರಿಯದೇ ಹೆಮ್ಮೆಯಿಂದ ಹೇಳಬೇಕು. ನಮ್ಮ ಸಮುದಾಯವನ್ನು ಒಪ್ಪಿಕೊಂಡು ಎಲ್ಲರೂ ಒಂದಾಗಿ ಸಹಬಾಳ್ವೆಯಿಂದ ಬಾಳುವ ಕಲೆಯನ್ನು ನಮ್ಮದಾಗಿಸಿಕೊಳ್ಳಬೇಕು. ಸಂಘದ ಹಿತಕ್ಕಾಗಿ ಬದ್ಧತೆಯಿಂದ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಸಮಿತಿಯ ಸದಸ್ಯರಾದ ಮಹಮದ್ ಅಲಿ ಎಂ.ಐ ಅವರು, ಸ್ವಾಗತವನ್ನು ಸಂಘದ ಕಾರ್ಯದರ್ಶಿಗಳಾದ ಶ್ರೀ ಕಡದರಹಳ್ಳಿ ಬಾಬು ಅವರು, ಪ್ರಾರ್ಥನೆಯನ್ನ ಪು.ಇನ್ಷಾ ಎ.ಎಸ್ ಅವರು, ವಂದನಾರ್ಪಣೆಯನ್ನು ಪುಟಾಣಿ ಶಿಫಾ.ಎಂ.ಎಸ್ ಅವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಹಮದ್ ಇಮಾಮ್ ,ಇಬ್ರಾಹಿಂ ಸಾಬ್, ರಾಮಜೋಗಿಹಳ್ಳಿ ದಾದಾಪೀರ್, ನೆಲಗತನಹಟ್ಟಿ ಚಮನ್ ಸಾಬ್, ಫಾತೀಮಾಬಿ, ಸುಫಿಯಾ ಬಾನು,ಷಂಷಾದ್ ಮತ್ತಿರರು ಭಾಗವಹಿಸಿದ್ದರು. ಸಭೆ ಯಶಸ್ವಿಯಾಗಿ ನಡೆಯಿತು.
About The Author
Discover more from JANADHWANI NEWS
Subscribe to get the latest posts sent to your email.