July 12, 2025
1745930575837.jpg


ಹಿರಿಯೂರು:
ನಗರದಲ್ಲಿರುವ ಶಿಥಿಲ ಕಟ್ಟಡಗಳನ್ನು ಮಾಲಿಕರು ತಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಕಟ್ಟಡ ಮಾಲಿಕರೇ ಜವಬ್ದಾರರಾಗುತ್ತಾರೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಮಳೆಗಾಲ ಬೇಗ ಆರಂಭವಾಗಿದ್ದು, ಗುಡುಗು, ಸಿಡಿಲು, ಬಿರುಗಾಳಿಯ ಅಬ್ಬರ ಜೋರಾಗಿದೆ. ಸತತಮಳೆ-ಗಾಳಿಗೆ ಶಿಥಿಲ ಕಟ್ಟಡಗಳು ಕುಸಿದು ಬೀಳುವ ಸಾಧ್ಯತೆ ಇದೆ. ಅಂತಹ ಕಟ್ಟಡಗಳ ಮಾಲಿಕರು ಮತ್ತು ಬಾಡಿಗೆದಾರರು ಅಪಾಯಕ್ಕೆ ಸಿಲುಕುವುದು ಬೇಡ . ಈ ಕಟ್ಟಡಗಳಲ್ಲಿ ವಾಸಿಸುವುದು, ವ್ಯಾಪಾರ ನಡೆಸುವುದು ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಅಧಿನಿಯಮ 228, 229, 231ರ ಉಲ್ಲಂಘನೆ ಆಗಲಿದೆ ಎಂಬುದಾಗಿ ಅವರು ಹೇಳಿದರು.
ಆಸ್ತಿ ಮಾಲಿಕರು ಶಿಥಿಲಾವಸ್ಥೆಯಲ್ಲಿರುವ, ಉಪಯೋಗಕ್ಕೆ ಯೋಗ್ಯವಲ್ಲದ ಕಟ್ಟಡಗಳಲ್ಲಿ ವಾಸ ಮಾಡುವುದು, ವಾಣಿಜ್ಯ ವ್ಯವಹಾರ ನಡೆಸುವುದು ಅಪಾಯಕಾರಿ. ಹೀಗಾಗಿ ತುರ್ತಾಗಿ ಈ ಕಟ್ಟಡಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಕಟ್ಟಡದ ಮಾಲಿಕರು ಜವಬ್ದಾರರಾಗಿರುತ್ತಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading