March 29, 2026
FB_IMG_1774801909459.jpg

ಬೆಂಗಳೂರು ನಗರ ಜಿಲ್ಲೆ, ಮಾರ್ಚ್ 27
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು ರೂ. 30.10 ಕೋಟಿ ಮೌಲ್ಯದ ಒಟ್ಟು 09 ಎಕರೆ 0.21 ಗುಂಟೆ ಸರ್ಕಾರಿ ಜಮೀನುವನ್ನು ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಇಂದು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಕಾಲುವೆ, ಗೋಮಾಳ, ಕುಂಟೆ, ತೋಪು, ಸ್ಮಶಾನ, ಗುಂಡುತೋಪು ಸೇರಿದಂತೆ ಸರ್ಕಾರಿ ಜಾಗಗಳಿಗೆ ಭೇಟಿ ನೀಡಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.
ಬೆಂಗಳೂರು ಪೂರ್ವ ತಾಲ್ಲೂಕು:
ಬಿದರಹಳ್ಳಿ ಹೋಬಳಿ, ದೊಡ್ಡಬನಹಳ್ಳಿ ಗ್ರಾಮದ ಸ.ನಂ 115ರ ಕಾಲುವೆ – 0.04 ಗುಂಟೆ (ಮೌಲ್ಯ: ₹0.60 ಲಕ್ಷ)
ಸ.ನಂ 3ರ ಗೋಮಾಳ – 0.15 ಗುಂಟೆ (ಮೌಲ್ಯ: ₹2.50 ಕೋಟಿ)
ಕಟ್ಟುಗೊಲ್ಲಹಳ್ಳಿ ಗ್ರಾಮದ ಸ.ನಂ 39ರ ಕುಂಟೆ – 0.05 ಗುಂಟೆ (ಮೌಲ್ಯ: ₹1.00 ಕೋಟಿ)
ಬಳಿಶಿವಾಲೆ ಗ್ರಾಮದ ಸ.ನಂ 78ರ ತೋಪು – 0.13 ಗುಂಟೆ (ಮೌಲ್ಯ: ₹1.00 ಕೋಟಿ)
ವರ್ತೂರು ಹೋಬಳಿ, ವಾಲೇಪುರ ಗ್ರಾಮದ ಸ.ನಂ 9ರ ಸ್ಮಶಾನ – 0.04 ಗುಂಟೆ (ಮೌಲ್ಯ: ₹0.80 ಲಕ್ಷ)
ಬೆಂಗಳೂರು ದಕ್ಷಿಣ ತಾಲ್ಲೂಕು:
ತಾವರೆಕೆರೆ ಹೋಬಳಿ, ದೊಡ್ಡಮಾರನಹಳ್ಳಿ ಗ್ರಾಮದ ಸ.ನಂ 22ರ ಸ್ಮಶಾನ – 0.20 ಗುಂಟೆ (ಮೌಲ್ಯ: ₹0.50 ಲಕ್ಷ)
ಯಲಹಂಕ ತಾಲ್ಲೂಕು:
ಹೆಸರುಘಟ್ಟ ಹೋಬಳಿ, ಅರಕೆರೆ ಗ್ರಾಮದ ಸ.ನಂ 130ರ ಗುಂಡುತೋಪು – 0.20 ಗುಂಟೆ (ಮೌಲ್ಯ: ₹1.20 ಕೋಟಿ)
ಬೆಂಗಳೂರು ಉತ್ತರ ತಾಲ್ಲೂಕು:
ದಾಸನಪುರ ಹೋಬಳಿ, ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಸ.ನಂ 61ರ ಸರ್ಕಾರಿ ಗೋಮಾಳ – 07 ಎಕರೆ 0.20 ಗುಂಟೆ (ಮೌಲ್ಯ: ₹22.50 ಕೋಟಿ)
ಈ ಕಾರ್ಯಾಚರಣೆಯಲ್ಲಿ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading