ಮೊಳಕಾಲ್ಮೂರು ಡಿ.28ಧಾರ್ಮಿಕ ಪರಂಪರೆ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಕಾಳಜಿಗಳ ಪ್ರತಿರೂಪ ಈ ಕಾರ್ತಿಕರಥೋತ್ಸವಗಳು ಎಂದು ನಿಕಟ ಪೂರ್ವ ತಹಸಿದ್ದಾರೆ ಎನ್ ರಘುಮೂರ್ತಿ ಹೇಳಿದರು





ಅವರು ಇಂದು ಮೊಳಕಾಲ್ಮೂರು ತಾಲೂಕಿನ ತುಮಕೂರ್ ಹಳ್ಳಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಅವರ ಕಾರ್ತಿಕೋತ್ಸವದ ಅಂಗವಾದ ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಹಿಂದೂ ಮತ್ತು ಧಾರ್ಮಿಕ ಪರಂಪರೆ ಉಳಿಯಬೇಕಾದಲ್ಲಿ ಪ್ರಸ್ತುತ ಸನಾತನ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಬೇಕು ಇದರಲ್ಲಿ ಯುವ ಪೀಳಿಗೆಯ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಪ್ರತಿಯೊಂದು ವೃತ್ತಿಪರತೆಯಲ್ಲಿ ತಾಂತ್ರಿಕತೆಯ ಜೊತೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮನೋಭಾವನೆಗಳನ್ನು ಉಳಿಸಿ ಬೆಳೆಸಬೇಕು ಈಗಾದಲ್ಲಿ ಶಾಂತಿ ಮತ್ತು ಸಮೃದ್ಧಿ ಮನೆ ಮಾಡುತ್ತದೆ ಸಾಂಸ್ಕೃತಿಕ ಮೌಲ್ಯ ಇತಿಹಾಸ ಮತ್ತು ಕಲೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಧಾರ್ಮಿಕ ಮೌಲ್ಯವನ್ನು ಪ್ರತಿನಿಧಿಸಿ ಭಕ್ತರ ಸಮೂಹಕ್ಕೆ ಆಧ್ಯಾತ್ಮಿಕ ಕೇಂದ್ರಗಳಾಗುತ್ತ
ಇಂತಹ ಸತ್ಕಾರ್ಯಗಳು ಕಾರ್ತಿಕ ರಥೋತ್ಸವಗಳ ಮೂಲಕ ಸಮಾಜದಲ್ಲಿ ನಿರಂತರವಾಗಿ ನಡೆಯಲಿ ಎಂದು ಹೇಳಿದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದಂತ ಗೋಪಾಲಪ್ಪ ಹಾನಗಲ್ ರಾಮಕೃಷ್ಣಪ್ಪ ಎಚ್ಎಎಲ್ ಪಾಪಣ್ಣ ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.