ನಾಯಕನಹಟ್ಟಿ-: ಎಪಿಡಿ ಸಂಸ್ಥೆಯು ಗ್ರಾಮೀಣ ಭಾಗದ ಬಡ ವಿಕಲಚೇತನರ ಪಾಲಿನ ಉತ್ತಮ ಸಂಸ್ಥೆಯಾಗಿದೆ ಎಂದು ಚಳ್ಳಕೆರೆ ತಾಲೂಕು ಕೀಲು ಮೂಳೆ ತಜ್ಞರಾದ ಡಾ. ಮಂಜಪ್ಪ ತಿಳಿಸಿದರು.
ಗುರುವಾರ ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಚಿತ್ರದುರ್ಗ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಳ್ಳಕೆರೆ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ ಪ್ರಾಟ್ ಆ್ಯಂಡ್ ವೆಟ್ನಿ ನಿಶಾಡ್೯ ಸೇವಾ ಸಂಸ್ಥೆ( ರಿ) ಓಂ ಆಸ್ಪತ್ರೆ ರಾಣೆಬೆನ್ನೂರು.

ದಿ ಅಸೋಸಿಯನ್ ಆಫ್ ಪೀಪಲ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆ ರಾಣೆಬೆನ್ನೂರು ಇವರುಗಳ ಸಹಯೋಗದಲ್ಲಿ ಬೆನ್ನು ಹುರಿ ಅಪಘಾತ ವ್ಯಕ್ತಿಗಳಿಗೆ ವೈದ್ಯಕೀಯ ತಪಾಸಣೆ ಮತ್ತು ವ್ಯಾಯಾಮ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ವಾಹನ ಸವಾರರು ಅರ್ಜೆಂಟಾಗಿ ತುರ್ತಾಗಿ ಮತ್ತು ಮದ್ಯಪಾನ ಸೇವಿಸುವುದರಿಂದ ಅಪಘಾತಗಳಿಗೆ ಕಾರಣವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು ವಾಹನವನ್ನು ನಿಧಾನವಾಗಿ ಚಾಲನೆ ಮಾಡಬೇಕು ತಮ್ಮ ಕುಟುಂಬದ ಸದಸ್ಯರಿಗೆ ಆಧಾರ ಸ್ತಂಭವಾದ ತಾವೇ ಈ ರೀತಿ ಅಪಘಾತಗಳನ್ನು ಮಾಡಿಕೊಂಡರೆ ಅವರ ಗತಿ ಏನು ಆದ್ದರಿಂದ ಪ್ರತಿಯೊಬ್ಬರೂ ತಾಳ್ಮೆ ಮತ್ತು ಸಹನೆಯಿಂದ ವಾಹನ ಚಾಲನೆ ಮಾಡಬೇಕು ಇವತ್ತು ಎಪಿಡಿ ಸಂಸ್ಥೆ ಉತ್ತಮವಾಗಿ ವಿಕಲಚೇತನರ ನೆರವಿಗೆ ಧಾವಿಸಿ ಇಂತಹ ಉತ್ತಮ ಕಾರ್ಯವನ್ನು ಮಾಡುವುದರ ಮೂಲಕ ವಿಕಲಚೇತನರ ಪಾಲಿಗೆ ಎಡಿಪಿ ಸಂಸ್ಥೆ ವರದಾನವಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀ ರೋಗ ತಜ್ಞರಾದ ಡಾ. ರೋಹಿಣಿ ಮಾತನಾಡಿದರು.
ಇದೇ ವೇಳೆಯಲ್ಲಿ ಸಂಯೋಜಕರು ಎಡಿಪಿ ಸಂಸ್ಥೆ ರಾಣಿಬೆನ್ನೂರು ನಿಂಗಪ್ಪ ಕೆ ದೊಡ್ಮನಿ, ನಲಗೇತನಹಟ್ಟಿ ಪತ್ರಕರ್ತ ಕೆ.ಟಿ.ಓಬಳೇಶ್,
ಸಹಾಯಕ ವ್ಯಾಯಾಮ ತಜ್ಞರಾದ ಶ್ರೀಮತಿ ಸುಮಂಗಲ ಎಡಿಪಿ ರಾಣೆಬೆನ್ನೂರು, ಯು ಆರ್ ಡಬ್ಲ್ಯೂ ವಿಶ್ವನಾಥ್ ಬೋಸೆದೇವರಹಟ್ಟಿ, ಪ್ರಶಾಂತ್ ಎಪಿಡಿ ಸಂಸ್ಥೆ ರಾಣಿಬೆನ್ನೂರು. ಸೇರಿದಂತೆ ವಿಕಲಚೇತನರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.