January 29, 2026
IMG-20260129-WA0179.jpg

ಚಳ್ಳಕೆರೆ:ಕಿವಿಯು ಶ್ರವಣಕ್ಕೆ ಮಾತ್ರವಲ್ಲದೆ ದೇಹದ ಸಮತೋಲನವನ್ನು ಕಾಪಾಡುವ ಮಹತ್ವದ ಅಂಗವಾಗಿದ್ದು, ಜ್ಞಾನೇಂದ್ರಿಯ ಕರ್ಮೇಂದ್ರಿಯ ಎರಡು ಕಾರ್ಯನಿರ್ವಹಿಸುತ್ತವೆ ,ಈ ಎರಡೂ ಕಾರ್ಯಗಳು ಸರಿಯಾಗಿ ನಡೆಯಲು ಆರೋಗ್ಯಕರ ಕಿವಿ ಅಗತ್ಯವೆಂದು ಸಾಣೀಕೆ ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಳಿತ ವೈದ್ಯಾಧಿಕಾರಿ ಡಾ.ನಾಗರಾಜ್ ಹೇಳಿದರು.

ತಾಲ್ಲೂಕಿನ ಸಾಣೀಕೆರೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಕಾಶ್ ಸ್ಪಾಂಜ್ ಐರನ್ ಕಂಪನಿ, ಇಂಪೀರಿಯಲ್ ಸಂಸ್ಥೆ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು

ಗಂಟಲಿನ ಅಂಗಾಂಗಗಳಿಂದ ಹೊರಡುವ ಧ್ವನಿ ಕಿವಿಗೆ ತಲುಪುತ್ತದೆ. ಗರ್ಭಾವಸ್ಥೆಯಲ್ಲಿಯೇ ಕಿವಿಯ ಭಾಗಗಳು ಧ್ವನಿಪೆಟ್ಟಿಗೆಯ ಅಂಗಗಳೊಂದಿಗೆ ಬೆಳೆಯುವುದರಿಂದ, ಮಾತು ಮತ್ತು ಶ್ರವಣದ ನಡುವೆ ಅವಿನಾಭಾವ ಸಂಬಂಧವಿದೆ. ಮೂಗು ಹಾಗೂ ಗಂಟಲಿನಲ್ಲಿ ಉಂಟಾಗುವ ಸೋಂಕುಗಳು ಮತ್ತು ಕಫದ ಸಂಚಯವು ಕಿವಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೂ ನಿರಂತರವಾಗಿ ಜೋರಾದ ಶಬ್ದಗಳನ್ನು ಆಲಿಸುವುದು, ಇಯರ್‌ಫೋನ್ ಮೂಲಕ ಹತ್ತಿರದಿಂದ ಹೆಚ್ಚಿನ ಧ್ವನಿಯಲ್ಲಿ ಸಂಗೀತ ಕೇಳುವುದು, ಕರ್ಕಶ ಶಬ್ದಗಳಿಗೆ ದೀರ್ಘಕಾಲ ಒಳಗಾಗುವುದು ಹಾಗೂ ನಿರಂತರ ಏಕಾಂತದಲ್ಲಿರುವುದೂ ಕಿವಿ ಮತ್ತು ಮಾತಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರಿಂದ ಸಂಘ ಸಂಸ್ಥೆಗಳು ನಡೆಸುವ ಉಚಿತ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ.

ಕಿವುಡುತನಕ್ಕೆ ಹಲವು ಕಾರಣಗಳಿದ್ದು, ಕೆಲವು ಮಕ್ಕಳು ಹುಟ್ಟಿನಿಂದಲೇ ಕಿವುಡರಾಗುವ ಸಾಧ್ಯತೆ ಇದೆ. ಪೋಷಕರ ವಂಶವಾಹಿ ದೋಷ, ಗರ್ಭಿಣಿಗೆ ಬರುವ ರುಬೆಲ್ಲಾ, ಕಾಮಾಲೆ, ಅತಿಯಾದ ವಾಂತಿ, ಪೋಷಕಾಂಶ ಕೊರತೆ, ಅಪಘಾತಗಳು, ಪ್ರಸವಕಾಲದ ತೊಂದರೆಗಳು ಹಾಗೂ ಕೆಲವು ತೀಕ್ಷ್ಣ ಔಷಧಗಳ ಸೇವನೆಯಿಂದ ನರಗಳು ಮತ್ತು ಶ್ರವಣಾಂಗಗಳ ಬೆಳವಣಿಗೆ ಕುಂಠಿತಗೊಂಡಗ ಕಿವುಡುತನ ಉಂಟಾಗಬಹುದು ಎಂದರು

ಪ್ರಕಾಶ್ ಸ್ಪಾಂಜ್ ಕಂಪನಿ ಹೆಚ್. ಆರ್ ಆಗಿರುವ ರುದ್ರಪ್ಪ ಮಾತನಾಡಿ ನಮ್ಮ ಕಂಪನಿ ಸಾಕಷ್ಟು ಸಮಾಜ ಮುಖಿ ಸೇವೆ ಮಾಡಿಕೊಂಡು ಬರುತ್ತಿದ್ದೆ ಸಾಣಿಕೆರೆ ಗ್ರಾಮ ಪಂಚಾಯತಿ ಸುತ್ತ ಮುತ್ತಲಿನ ಎಲ್ಲ ಹಳ್ಳಿಗಳಿಗೂ ಉಚಿತ ಆರೋಗ್ಯ ತಪಾಸಣೆಯನ್ನು ಎರಡು ಮೂರು ತಿಂಗಳಿಗೊಮ್ಮೆ ನಡೆಸುತ್ತೇವೆ , ಇದರ ಸದುಪ ಯೋಗವನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ಸಹ ಅನುಕೂಲ ಪಡೆದು ಕೊಳ್ಳುತ್ತಿದ್ದಾರೆ ಇಂದು ನೆಡೆಯುವ ಕಿವಿ ತಪಾಸಣಾ ಶಿಬಿರದಲ್ಲಿ 100 ಜನರು ಪಾಲ್ಗೊಂಡು ವೈದ್ಯರಿಂದ ಸಲಹೆ ಪಡೆದು ಕಿವಿಗೆ ಹಾನಿಕಾರಕವಾದ ಶಬ್ದಗಳಿಂದ ದೂರವಿದ್ದು, ಶ್ರವಣ ಸಮಸ್ಯೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಡಾ ಕಿರಣ್ ಮಾತನಾಡಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ತೆರಳಿದರೆ 2 ಸಾವಿರ ಹಣ ನೀಡಬೇಕು. ಇಂತಹ ಉಚಿತ ಶಿಬಿರದಲ್ಲಿ ಬಂದು ಕಿವಿ ದೋಷ ತಪಾಸಣೆ ಮಾಡಿಸಿ ಕೊಂಡು ಸರ್ಕಾರಿ ವೈದ್ಯರು ನೀಡುವ ಸಲಹೆ ಮೇರೆಗೆ ಚಿಕಿತ್ಸೆ ಪಡೆದರೆ ಕಿವಿಯ ಮೂಲಕ ಶಬ್ದಗಳ ಮಾತುಗಳ ಗ್ರಹಿಕೆ ಕಾಪಾಡಿಕೊಳ್ಳಬಹುದು ಎಂದರು

ಈ ಸಂದರ್ಭದಲ್ಲಿ ಮಂಜುನಾಥ್, ಕೆಂಚಪ್ಪ, ಶಿವಣ್ಣ ಸಾಣಿಕೆರೆ ಆಸ್ಪತ್ರೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯಾರು ಸಾರ್ವಜನಿಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading