ಚಳ್ಳಕೆರೆ:
ಸಾಣಿಕೆರೆ ಸರ್ಕಾರಿ ನೌಕರ ಸಂಘ (ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ) ಹಾಗೂ ಸಾಣಿಕೆರೆ ಗ್ರಾಮ ಪಂಚಾಯಿತಿ, ಗ್ರಾಮದ ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ 70ನೇ ಕನ್ನಡ ರಾಜ್ಯೋತ್ಸವ, 2ನೇ ವರ್ಷದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಹಾಗೂ ಗ್ರಾಮದ ಕೆಎಎಸ್ ಅಧಿಕಾರಿ ಶ್ರೀಯುತ ಎಸ್. ರೇವಣ್ಣ ಅವರಿಗೆ ಗೌರವಂದನೆ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ಸಾಣಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.













ಕಾರ್ಯಕ್ರಮಕ್ಕೆ ಮಕ್ಕಳ ಪೂರ್ಣಕುಂಭ ಮೇಳ, ಕಹಳೆ ವಾದ್ಯ ವೃಂದ, ಕೋಲಾಟ ಹಾಗೂ ಇತರೆ ಜಾನಪದ ತಂಡಗಳ ನೃತ್ಯ ವೈಭವದೊಂದಿಗೆ ಕನ್ನಡಾಂಬೆ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಣಿಕೆರೆ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಹಾಗೂ ಜಂಟಿ ನಿಯಂತ್ರಕರು (ಹಣಕಾಸು ಇಲಾಖೆ, ಬೆಂಗಳೂರು)ರಾದ ಶ್ರೀಯುತ ಎಸ್. ರೇವಣ್ಣ ವಹಿಸಿಕೊಂಡಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ಡಿ. ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಹಿತಿಗಳು ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ. ಶಿವಲಿಂಗಪ್ಪ ಸಿ. ಉಪನ್ಯಾಸ ನೀಡಿದರು. ಗ್ರಾಮಮಟ್ಟದಲ್ಲಿ ಸರ್ಕಾರಿ ನೌಕರರು ಒಗ್ಗಟ್ಟಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವಂತಹ ಅರ್ಥಪೂರ್ಣ ಕಾರ್ಯಕ್ರಮವು ಜಿಲ್ಲೆಯಲ್ಲಿ ಅಪರೂಪವಾಗಿದ್ದು, ಕನ್ನಡ ನಾಡಿನ ಬೆಳವಣಿಗೆಗೆ ಉತ್ತಮ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾಣಿಕೆರೆ ಗ್ರಾಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಗ್ರಾಮದ ಮೊದಲ ಕೆಎಎಸ್ ಅಧಿಕಾರಿಯಾದ ಶ್ರೀಯುತ ಎಸ್. ರೇವಣ್ಣ ಹಾಗೂ ದಂಪತಿಯನ್ನು ಸಂಘ ಮತ್ತು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಎಸ್. ರೇವಣ್ಣ ಅವರು, ಗ್ರಾಮ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಕರೆ ನೀಡಿದರು. ಸತತ ಪರಿಶ್ರಮದಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ತಮ್ಮ ಅನುಭವ ಹಂಚಿಕೊಂಡರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಯುತ ಕೆ. ವಿಜಯ್, ನಿವೃತ್ತ ಶಿಕ್ಷಣಾಧಿಕಾರಿ ಪಿ. ರಾಮಯ್ಯ, ನಿವೃತ್ತ ಮುಖ್ಯ ಶಿಕ್ಷಕರು ವಿ. ಹನುಮಂತಪ್ಪ, ಕೆಂಜೇಡಿಯಪ್ಪ ಎಸ್., ಚಂದ್ರಣ್ಣ ಎಸ್.ಎ., ಸಂಘದ ಗೌರವಾಧ್ಯಕ್ಷ ಜೆ. ಶಿವಕುಮಾರ್, ಉಪಾಧ್ಯಕ್ಷೆ ಶ್ರೀಮತಿ ಪುಟ್ಟರಂಗಮ್ಮ, ಕಾರ್ಯಾಧ್ಯಕ್ಷ ಶ್ರೀ ರುದ್ರಮುನಿ ಆರ್., ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ನಟರಾಜ್ ಡಿ. ಸ್ವಾಗತಿಸಿ, ಎಸ್. ತಿಪ್ಪೇಸ್ವಾಮಿ (ಎಸ್‌ಡಿಎ) ವಂದಿಸಿದರು. ಡಯಟ್ ಉಪನ್ಯಾಸಕಿ ಶ್ರೀಮತಿ ಶಿವಲೀಲಾ ಎಂ.ಎನ್. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
About The Author
Discover more from JANADHWANI NEWS
Subscribe to get the latest posts sent to your email.