ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪುಸ್ತಕಾಧಾರಿತ ವ್ಯವಹಾರ ಅಧ್ಯಯನ ಸಾಕಾಗುವುದಿಲ್ಲ. ವಿದ್ಯಾರ್ಥಿಗಳಿಗೆ ನೈಜ ವ್ಯಾಪಾರ ಅನುಭವದೊಂದಿಗೆ ಕೌಶಲ್ಯಗಳನ್ನು ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಎಸ್.ನಿಜಲಿಂಗಪ್ಪ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್. ಕಲ್ಮಠ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರತಿಷ್ಠಿತ ಎಸ್.ನಿಜಲಿಂಗಪ್ಪ ಎಜುಕೇಷನಲ್ ಟ್ರಸ್ಟ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ನಿಜಲಿಂಗಪ್ಪ ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗವು ಪ್ರಥಮ ಪಿ.ಯು ವಿದ್ಯಾರ್ಥಿಗಳಿಗಾಗಿ ಪ್ರತಿ ಶನಿವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ನೈಜ ವ್ಯಾಪಾರ ಕೌಶಲ್ಯಗಳ ಅರಿವು ಮೂಡಿಸುವ ಉದ್ದೇಶ ಹೊಂದಿದೆ.






ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೇಕರಿ, ದಿನಸಿ ಅಂಗಡಿ, ಬಂಗಾರ–ಬೆಳ್ಳಿ ಅಂಗಡಿ, ಹೋಟೆಲ್, ಪಾತ್ರೆ ಅಂಗಡಿ, ಫೈನಾನ್ಸ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರ ವಹಿವಾಟು, ಹಣಕಾಸು ನಿರ್ವಹಣೆ, ಗ್ರಾಹಕ ಸಂಬಂಧ ಹಾಗೂ ವ್ಯವಹಾರದ ಮೂಲ ಕಾರ್ಯತಂತ್ರಗಳನ್ನು ನೇರವಾಗಿ ತಿಳಿದುಕೊಂಡರು.
ಈ ಅನುಭವದಿಂದ ವಿದ್ಯಾರ್ಥಿಗಳು ಪಠ್ಯದಲ್ಲಿರುವ ವ್ಯವಹಾರ ತತ್ತ್ವಗಳನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುವ ಅವಕಾಶ ಪಡೆದಿದ್ದು, ಭವಿಷ್ಯದ ವೃತ್ತಿಜೀವನಕ್ಕೆ ಇದು ಬಹಳ ಸಹಕಾರಿಯಾಗಲಿದೆ ಎಂದು ಕಾಲೇಜಿನ ಉಪನ್ಯಾಸಕರು ಅಭಿಪ್ರಾಯಪಟ್ಟರು.ವ್ಯಾಪಾರ ಕೌಶಲ್ಯಗಳು ಎಂದರೇನು?
ಯಶಸ್ವಿ ವ್ಯವಹಾರ ನಡೆಸಲು ಅಗತ್ಯವಾದ ಕೌಶಲ್ಯಗಳೇ ವ್ಯಾಪಾರ ಕೌಶಲ್ಯಗಳು. ಇದರಲ್ಲಿ
ಸಂವಹನ
ಸಮಸ್ಯೆ ಪರಿಹಾರ
ನಾಯಕತ್ವ
ನೆಟ್‌ವರ್ಕಿಂಗ್
ಮಾರಾಟ ಮತ್ತು ಮಾರ್ಕೆಟಿಂಗ್
ಆರ್ಥಿಕ ನಿರ್ವಹಣೆ
ಮುಖ್ಯವಾಗಿವೆ. ಈ ಕೌಶಲ್ಯಗಳನ್ನು ತರಬೇತಿ, ನಿರಂತರ ಅಭ್ಯಾಸ ಹಾಗೂ ಅನುಭವಿಗಳಿಂದ ಕಲಿಯುವ ಮೂಲಕ ಅಭಿವೃದ್ಧಿಪಡಿಸಬಹುದು.
– ಕೆ.ಎಸ್. ಕಲ್ಮಠ್
ಕಾರ್ಯದರ್ಶಿ,
ಎಸ್.ನಿಜಲಿಂಗಪ್ಪ ಎಜುಕೇಷನಲ್ ಟ್ರಸ್ಟ್, ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.