ಚಳ್ಳಕೆರೆ: ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿದ್ದು ಪರಕೀಯರು ಹಾಗೂ ಬೇರೆ ಭಾಷೆಗಿರ ದಾಳಿ ನಡೆಸಿದರೂ ಕನ್ನಡ ಭಾಷೆ ತನ್ನ ಉಳಿವನ್ನು ಉಳಿಸಿಕೊಂಡಿರುವುದು ಕನ್ನಡಿಗರ ಔದಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಚಿತ್ರದುರ್ಗ ಜಿಲ್ಲೆಯ ಸಂಸದ ಗೋವಿಂದ ಕಾರಜೋಳ ತಿಳಿಸಿದರು.














ನಗರದ ಬಿ ಎಂ ಜಿ ಎಚ್ ಎಸ್ ಶಾಲಾ ಆವರಣದ ಬಯಲು ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಕಲಾ ಕುಸುಮಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆ ಎಂದೂ ನಶಿಸಿ ಹೋಗದ ಭಾಷೆಯಾಗಿದ್ದು ಸುಮಾರು 600 ವರ್ಷ ಪರಕಿಯರು ನಮ್ಮನ್ನು ಆಳಿದರು ದೇಶದಲ್ಲಿ ಧರ್ಮ ಮತ್ತು ಭಾಷೆ ನಶೆಸಿಸಿ ಹೋಗದೆ ತನ್ನ ತನವನ್ನು ಉಳಿಸಿಕೊಂಡಿದೆ. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಗಿದ್ದಾಗ ಗಡಿನಾಡಿನ ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಕಲಾವಿದರಿಗೆ ನಾಟಕ ಕಂಪನಿಗಳಿಗೆ ಪ್ರೋತ್ಸಾಹ ನೀಡಿ ಗೌರವಿಸಿದ್ದೇನೆ ಕನ್ನಡ ಕಲಾ ಕುಸುಮಗಳು ಕಾರ್ಯಕ್ರಮ ಮಕ್ಕಳ ಥ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ ರಘುಮೂರ್ತಿ ಮಾತನಾಡಿ ಚಳ್ಳಕೆರೆ ತಾಲೂಕು ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿದ್ದರು ಕನ್ನಡ ಭಾಷೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು ನುಡಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಕೇವಲ ನವಂಬರ್ ತಿಂಗಳಿಗೆ ಸೀಮಿತಗೊಳಿಸದೆ ವರ್ಷವಿಡಿ ಕನ್ನಡ ಭಾಷೆ ಕಲೆ ಸಾಹಿತ್ಯವನ್ನು ಯುವ ಜನತೆಗೆ ತಲುಪಿಸುವ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಕನ್ನಡ ಕಲಕುಸುಮಗಳು ಕಾರ್ಯಕ್ರಮದಿಂದ ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಭಾಗದ ಸೋಬಾನೆ ಭಜನೆ ಕೋಲಾಟ ಗಳಂತಹ ಜಾನಪದ ಸೊಗಡಿನ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿಟಿ ವೀರಭದ್ರ ಸ್ವಾಮಿ ಮಾತನಾಡಿ ಕನ್ನಡ ಕಲಾ ಕುಸುಮಗಳು ಕಾರ್ಯಕ್ರಮ ಮೂರು ದಿನಗಳ ಕಾಲ ಜರಗಲಿದ್ದು ತಾಲೂಕಿನ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರ ಧಾತ್ರಿ ಸಿರಿಗೇರಿ ರವರಿಂದ ಶ್ರೀ ಕೃಷ್ಣ ಸಂಧಾನ ವಿಶೇಷ ಹಾಸ್ಯ ನಾಟಕ ಪ್ರದರ್ಶನ ಬುಧವಾರ ವಿವಿಧ ಗ್ರಾಮಗಳಿಂದ ಹಾಗೂ ನಗರ ಪ್ರದೇಶದ ಕಲಾವಿದರಿಂದ ಜಾನಪದ ಕಲಾಪ್ರದರ್ಶನ ಕಾರ್ಯಕ್ರಮಗಳು ಜರುಗಲಿವೆ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸುಮ ಬರಮಯ್ಯ ಗದ್ದಿಗೆ ತಿಪ್ಪೇಸ್ವಾಮಿ ಬಿಜೆಪಿ ಮುಖಂಡರಾದ ರಾಮದಾಸ್ ಸೋರನಹಳ್ಳಿ ಶ್ರೀನಿವಾಸ್ ಕೆಟಿ ಕುಮಾರಸ್ವಾಮಿ ರೇವಣ್ಣ ಸಾಹಿತ್ಯ ಪರಿಷತ್ ನ ದಯಾನಂದ ವೀರಭದ್ರಪ್ಪ ಕಾಟಯ್ಯ ಮಹಾಂತೇಶ್ ಎಂ ಎನ್ ಮೃತ್ಯುಂಜಯ ಚಿತ್ತಯ್ಯ ರಾಜಣ್ಣ ಎನ್ ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.