ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಆರಾಧ್ಯದೈವ ಬಂಡೆ ಬಸವೇಶ್ವರಸ್ವಾಮಿ ದೊಡ್ಡ ರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಸ್ವಾಮಿಯ ಹೂವಿನ ಪಲ್ಲಕ್ಕಿಗೆ ಗಂಗಾಪೂಜೆ ನೆರವೇರಿತು. ನಂತರ ದೇಸ್ಥಾನದಲ್ಲಿ ಮಹಾರುದ್ರಾಭಿಷೇಕ, ಅಖಂಡ ಭಜನೆ ಏರ್ಪಡಿಸಲಾಗಿತ್ತು.ಕೋಲಾಟ, ನಂದಿಧ್ವಜ, ಸೋಮನ ಕುಣಿತ ಮತ್ತು ಡೊಳ್ಳು, ಚಂಡೆ, ತಮಟೆ, ಉರುಮೆ ವಾದ್ಯಗಳೊಂದಿಗೆ ಬಂಡೆಬಸಪ್ಪ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.


ಹೂವಿನ ಹಾರ ಮತ್ತು ₹40,000ಕ್ಕೆ ಮುಕ್ತಿಬಾವುಟವನ್ನು ಹಾರಾಜು ಹಾಕಲಾಯಿತು. ನಂತರ ಸಂಜೆ 5.30ಕ್ಕೆ ದೊಡ್ಡ ರಥೋತ್ಸವ ಜರುಗಿತು. ಗ್ರಾಮದ ರಾಮಸ್ವಾಮಿ ಬಳಗದಿಂದ ರಾಮಾಯಣ ಪೌರಾಣಿಕ ಪ್ರದರ್ಶನ ನಡೆಯಿತು.



ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ.ಬಿಜೆಪಿ ಮುಖಂಡ ಕಾಲುವೆಹಳ್ಳಿ ಜಿ.ಪಿ.ಜಯಪಾಲಯ್ಯ, ಕಾಂಗ್ರೆಸ್ ಮುಖಂಡ ಗೌಡರ ಶ್ರೀನಿವಾಸ್, ಕೆ.ಜಿ.ಪಾಲಣ್ಣ, ಗಾದ್ರಿಪಾಲಯ್ಯ, ಮಾಜಿ ತಾಪಂ ಸದಸ್ಯ ಶ್ರೀನಿವಾಸ್ .ಮಹಂತೇಶನಾಯ್ಕ ಇತರರಿದ್ದರು.
.
About The Author
Discover more from JANADHWANI NEWS
Subscribe to get the latest posts sent to your email.