ಹಿರಿಯೂರು :
ಬೀದರ್–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಮೇಲೆ ಇಂದು ಮಧ್ಯಾಹ್ನ ಅಶೋಕ ಲೈಲ್ಯಾಂಡ್ ಲಾರಿ ಮತ್ತು ಇನ್ನೊಂದು ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿರುವ ಘಟನೆ ಸ್ಥಳೀಯರಲ್ಲಿ ಅಂಜಿಕೆ ಮೂಡಿಸಿದೆ.



ಹೊಸರಸ್ತೆ ಕಾಮಗಾರಿ ಪೂರ್ಣಗೊಂಡಿರುವ ಈ ಮಾರ್ಗದಲ್ಲಿ ಕಳೆದ ಕೆಲವು ದಿನಗಳಿಂದ ಅಪಘಾತಗಳು ನಿರಂತರವಾಗಿ ಹೆಚ್ಚುತ್ತಿವೆ. ಅಪಘಾತ ಸಂಭವಿಸಿದ ಭಾಗದಲ್ಲಿತಿರುವು ಇರುವ ಕುರಿತು ಯಾವುದೇ ಸೂಚನಾ ಫಲಕವಿಲ್ಲ. ಸ್ಪೀಡ್ ಬ್ರೇಕರ್ ಇಲ್ಲ ವೇಗ ನಿಯಂತ್ರಣಕ್ಕೆ ಅಗತ್ಯವಾದ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ.
ಇದರಿಂದ ವಾಹನಗಳು ವೇಗದಲ್ಲಿ ಸಂಚರಿಸುವಾಗ ನಿಯಂತ್ರಣ ತಪ್ಪುವ ಘಟನೆಗಳು ಹೆಚ್ಚಾಗುತ್ತಿವೆ ಎಂಬುದಾಗಿ ಸ್ಥಳೀಯರು ಆತಂಕಗೊಂಡಿದ್ದು, ಹಿಂಡಸ್ ಕಟ್ಟೆ ಕಣಿವೆಮಾರಮ್ಮ ದೇವಸ್ಥಾನದ ಹತ್ತಿರ ನಡೆದ ಈ ಅಪಘಾತದ ನಂತರ ಹೆದ್ದಾರಿ ಮೇಲಿನ ಸುರಕ್ಷತಾ ವ್ಯವಸ್ಥೆಗಳ ಕೊರತೆ ಮತ್ತೆ ಚರ್ಚೆಗೆ ಬಂದಿವೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.